ತಾಂತ್ರಿಕತೆ ಜೀವನದ ಅಂಗ: ಡಾ. ಜಯರಾಮನ್
ಪುತ್ತೂರು: ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು ಚಂದ್ರಲೋಕಕ್ಕೆ ಮನುಷ್ಯ ತಲುಪಲು ಸಾಧ್ಯವಾಗಿದೆ. ತಾಂತ್ರಿಕತೆಯು ಜೀವನದ ಅಂಗವಾಗಿ ಮಾರ್ಪಾಟುಗೊಂಡಿದೆ ಎಂದು ಇಸ್ರೋದ ಸಲಹೆಗಾರ ಹಾಗೂ ಎನ್‌ಆರ್‌ಎಸಿಸಿಯ ನಿವೃತ್ತ ನಿರ್ದೇಶಕ ಡಾ. ವಿ.ಜಯರಾಮನ್ ಹೇಳಿದ್ದಾರೆ.
ಮಂಗಳವಾರ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜ್ ವಠಾರದಲ್ಲಿ ನಡೆದ 'ಸೈನ್ಸಿಯಾ-2014' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿಸಿದ ವಿಷಯಕ್ಕಾಗಿ ಇತರ ರಾಷ್ಟ್ರಗಳನ್ನು ಅವಲಂಬಿಸಬೇಕಾಗಿತ್ತು. ಆದರೆ ಇಂದು ಭಾರತದಲ್ಲಿ ಸಾಕಷ್ಟು ಈ ವಿಚಾರದಲ್ಲಿ ಪ್ರಗತಿಯಾಗಿದ್ದು ಮುಂದಿನ ದಿನಗಳಲ್ಲಿ ಊಹಿಸಲೂ ಅಸಾಧ್ಯವಾಗುವಷ್ಟು ಬೆಳವಣಿಗೆಗಳಾವ ಸಾಧ್ಯತೆಗಳಿವೆ ಎಂದರು.
ಸಾವಿನ ಬಳಿಕವೂ ನೆನಪು: ಮಾನವನ ಮೆದುಳಿನ ಶಕ್ತಿಯನ್ನು ಪೆನ್‌ಡ್ರೈವ್‌ನಲ್ಲಿ ಅಳವಡಿಸಿ ಆತನ ಸಾವಿನ ಬಳಿಕ ಆತನ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳುವ ತಂತ್ರಜ್ಞಾನದ ದಿನಗಳು ಬರಲಿವೆ ಎಂದು ಅವರು ಭವಿಷ್ಯ ನುಡಿದರು.
ಅತಿಥಿಯಾಗಿ ಮಾತನಾಡಿದ ಇಸ್ರೋ ಸದಸ್ಯ ಮತ್ತು ಭಾರತ ಸರ್ಕಾರದ ನಿವೃತ್ತ ಕಾರ್ಯದರ್ಶಿವಿ.ವಿ. ಭಟ್, ವಿಜ್ಞಾನ ವಿಚಾರದಲ್ಲಿ ವಿದ್ಯಾರ್ಥಿಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸೈನ್ಸಿಯಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದೇ ವಿಚಾರದಲ್ಲಿ ಇನ್‌ಸ್ಪೇರ್ ಹೆಸರಿನಲ್ಲಿ 5 ದಿನಗಳ ಕಾರ್ಯಕ್ರಮ ನಡೆಸಲಾಗುತ್ತಿದ್ದು ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೆ ರು. 3500 ಅನುದಾನ ಸಿಗಲಿದೆ ಎಂದರು.
ವಿವೇಕಾನಂದ ಎಂಜಿನಿಯರಿಂಗ್ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ವಿಜ್ಞಾನಿ ಡಾ.ಎಸ್. ತ್ರಿಪಾಠಿ, ವಿವೇಕಾನಂದ ಕಾಲೇಜ್ ಆಡಳಿತ ಮಂಡಳಿ ಸದಸ್ಯ ರಾಧಾಕೃಷ್ಣ ಭಕ್ತ, ವಿಭಾಗ ಮುಖ್ಯಸ್ತ ಶ್ರೀಕೃಷ್ಣ ಶಾಸ್ತ್ರಿ ಇದ್ದರು.
ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಸ್ವಾಗತಿಸಿದರು. ಲತಾ ಶೆಟ್ಟಿ ಮತ್ಯುಶ್ಲಿ ಡಿ'ಸೋಜ ನಿರೂಪಿಸಿದರು. ಉದಯಶಂಕರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

