ಇಂದು ಸಭೆ
ನರಗುಂದ: ನರಗುಂದ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಪ್ರೊ. ಎಸ್.ಎನ್. ಕಾತರಕಿ ನೇತೃತ್ವದಲ್ಲಿ ಏ. 3ರ ಸಂಜೆ 5 ಗಂಟೆಗೆ ಸುದ್ದಿ ಸಂಕ್ಷೇಪ ಪಟ್ಟಣದ ವಿವೇಕಾನಂದ ನಗರದ ಸಾಧು ಅಜ್ಜನ ರಸ್ತೆಯಲ್ಲಿರುವ ಬೀರಲಿಂಗೇಶ್ವರ ಮಳಿಗೆಯಲ್ಲಿ ಕಾತರಕಿಯವರ ಬೆಂಬಲಿಗರ ಸಭೆಯನ್ನು ಕರೆಯಲಾಗಿದೆ. ಕಾರಣ ಕಾತರಕಿಯವರ ಬೆಂಬಲಿಗರು ಪಾಲ್ಗೊಂಡು ಸಲಹೆ ಸೂಚನೆ ನೀಡುವಂತೆ ನ್ಯಾಯವಾದಿ ಜಿ.ಬಿ. ನೀಲರಡ್ಡಿ, ಅಶೋಕರಡ್ಡಿ ಹದಲಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಪುಣ್ಯಾರಾಧನೆ
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ವೀರಭದ್ರ ಶ್ರೀಗಳ 60ನೇ ಪುಣ್ಯಾರಾಧನೆ ಏ. 3ರ ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಅಭಿನವ ಗುರುಪ್ಪಯ್ಯ ಶ್ರೀ, ಚಿದಾನಂದ ಶ್ರೀ ಹಾಗೂ ಮುರನಾಳ ಮಠದ ಮಳೆರಾಜೇಂದ್ರ ಶ್ರೀ ವಹಿಸಲಿದ್ದು, ಪುಣ್ಯಾರಾಧನೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಕೀರ್ತನೆ ನಡೆಯಲಿದ್ದು, ಗ್ರಾಮದ ಗೆಳೆಯರ ಬಳಗ ವತಿಯಿಂದ ಮುಕ್ತ ವ್ಹಾಲಿಬಾಲ್ ಪಂದ್ಯಾವಳಿ ನಡೆಯಲಿವೆ ಎಂದು ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಕುಷ್ಠರೋಗ ಕಾಲೋನಿ, ರೆಹಮತ ನಗರ, ಕುಂಬೇಶ್ವರ ನಗರ, ಜನತಾ ಪ್ಲಾಟ್, ಅಂಬೇಡ್ಕರ್ ನಗರ, ಖಾನತೋಟ, ಮದ್ಲಿಯವರ ಲೈನ್, ಗುಡಿಯವರ ಲೈನ್ ಈ ಭಾಗಗಳಲ್ಲಿ ಬುಧವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

