ಗದಗ

ಇಂದು ತೇರಿನ ಗಾಲಿ ಪೂಜೆ

Published On :

ಗದಗ: ಉತ್ತರ ಕರ್ನಾಟಕದಲ್ಲಿ ಐತಿಹಾಸಿಕ ಮತ್ತು ಪುರಾತನವಾದ ಸುಮಾರು 400 ವರ್ಷಗಳಿಂದ ಸಾಗಿಬಂದ ಜ. ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವವು ಏ. 24 ರಿಂದ 27ರ ವರೆಗೆ ಜರುಗಲಿದೆ. ಜಾತ್ರೆ ನಿಮಿತ್ತ ತೇರಿನ ಗಾಲಿ ಪೂಜಾ ಕಾರ್ಯಕ್ರಮವು ಏ. 11ರ ಸಂಜೆ 6.30 ಗಂಟೆಗೆ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಸನ್ನಿಧಿಯಲ್ಲಿ ನೆರವೇರುವುದು. ಸ್ವಾಮಿ ಸಿದ್ಧಲಿಂಗೇಶ್ವರರ ಭಕ್ತರು, ಶ್ರೀಮಠದ ಅಭಿಮಾನಿಗಳು, ಜಾತ್ರಾ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸರ್ವಸದ್ಭಕ್ತರು ತಪ್ಪದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಚೆಟ್ಟಿಯವರು ಹಾಗೂ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಇಂದು ಶಕ್ತಿ ಪ್ರದರ್ಶನ
ಹೊಳೆಆಲೂರ:
ಇಲ್ಲಿನ ಶ್ರೀ ಕಲಾ ರಸಿಕ ಮಿತ್ರಮಂಡಳಿ (ರಿ) ಉದ್ಘಾಟನಾ ಸಮಾರಂಭ ಮತ್ತು ಯುಗಾದಿ ಹಬ್ಬದ ಅಂಗವಾಗಿ ಶಕ್ತಿ ಪ್ರದರ್ಶನ ಕಾರ್ಯಕ್ರಮ ಏ.11ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ನಡೆಯಲಿದೆ. ಸಾನ್ನಿಧ್ಯವನ್ನು ಯಚ್ಚರಸ್ವಾಮಿಗಳು, ಅಧ್ಯಕ್ಷತೆಯನ್ನು ವೈ.ವಿ. ಜಡಮಳಿ ವಹಿಸಿಕೊಳ್ಳಲಿದ್ದಾರೆ. ಸಂಘದ ಉದ್ಘಾಟನೆಯನ್ನು ಗ್ರಾಪಂ ಪ್ರಭಾರ ಅಧ್ಯಕ್ಷ ಜಗದೀಶ ಬ್ಯಾಡಗಿ, ಶಕ್ತಿ ಪ್ರದರ್ಶನವನ್ನು ಹುನಗುಂಡಿ ಗ್ರಾಪಂ ಉಪಾಧ್ಯಕ್ಷ ಬಸವಂತಪ್ಪ ತಳವಾರ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಬಸವರಾಜ ಖವಾಸ್ತ, ಮಹಾಂತೇಶ ಬ್ಯಾಡಗಿ, ಎಸ್.ಎಸ್.ಪಟ್ಟಣಶೆಟ್ಟಿ ಆಗಮಿಸಲಿದ್ದಾರೆ. ಶಕ್ತಿ ಪ್ರದರ್ಶನಕ್ಕೆ ಪ್ರಥಮ ಬಹುಮಾನ 2 ತೊಲಿ ಬೆಳ್ಳಿಕಡೆ, ದ್ವಿತೀಯ ಒಂದುವರೆ ತೊಲಿ ಬೆಳ್ಳಿ ಕಡೆ, ತೃತೀಯ 1 ತೊಲಿ ಬೆಳ್ಳಿಕಡೆ ನೀಡಲಾಗುವುದು. ಪ್ರವೇಶ ಫೀ ರು. 101. ಐದು ನಿಮಿಷ ಅವಧಿಯಲ್ಲಿ ಮರಗಾಲು ಕಟ್ಟಿಕೊಂಡು 1 ಕ್ವಿಂಟಲ್ ಜೋಳದ ಚೀಲವನ್ನು ಹೆಗಲಮೇಲೆ ಹೊತ್ತು ಸಾಗಬೇಕು. ಮರಗಾಲುಗಳನ್ನು ಕಮಿಟಿಯವರೇ ನೀಡಲಿದ್ದಾರೆ. ಹಗ್ಗ ಜಗ್ಗುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರು. 1001, ದ್ವಿತೀಯ ರು. 701, ತೃತೀಯ ರು. 501, ಒಂದು ತಂಡದಲ್ಲಿ ಏಳು ಜನರಿಗೆ ಮಾತ್ರ ಅವಕಾಶವಿದೆ. ಪ್ರವೇಶ ಫೀ ರು. 101 ನೀಡಬೇಕು. ನಿರ್ಣಾಯಕರಾಗಿ ಬಾಪುಜಿ ಗದ್ದಿನ, ತುಳಸಪ್ಪ ಕುಂದರಗಿ, ರಂಗಪ್ಪ ಹೆಗ್ರಿ, ಯಚ್ಚರಪ್ಪ ಆಡೀನ, ಈರಪ್ಪ ಪೂಜಾರ, ರವಿ ಲಮಾಣಿ, ಬಸವರಾಜ ಹೆಗ್ರಿ, ರವಿ ಮನಗೂಳಿ, ಶಿವಪ್ಪ ಕಿತ್ತಲಿ ಕಾರ್ಯನಿರ್ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಪ್ರೊ. ವಿ.ಪಿ. ಪಾಟೀಲ ನಿರೂಪಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 8197439150, 9482551822,9743442363 ಕ್ಕೆ ಸಂಪರ್ಕಿಸಲು ಸಂಘದ ಅಧ್ಯಕ್ಷ ಹನುಮಂತ ನವಲಳ್ಳಿ, ಕಾರ್ಯದರ್ಶಿ ಬಸವರಾಜ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಇಂದು ಕಾಂಗ್ರೆಸ್ ಸಭೆ
ನರಗುಂದ:
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಏ. 11ರಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಪಕ್ಷದ ಸಭೆ ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ವಿವಿಧ ಪಕ್ಷಗಳಿಂದ 300ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ. ಸಭೆಗೆ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಸೆಟ್ಲ್‌ಮೆಂಟ್‌ನಿಂದ ಮಿಶನ್ ಕಾಂಪೌಂಡ್ ವರೆಗೆ ಈ ಭಾಗಗಳಲ್ಲಿ ಗುರುವಾರ ನೀರು ಪೂರೈಕೆ ಮಾಡಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.