ಮಕ್ಕಳನ್ನೇ ಸಂಪತ್ತಾಗಿಸಿ: ಸರ್ವರ್
ಹೊಸಪೇಟೆ: ಮಕ್ಕಳಿಗಾಗಿ ಸಂಪತ್ತು ಮಾಡಬೇಡಿ, ಮಕ್ಕಳನ್ನೇ ಸಂಪತ್ತಾಗಿಸಿ ಎಂದು ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿ ಮಹ್ಮದ್ ಸರ್ವರ್ ಹೇಳಿದರು.
ನಗರದ ಸ್ಲಂ ಕಚೇರಿಯಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ, ಸಮಾನ ಮಕ್ಕಳ ಮಂಟಪ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ, ಬಾಲಕಾಮಿಕ, ಜೆ.ಜೆ. ಕಾಯ್ದೆಗಳ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಾಲ್ಯವಿವಾಹ, ಬಾಲಕಾರ್ಮಿಕ, ಬಾಲನ್ಯಾಯ ಕಾಯ್ದೆ ಮಕ್ಕಳಿಗೆ ಅತಿ ಪ್ರಮುಖವಾಗಿ ಬೇಕಾಗುತ್ತವೆ. ಮಕ್ಕಳಿಗೆ ಶಿಕ್ಷಣ ನೀಡಿ ಜಾಗೃತಿ ಮೂಡಿಸಬೇಕು. ಇಂಥ ಕಾರ್ಯಕ್ರಮ ಮಕ್ಕಳಲ್ಲಿ ಧೈರ್ಯ ತುಂಬುತ್ತದೆ. ಮಕ್ಕಳು ಬಾಲ್ಯವಿವಾಹದಿಂದ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇಂಥ ಸಂದರ್ಭಗಳು ಕಂಡುಬಂದಲ್ಲಿ ನಮ್ಮ ಇಲಾಖೆ ಸಹಾಯವಾಣಿಗೆ ಕರೆ ಮಾಡಬೇಕು. ತಂದೆ-ತಾಯಿ ಇಲ್ಲದ ಮಕ್ಕಳ ಶಿಕ್ಷಣಕ್ಕಾಗಿಯೇ ಸಂಪೂರ್ಣ ವ್ಯವಸ್ಥೆ ಕಲ್ಪಿಸಿ ರು. 1 ಸಾವಿರ ವರೆಗೂ ಸಹಾಯಧನ ನೀಡಲಾಗುತ್ತಿದೆ. ಅಂತಹ ಮಕ್ಕಳು ಕಂಡುಬಂದಲ್ಲಿ ಬಾಲಮಂದಿರ ಮತ್ತು ಬಾಲಕಿಯರ ಮಂದಿರದಲ್ಲಿ ದಾಖಲಾತಿ ಮಾಡಿಕೊಳ್ಳುತ್ತೇವೆ. ಇಂತಹ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಶಿಕ್ಷಣ ನೀಡಲಾಗುತ್ತದೆ. ಬಾಲನ್ಯಾಯ ಕಾಯ್ದೆ ಮೂಲಕ ಪ್ರತಿ ಮಗುವಿನ ಸಮಸ್ಯೆಗೂ ಪರಿಹಾರವಿದೆ ಎಂದರು.
ಕಾನೂನಾತ್ಮಕವಾಗಿ ಮಕ್ಕಳಿಗೆ ಬದುಕನ್ನು ಸೃಷ್ಟಿಸುವ, ಚೈತನ್ಯ ತುಂಬಬೇಕು. ಮಕ್ಕಳು ಸಮಾಜದ ಆಸ್ತಿ. ಶಿಕ್ಷಣದಿಂದ ವಂಚಿತರಾದ ಮಕ್ಕಳು ಹೋಟೆಲ್, ಗ್ಯಾರೇಜ್, ರೈಲು ನಿಲ್ದಾಣಗಳಲ್ಲಿ ಕೆಲಸ ಮಾಡಲು ಇಟ್ಟುಕೊಂಡಿರುವ ಬಂಡವಾಳಶಾಹಿ ವರ್ಗದವರಿಗೆ ಕಾನೂನಾತ್ಮಕವಾಗಿ ದಂಡ, ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ತಿಳಿಸಿದರು.
ಡಾನ್ ಬಾಸ್ಕೋ ಸಂಸ್ಥೆ ಸಂಯೋಜಕ ಹೈದರ್ ಮಾತನಾಡಿ, ಮಕ್ಕಳು ನೈತಿಕ, ಸಾಮಾಜಿಕವಾಗಿ ಸಬಲವಾಗಬೇಕು. ಇದಕ್ಕೆ ಶಿಕ್ಷಣವೇ ಅವರಿಗೆ ಆಧಾರ. ಸಮಾಜದ ಪ್ರತಿ ಮಗುವಿಗೂ ತನ್ನ ಹಕ್ಕನ್ನು ಪಡೆಯಲು, ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಕ್ಕಳಿಗಾಗಿ 24 ತಾಸು ಕಾರ್ಯ ನಿರ್ವಹಿಸುವ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಬಹುದು ಎಂದರು.
ಸಮಾನ ಮಕ್ಕಳ ಮಂಟಪ ಸಂಯೋಜಕ ಕೆ. ವೆಂಕಟೇಶಲು, ಅಧ್ಯಕ್ಷ ಮೋಹನ್, ಕಾರ್ಯಕರ್ತರಾದ ಗದುಗಿನ ಗಿರೀಶ್, ವೆಂಕಮ್ಮ, ತಿಪ್ಪಮ್ಮ, ನಾಗಲಕ್ಷ್ಮೀ, ಹೊಸಪೇಟೆ ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಹುಲಿಗೆಮ್ಮ, ಮಕ್ಕಳ ಪ್ರೊಟೆಕ್ಷನ್ ಆಫೀಸರ್ ರಘುವರ್ಮ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

