ಆದರ್ಶಗಳು ಮಾಯ: ಪ್ರೊ.ತೋಡಕರ ವಿಷಾದ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಏ. 7
ಶಿಕ್ಷಿತರು ಹಣದ ವ್ಯಾಮೋಹಕ್ಕೆ ಒಳಗಾಗಿ ಪ್ರೀತಿ, ಆತ್ಮೀಯತೆ ಹಾಗೂ ವಿಶ್ವಾಸದಂತಹ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಆದರ್ಶತ್ವ ಕಡಿಮೆಯಾಗುತ್ತಿದೆ ಎಂದು ಧಾರವಾಡದ ಹಿರೇಮಲ್ಲೂರ್ ಈಶ್ವರನ್ ವಿಜ್ಞಾನ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ ತೋಡಕರ ಹೇಳಿದರು.
ಸ್ಥಳಿಯ ಮರಿಯಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2012-13ನೇ ಸಾಲಿನ ವಿವಿಧ ಒಕ್ಕೂಟಗಳ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಯುವಪೀಳಿಗೆಯಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ಸಾರ್ವಜನಿಕ ಹಿತಾಸಕ್ತಿ ಬಯಸುವವರು ತುಂಬಾ ವಿರಳವಾಗಿದ್ದಾರೆ. ತಮ್ಮತನ ಕಳೆದುಕೊಂಡು ಬದುಕುವಂಥ ವ್ಯವಸ್ಥೆ ನಿರ್ಮಾಣವಾಗಿದೆ.
ಇದಕ್ಕೆಲ್ಲ ಮೂಲ ಕಾರಣ ಮಾನಸಿಕ ಒತ್ತಡ. ಹಣದ ಹಿಂದೆ ಬೆನ್ನು ಹತ್ತಿ ಮಾನಸಿಕ ಸ್ಥಿತಿತ್ವವನ್ನು ಕಳೆದುಕೊಂಡು ಬದುಕುವುದಕ್ಕಿಂತ ಪ್ರೀತಿ ವಿಶ್ವಾಸದಿಂದ ಹೃದಯ ವೈಶಾಲ್ಯಗೊಳಿಸಿ ಸರ್ವರೂ ನಮ್ಮವರೇ. ದುಡ್ಡು ಒಂದೇ ಮನುಷ್ಯನ ಜೀವಾಳವಲ್ಲ. ಕೇವಲ ದುಡ್ಡಿನ ಬೆನ್ನು ಹತ್ತದೇ ಅದನ್ನು ಮೀರಿದ ಶ್ರೀಮಂತಿಕೆ ಹೇರಳವಾಗಿರುವ ವಿಚಾರ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಗಂಗಾಧರ ಗುಮ್ಮಗೋಳಮಠ ಮಾತನಾಡಿದರು. ವೀರಪ್ಪ ಕುಂಬಾರ ಹಾಗೂ ಗುರುಸಿದ್ದಮ್ಮ ಕುಂಬಾರ ದಂಪತಿ ಮಹಾವಿದ್ಯಾಲಯಕ್ಕೆ ಪುಸ್ತಕಗಳನ್ನು ದಾನ ನೀಡಿದರು.
ಕಾಲೇಜಿನ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಲತಾ ಕಿಲ್ಲೇದಾರ, ಕೆ.ಆರ್. ಪಾಟೀಲ, ಘನಶ್ಯಾಮ ಜೋಶಿ, ಈ.ಆರ್. ಲಗಳೂರ, ವೀರಪ್ಪ ಕುಂಬಾರ, ಪಪಂ ಮಾಜಿ ಸದಸ್ಯೆ ಗುರುಸಿದ್ದಮ್ಮ ಕುಂಬಾರ ಉಪಸ್ಥಿತರಿದ್ದರು. ಉಪನ್ಯಾಸಕ ಘನಶ್ಯಾಮ ಜೋಶಿ ಸ್ವಾಗತಿಸಿದರು. ಶೋಭಾ ಎನ್. ನಿರೂಪಿಸಿದರು. ಡಾ.ಹನುಮಗೌಡ ಸಿ. ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

