8 ಪಿಎಸ್ಐ ವರ್ಗಾವಣೆ
ಗದಗ: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಹಾಗೂ 3 ವರ್ಷಗಳಿಗಿಂತ ಹೆಚ್ಚು ಕಾಲ ಜಿಲ್ಲೆಯಲ್ಲಿಯೇ ಸೇವೆ ಮಾಡಿದ 8 ಪಿಎಸ್ಐ ಅವರನ್ನು ವರ್ಗಾವಣೆ ಮಾಡಿ ಐಜಿಪಿ ಕಚೇರಿ ಆದೇಶ ಹೊರಡಿಸಿದೆ. ಲಕ್ಷ್ಮೇಶ್ವರ ಪಿಎಸ್ಐ ಎಸ್.ಬಿ. ಮುಚ್ಚಂಡಿ ಚಿಕ್ಕೋಡಿಗೆ, ಲಕ್ಷ್ಮೇಶ್ವರ ಕ್ರೈಮ್ ಪಿಎಸ್ಐ ದೊಡ್ಡಮನಿ ನರಗುಂದ ಕ್ರೈಮ್ ವಿಭಾಗಕ್ಕೆ, ಬೆಟಗೇರಿ ಬಡಾವಣೆ ಠಾಣೆ ಪಿಎಸ್ಐ ಆರ್.ಎಫ್. ದೇಸಾಯಿ ಬಂಕಾಪುರ ಠಾಣೆಗೆ, ಟ್ರಾಫಿಕ್ ಪಿಎಸ್ಐ ಎನ್.ವಿ. ಬೇಲೂರ ಬ್ಯಾಡಗಿ ಠಾಣೆಗೆ, ಗಜೇಂದ್ರಗಡ ಕ್ರೈಮ್ ಪಿಎಸ್ಐ ವೈ.ವಿ. ಚವಡಿ ರಾಣೆಬೆನ್ನೂರು ಸಂಚಾರಿ ಠಾಣೆಗೆ, ನರೇಗಲ್ಲ ಪಿಎಸ್ಐ ಎಸ್.ಎನ್. ಅಂಬಿಗೇರ ಮುದ್ದೇಬಿಹಾಳಕ್ಕೆ, ಬೆಟಗೇರಿ ಠಾಣೆಯ ಎಂ.ಬಿ. ಮೊಕಾಶಿ ಗರಗ ಠಾಣೆಗೆ, ನರಗುಂದ ಕ್ರೈಮ್ ಪಿಎಸ್ಐ ಎನ್.ಎಸ್. ನಾಯಕ ಅವರನ್ನು ಬೆಳಗಾವಿ ಸಂಚಾರಿ ಠಾಣೆಗೆ ವರ್ಗಾವಣೆ ಮಾಡಿ ಇಲಾಖೆ ಆದೇಶ ಹೊರಡಿಸಿದೆ.
ಇಂದು ಬಿಜೆಪಿ ಸಭೆ
ಮುಂಡರಗಿ: ಏ. 7ರಂದು ಬೆಳಗ್ಗೆ 11 ಗಂಟೆಗೆ ಶಿರಹಟ್ಟಿ ತಾಲೂಕಿನ ವರವಿ ಮೌನೇಶ್ವರ ಕ್ಷೇತ್ರದ ಕಲ್ಯಾಣ ಕೇಂದ್ರದಲ್ಲಿ ಶಿರಹಟ್ಟಿ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ. ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಸಚಿವ ಕಳಕಪ್ಪ ಬಂಡಿ, ಶಾಸಕ ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ ಸೇರಿದಂತೆ ಅನೇಕ ಮುಖಂಡರು ಆಗಮಿಸಲಿದ್ದು, ಮುಂಡರಗಿ ಹೋಬಳಿಯ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮುಂಡರಗಿ ಬಿಜೆಪಿ ಶಹರ ಘಟಕದ ಅಧ್ಯಕ್ಷ ರಜನೀಕಾಂತ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಹಾಲಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅಲ್ಲಿಯ ಫ್ರೆಂಡ್ಸ್ ಕ್ಲಬ್ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿದೆ. ಏ. 12ರಂದು ಬೆಳಗ್ಗೆ 10 ಗಂಟೆಗೆ ಗ್ರಾಮದ ಗೂಳಿ ಬಸವೇಶ್ವರ ನಗರದ ನಿಂಗಪ್ಪ ಅಳವಂಡಿ ಇವರ ಜಮೀನಿನಲ್ಲಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ ರು. 7001, ದ್ವಿತೀಯ ಬಹುಮಾನ 5001, ತೃತೀಯ ಬಹುಮಾನ ರು. 3001, ಚತುರ್ಥ ಬಹುಮಾನ ರು. 1501 ಹಾಗೂ ಆಕರ್ಷಕ ಬಹುಮಾನ ನೀಡಲಾಗುವುದು. ರು. 201 ಪ್ರವೇಶ ಫೀ ನಿಗದಿಪಡಿಸಲಾಗಿದೆ. ಆಸಕ್ತ ತಂಡಗಳು ಮೌನೇಶ-9663157977, ರಂಗಪ್ಪ ಜೊಂಡಿ 8105246360, ಮಂಜು ಆಲೂರ-8880470430, ಶರಣು-880221354, ಸದ್ದಾಂ ದೊಡ್ಡಮನಿ-8861652199 ಇಲ್ಲಿಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.
