ಗದಗ

ಅನರ್ಹರಿಗೆ ಮತ ಚೀಟಿ: ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ರೋಣ, ಏ. 10
ಅರ್ಹರಲ್ಲದವರ ಹೆಸರಿನಲ್ಲಿ ಮತ ಚೀಟಿ ತಯಾರಿಸುತ್ತಿದ್ದು, ಈ ಅಕ್ರಮ ಕಾರ್ಯ ತಡೆದು, ಚುನಾವಣಾ ಸಿಬ್ಬಂದಿ ಆರ್.ಎನ್. ಜೋಶಿ ಅವರನ್ನು ಅಮಾನತು ಮಾಡಬೇಕು. ಮತ ಚೀಟಿ ಅಕ್ರಮ ತಯಾರಿಕೆಯಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಂಗಳವಾರ ರಾತ್ರಿ ಪಟ್ಟಣದಲ್ಲಿನ ಇಕೆಫೆ ಕಂಪ್ಯೂಟರ್ ಕೇಂದ್ರಕ್ಕೆ ನುಗ್ಗಿ ಮತ ಚೀಟಿಯಲ್ಲಿ ಅಕ್ರಮ ಮಾಡುತ್ತಿರುವ ಚುನಾವಣೆ ಇಲಾಖೆ ಸಿಬ್ಬಂದಿ ಮತ್ತು ಆಪರೇಟರ್‌ಗಳನ್ನು ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡಿದ್ದರು. ಕಂಪ್ಯೂಟರ್ ಕೇಂದ್ರವನ್ನು ಸೀಜ್ ಮಾಡಲಾಗಿತ್ತು. ತಾಲೂಕು ಆಡಳಿತ ಚುನಾವಣಾ ಗುರುತಿನ ಚೀಟಿಯನ್ನು ತಮ್ಮ ಕಚೇರಿಯಲ್ಲಿ ತಯಾರಿಸದೇ ತಾಲೂಕಿನ ಗಜೇಂದ್ರಗಡ, ನರೇಗಲ್ ಮತ್ತು ರೋಣ ಪಟ್ಟಣದ ಕೆಲವು ಖಾಸಗಿ ಕಂಪ್ಯೂಟರ್ ಕೇಂದ್ರಗಳ ಮೂಲಕ ತಯಾರಿಸುತ್ತಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಕೇಲವು ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿ ಸಿಕ್ಕು ಅಧಿಕಾರಿಗಳು ಅವರು ಹೇಳಿದಂತೆ ವರ್ತಿಸುತ್ತಿದ್ದಾರೆ. ಈಗಾಲೇ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಕಾರ್ಡ್‌ಗಳನ್ನು ತಯಾರಿಸಿದ್ದಾರೆ. ಅಲ್ಲದೇ ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಅಲ್ಪಸಂಖ್ಯಾತರ ಚೀಟಿಗಳನ್ನು ಡಿಲೀಟ್ ಮಾಡಲಾಗಿದೆ. ಈ ಕುರಿತು ಕಂಪ್ಯೂಟರ್ ಕೇಂದ್ರದ ವ್ಯಕ್ತಿಯನ್ನು ಕೇಳಿದರೆ ಅಧಿಕಾರಿಗಳೇ ಈ ರೀತಿ ಮಾಡಲು ಹೇಳಿದ್ದಾರೆ ಎನ್ನುತ್ತಾನೆ ಎಂದು ಆರೋಪಿಸಿದರು.
ಈಗಾಗಲೇ 5 ಸಾವಿರದಷ್ಟು ನಕಲಿ ಮತ ಚೀಟಿಗಳನ್ನು ವಯೋವುತಿ ಹೊಂದದ ಬೇನಾಮಿ ವ್ಯಕ್ತಿಗಳ ಹೇಸರಿನಲ್ಲಿ ತಯಾರಿಸಿದ್ದಾರೆ. ಸಾಕಷ್ಟು ಅಲ್ಪ ಸಂಖ್ಯಾತರ ಮತಗಳನ್ನು ರದ್ದು (ಡಿಲೀಟ್) ಮಾಡಿದ್ದಾರೆ. ಇದಕ್ಕೆ ಪ್ರಮುಖ ವ್ಯಕ್ತಿಗಳೊಂದಿಗೆ ಕೈಜೋಡಿಸಿ ಈ ಕೃತ್ಯ ಎಸಗಿರುವ ಚುನಾವಣಾ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಈಗಾಗಲೇ ಎಷ್ಟು ಅರ್ಜಿಗಳು ಬಂದಿವೆ. ಅದರಲ್ಲಿ ಎಷ್ಟು ಕಾರ್ಡ್ ತಯಾರಿಸಲಾಗಿದೆ. ಎಂಬುದರ ಕುರಿತು ಕೂಡಲೇ ಮಾಹಿತಿ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.