ಸೃಜನಶೀಲ ನಾಯಕನನ್ನು ಆಯ್ಕೆಮಾಡಿ
ನರೇಗಲ್ಲ: ರೋಣ ವಿಧಾನಸಭಾ ಮತಕ್ಷೇತ್ರದ ಎಲ್ಲ ಮತದಾರ ಬಾಂಧವರು ಈ ಬಾರಿಯ ಚುನಾವಣೆಯಲ್ಲಿ ಸೃಜನಶೀಲ, ಉತ್ತಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆಂದು ಸ್ಥಳೀಯ ಯುವ ಮುಖಂಡ ಅಂದಾನಗೌಡ ಲಕ್ಕನಗೌಡ್ರ ಹೇಳಿದರು. ಅವರು ಭಾನುವಾರ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರ ಹಿತ ಕಾಯುವುದೇ ನಾಯಕರ ಮೂಲ ಧ್ಯೇಯವಾದಾಗ ಕ್ಷೇತ್ರದ ಅಭಿವೃದ್ಧಿಯಾಗಲು ಸಾಧ್ಯ. ನಮ್ಮ ನಾಯಕ ಹೇಮಗಿರೀಶ ಹಾವಿನಾಳ ಮತದಾರರಿಗೆ ಉತ್ತಮ ಕೆಲಸ ಮಾಡಿ ತೋರಿಸಲಿದ್ದಾರೆಂದರು. ರೋಣ ಮತಕ್ಷೇತ್ರದ ನಿಯೋಜಿತ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಜನತೆ ಬೇಸತ್ತಿದ್ದಾರೆ. ಮುಂಬರುವ ವಿದಾನಸಭಾ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಬೆಂಬಲಿಸಲಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಅಸಾಧ್ಯವೆಂದು ಜನತೆಗೆ ಮನವರಿಕೆಯಾಗಿದೆ. ಜೆಡಿಸ್ ತತ್ವ, ಸಿದ್ಧಾಂತ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಕೇವಲ 20 ತಿಂಗಳು ಆಡಳಿತ ವೈಖರಿಗೆ ಸಾರ್ವಜನಿಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಎಂದರು. ತಾಲೂಕು ಅಧ್ಯಕ್ಷ ರಾಮಣ್ಣ ಸಕ್ರೋಜಿ ಮುಂತಾದವರು ಮಾತನಾಡಿದರು. ಬಸವರಾಜ ಹಡಪದ, ಗಣಿಸಾಬ ಕುದರಿ, ವಿರುಪಾಕ್ಷ ಹಕ್ಕಿ, ರವಿ ದೇವೆಂದ್ರ ಹಡಪದ, ಶರಣಪ್ಪ ಬಳ್ಳಾರಿ, ಸುರೇಶ ಕಳಕೊಣ್ಣವರ, ಹನುಮೇಶ ಹಿರೇಗೌಡರ, ಜಿ. ವಡ್ಡಟ್ಟಿ, ಅಂದಪ್ಪ ಇಂಬಾರ, ರವಿ ಬಿಷ್ಟಕ್ಕನವರ, ಗುಡದಪ್ಪ ಗೋಡಿ, ವಿನಯ ಕಣವಿ, ಪಾಂಡುರಂಗ ಹಡಪದ, ಶೇಖಪ್ಪ ಕ್ಯಾಡದ ಕಾರ್ಯಕರ್ತರು ಭಾಗವಹಿಸಿದ್ದರು. ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

