ಗದಗ

ಸರ್ವರನ್ನೂ ಸಾಕ್ಷರರನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ

Published On :

ಗಜೇಂದ್ರಗಡ: ಮೌಲ್ಯಾಧಾರಿತ ಶಿಕ್ಷಣ ಸಂಪಾದಿಸಿ ಸಮುದಾಯದ ಸರ್ವರನ್ನೂ ಸಾಕ್ಷರರನ್ನಾಗಿಸುವ ಮಹತ್ವದ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಬೋಧನೆ ಕರಗತ ಮಾಡಿಕೊಂಡು ಮಕ್ಕಳಿಗೆ ಜ್ಞಾನಾರ್ಜನೆ ಮಾಡಿದಾಗ ಮಾತ್ರ ವೃತ್ತಿ ಜೀವನ ಸಾರ್ಥಕಗೊಳ್ಳುತ್ತದೆ ಎಂದು ಪ್ರಾ. ವಿ.ಎಸ್. ರಾಯನಗೌಡರ ಹೇಳಿದರು.  ಈಚೆಗೆ ಅವರು ಸ್ಥಳೀಯ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ನಡೆದ ನಿವೃತ್ತಿ ಹೊಂದಿದ ಹಿರಿಯ ಶಿಕ್ಷಕ ವಿ.ಎಫ್. ಕಾಳಗಿಯವರ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾಷಾ ಪ್ರಭುತ್ವ, ಸಚ್ಚಾರಿತ್ರ್ಯ ಗುಣಗಳು ಶಿಕ್ಷಕನಿಗೆ ಅತ್ಯವಶ್ಯಕ. ಕರ್ತವ್ಯ ನಿಷ್ಠೆ ಮೈಗೂಡಿಸಿಕೊಂಡು ಮಕ್ಕಳಿಗೆ ಬೋಧಿಸಿದಾಗ ವಿದ್ಯಾರ್ಥಿ ದೇಶದ ಸತ್ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದರು. ಮುಖ್ಯೋಪಾದ್ಯಾಯ ಆರ್.ಕೆ. ಮಾಳೋದೆ ಮಾತನಾಡಿ, ಶಿಕ್ಷಕರು ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಪಾಠ ಮಾಡುವತ್ತ ಗಮನಹರಿಸಬೇಕು. ಅವರಲ್ಲಿನ ಪ್ರತಿಭೆ ಹೊರಹಾಕಲು ಶ್ರಮಿಸಬೇಕು ಎಂದರು. ನಿವೃತ್ತಿ ಹೊಂದಿದ ಶಿಕ್ಷಕ ವಿ.ಎಫ್. ಕಾಳಗಿಯವರನ್ನು ಸಂಸ್ಥೆಯ ಹಾಗೂ ಶಿಕ್ಷಕ ವೃಂದದ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಭಾಕರನ್, ಎಸ್.ಎಸ್. ವಾಲಿ, ಎಂ.ಪಿ. ಕುಲಕರ್ಣಿ, ಕೆ.ಎಸ್. ವಸ್ತ್ರದ, ಬಿ.ವಿ. ಮುನವಳ್ಳಿ, ಎಸ್.ಕೆ. ಚಾಗರಿ, ಜಗದೀಶ ದುದ್ಗಿ, ಎಂ. ಲಕ್ಷ್ಮಿದೇವಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.