9ರಂದು ಉಚಿತ ನೇತ್ರ ತಪಾಸಣಾ ಶಿಬಿರ
ಮುಂಡರಗಿ: ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಗದಗ, ಡಾ. ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ವಿವೇಕ ಜಾಗೃತ ಬಳಗ ಮುಂಡರಗಿ, ಗ್ರಾಪಂ ಕೊರ್ಲಹಳ್ಳಿ, ಜಿಲ್ಲಾ ಆಯುಷ್ ಇಲಾಖೆ ಗದಗ, ಸುಜಲಾನ್ ಎನರ್ಜಿ ಲಿಮಿಟೆಡ್ ಕಪ್ಪತಗುಡ್ಡ, ತಾಲೂಕು ಆರೋಗ್ಯ ಅಧಿಕಾರಿಗಳು ಮುಂಡರಗಿ, ಔಷಧಿ ವ್ಯಾಪಾರಸ್ಥರ ಸಂಘ, ತ್ಯಾಗವೀರ ಶಿರಸಂಗಿ ಲಿಂಗರಾಜ ಸೇವಾ ಸಂಸ್ಥೆ, ಪಂಚವಟಿ ಪ್ರತಿಷ್ಠಾನ ಮತ್ತು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾರೋಗೇರಿ ಮತ್ತು ಕೊರ್ಲಹಳ್ಳಿ ಸಂಯುಕ್ತವಾಗಿ ಏ. 9ರಂದು ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನೋತ್ಸವದ ಅಂಗವಾಗಿ ತಾಲೂಕಿನ ಕೊರ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 14ನೇ ಬೃಹತ್ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಣ್ಣಿನ ತಪಾಸಣೆ ಮಾಡಿಕೊಳ್ಳಲು ಇಚ್ಛಿಸುವವರು ಡಾ. ಪಿ.ಬಿ. ಹಿರೇಗೌಡರ-9481486606, ನಾಗೇಶ ಹುಬ್ಬಳ್ಳಿ-9448783914, ಜಗನ್ನಾಥ ಅಳವಂಡಿ-9886604496 ಇಲ್ಲಿಗೆ ಸಂಪರ್ಕಿಸಿ ತಮ್ಮ ಹೆಸರುಗಳನ್ನು ನೋಂದಾಯಿಸುವಂತೆ ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಮುಂಡರಗಿ: ಮುಂಡರಗಿ ತಾಲೂಕು ಕೆಜೆಪಿ ಘಟಕದ ಪಧಾಧಿಕಾರಿಗಳ ಆಯ್ಕೆಯನ್ನು ಈಚೆಗೆ ನೆರವೇರಿಸಲಾಗಿದೆ. ತಾಲೂಕು ಅಧ್ಯಕ್ಷರಾಗಿ ಕಾಂತರಾಜ ಹಿರೇಮಠ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ಪ ಪುರದ, ಉಪಾಧ್ಯಕ್ಷರಾಗಿ ಅಶೋಕ ಮೇಗಳಮನಿ, ಫಕೀರಪ್ಪ ಅಂಗಡಿ, ಬಸವರಾಜ ನವಲಗುಂದ ನೇಮಕಗೊಂಡಿದ್ದಾರೆ. ಶಹರ ಘಟಕದ ಅಧ್ಯಕ್ಷರಾಗಿ ಲಿಂಗಪ್ಪ ಉಪ್ಪಾರ, ಉಪಾಧ್ಯಕ್ಷರಾಗಿ ದುರಗಪ್ಪ ಉಪ್ಪಾರ, ಪ್ರಧಾನ ಕಾರ್ಯದರ್ಶಿಯಾಗಿ ಪರಮೇಶ ಕಣಗಿನಹಾಳ ನೇಮಕಗೊಂಡಿದ್ದಾರೆ. ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಶಾಂತಾ ಪೂಜಾರ, ಉಪಾಧ್ಯಕ್ಷರಾಗಿ ಪಾರವ್ವ ಉಪ್ಪಾರ, ಪ್ರಧಾನ ಕಾರ್ಯದರ್ಶಿಯಾಗಿ ಲತಾ ಕುಲಕರ್ಣಿ ಮತ್ತು ತಾಲೂಕು ಅಲ್ಪಸಂಖ್ಯಾತ ಘಟಕಕ್ಕೆ ಅಧ್ಯಕ್ಷರಾಗಿ ಮಹಬೂಬಸಾಬ ತಳಗಡೆ, ಉಪಾಧ್ಯಕ್ಷರಾಗಿ ಮೋದಿನಸಾಬ ವಡ್ಡಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾನಸಾಬ ಸಾರಮೋರನಹಳ್ಳಿ ನೇಮಕಗೊಂಡಿದ್ದಾರೆ. ತಾಲೂಕು ಯುವ ಘಟಕಕ್ಕೆ ಅಧ್ಯಕ್ಷರಾಗಿ ಫಕ್ಕೀರಶೆಟ್ಟಿ ಶೆಟ್ಟರ, ಉಪಾಧ್ಯಕ್ಷರಾಗಿ ಬೀರಪ್ಪ ಮಲ್ಲಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಬೆನಕರಾಜ ಪೂಜಾರ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

