ಮಕ್ಕಳ ಶಿಕ್ಷಣಕ್ಕೆ ಅನ್ನದಾನ ಶ್ರೀಗಳ ಕೊಡುಗೆ ಅಪಾರ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 5
ಮುಂಡರಗಿಯಂತಹ ಪ್ರದೇಶದಲ್ಲಿ ಎಲ್ಕೆಜಿಯಿಂದ ಪಿಜಿವರೆಗೆ 30ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನ್ನದಾನೀಶ್ವರ ಶ್ರೀಗಳು ಅಕ್ಷರದಾನಿಗಳಾಗಿ ಬಹುದೊಡ್ಡ ಕಾರ್ಯ ಮಾಡುತ್ತಿದ್ದಾರೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಸಿ. ಬೋರಲಿಂಗಯ್ಯ ಹೇಳಿದರು.
ಅವರು ಗುರುವಾರ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಕೆ.ಆರ್. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಪಠ್ಯೇತರ ಚಟುವಟಿಕೆ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ನಾವು ಎಷ್ಟೇ ಉನ್ನತ ಹುದ್ದೆಗೆ ಹೋದರೂ ನಮ್ಮ ಮನೆ, ತಂದೆ, ತಾಯಿ, ನಮ್ಮ ಗ್ರಾಮ, ನಮ್ಮ ದೇಶ, ನಮ್ಮ ನಾಡು, ನಮ್ಮ ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಯೋಚಿಸುವುದು ಅವಶ್ಯ. ಭಾರತ ಇಂದಿಗೂ ಶೇ. 60ರಷ್ಟು ಹಳ್ಳಿಗಳನ್ನು ಹೊಂದಿರುವ ದೇಶ. ಆದರೆ, ಹಳ್ಳಿಗಳು ಸಹ ಇಂದು ಕೃಷಿಯಿಂದ ದೂರ ಹೋಗುತ್ತಿವೆ. ರೈತರು ಪರಾಧೀನರಾಗುವ ಸ್ಥಿತಿ ತಲೆದೂರಲಿದೆ. 30 ವರ್ಷದ ಹಿಂದೆ ಶೇ. 44 ರಷ್ಟಿದ್ದ ಅರಣ್ಯ ಪ್ರದೇಶ ಇಂದು ಶೇ. 18ಕ್ಕೆ ಇಳಿದಿದೆ. ಇದಕ್ಕೆಲ್ಲ ನಮ್ಮನ್ನಾಳುವವರು, ನಮ್ಮಜನ, ನಮ್ಮ ವ್ಯವಸ್ಥೆಯೇ ಪ್ರಮುಖ ಕಾರಣವಾಗಿದೆ. ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಬೇಕು ಎಂದರು.
ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಬಿ. ಡಂಬಳಮಠ ಮಾತನಾಡಿದರು. ನಾಡೋಜ, ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕಾಂತರಾಜ ಹಿರೇಮಠ, ಪ್ರೊ. ಎಂ.ಜಿ. ಗಚ್ಚಣ್ಣವರ, ಡಾ. ಎಂ.ಬಿ. ಬೆಳವಟಗಿಮಠ, ವಿ.ಟಿ. ಬಡಿಗೇರ, ಶಂಕ್ರಪ್ಪ ಭಾರಿಕಾಯಿ, ಆರ್.ಆರ್. ಹೆಗ್ಗಡಾಳ, ಎಸ್.ಬಿ. ಹಿರೇಮಠ, ಶಿವಪ್ಪ ಅಂಕದ, ಬಸಪ್ಪ ಬನ್ನಿಕೊಪ್ಪ, ಬಿ.ಕೆ. ಪಾಟೀಲ, ಎ.ಬಿ. ಹಿರೇಮಠ ಉಪಸ್ಥಿತರಿದ್ದರು. ಪ್ರಾ. ಎಸ್.ಬಿ.ಕೆ. ಗೌಡರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಆರ್.ಎಲ್. ಪೊಲೀಸ್ಪಾಟೀಲ ನಿರೂಪಿಸಿ, ಡಾ. ಬಿ.ಜಿ. ಜವಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

