ಶಾಸಕ ಲಮಾಣಿ ಬಹಿರಂಗ ಪ್ರಚಾರ
ಲಕ್ಷ್ಮೇಶ್ವರ: ಪಟ್ಟಣದ ವೀರಗಂಗಾಧರ ನಗರದಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುವ ಮೂಲಕ ಶಾಸಕ ರಾಮಣ್ಣ ಲಮಾಣಿ ಶನಿವಾರ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಕೈಗೊಂಡರು. ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ. 60 ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ಮಾಡದ ಸಾಧನೆಯನ್ನು ನಾವು ಮಾಡಿದ್ದೇವೆ ಎಂದರು.
ಶಿರಹಟ್ಟಿ ತಾಲೂಕಿನಲ್ಲಿ 8 ಮೇಲ್ಸೇತುವೆ ಕಟ್ಟಿದ್ದು, 30ಕ್ಕೂ ಹೆಚ್ಚು ಬಾಂದಾರ ನಿರ್ಮಿಸಿದ್ದು, 10ಕ್ಕೂ ಹೆಚ್ಚು ದೊಡ್ಡ ಕೆರೆಗಳ ಹೂಳೆತ್ತುವ ಕಾರ್ಯ ಮಾಡಿದ್ದೇವೆ. ಕ್ಷೇತ್ರದ ಹಲವು ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿ, ಸರ್ವಋತು ರಸ್ತೆಗಳನ್ನಾಗಿ ಮಾಡಿದ್ದು ನಮ್ಮ ಸರ್ಕಾರದ ಸಾಧನೆ. ಇನ್ನು ಸಂಧ್ಯಾ ಸುರಕ್ಷಾ, ಆರೋಗ್ಯ ರಕ್ಷಾ, ಸಾವಯುವ ಕೃಷಿಗಾಗಿ ರು. 10 ಸಾವಿರ ಧನಸಹಾಯ, ರು. 25 ಸಾವಿರ ವರೆಗಿನ ರೈತರ ಸಾಲ ಮನ್ನಾ, ಮಡಿಲು ಕಿಟ್, ಹಾಗೂ ಭಾಗ್ಯಲಕ್ಷ್ಮೀ ಬಾಂಡ್ ಮುಂತಾದ ಯೋಜನೆಗಳ ಮೂಲಕ ಜನರ ಕಷ್ಟಗಳನ್ನು ಬಿಜೆಪಿ ಸರ್ಕಾರ ದೂರ ಮಾಡಿದೆ ಎಂದರು.
ಮುಖಂಡರಾದ ಬಸವರಾಜ ಹತ್ತಿಕಾಳ, ಚೆಂಬಣ್ಣ ಬಾಳಿಕಾಯಿ, ಸಿದ್ದನಗೌಡ ಬೊಳ್ಳಳ್ಳಿ, ನೀಲಪ್ಪ ಕರ್ಜಕ್ಕಣ್ಣವರ, ನಿಂಗಪ್ಪ ಬನ್ನಿ, ನಾಗರಾಜ ಚಿಂಚಲಿ, ಉಮೇಶ ಬೆಳವಿಗಿ, ತಾವರೆಪ್ಪ ಲಮಾಣಿ, ಶುಕುರ್ ನಾಲಬಂದ್, ಜಿಲಾನಿ ನಾಲಬಂದ್, ಖಾದರಭಾಷಾ ಚೋಪದಾರ, ಮುಸ್ತಾಕ ಗುತ್ತಲ, ಪ್ರಕಾಶ ಮಾಗನೂರ, ಇಮ್ರಾನ್ ಹೆಸರೂರ, ಮಹೇಶ ಕರೆಯತ್ತಿನ, ಗಂಗು ಅಂಕಲಿ, ರಾಘವೇಂದ್ರ ಕರೆಯತ್ತಿನ, ಆನಂದ ಬೆಲ್ಲದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

