ರೋಣ: 3 ನಾಮಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ರೋಣ, ಏ. 12
ರೋಣ ವಿಧಾನಸಭಾಕ್ಷೇತ್ರದ ಚುನಾವಣೆಗೆ ಶುಕ್ರವಾರ 3 ನಾಮಪತ್ರಗಳು ಸಲ್ಲಿಕೆಯಾಗಿವೆ. ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಬೂದಿಹಾಳ ಮತ್ತು ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮಪ್ಪ ಸೋಮಪ್ಪ ಮೇಗಲಮನಿ ಉರ್ಪ ತಳಗಡೆ ಇವರು 2 ನಾಮ ಪತ್ರಗಳನ್ನು ಸಲ್ಲಿಸಿದ್ದು, ಒಟ್ಟು 3 ನಾಮ ಪತ್ರಗಳು ಸಲ್ಲಿಕೆಯಾಗಿವೆ. ರೋಣ ಮತಕ್ಷೇತ್ರದ ಚುನಾವಣಾಧಿಕಾರಿಯಾಗಿ ಎನ್.ಆರ್. ಉಮೇಶ, ತಹಸೀಲ್ದಾರ್ ಎಂ.ಬಿ.ಪಾಟೀಲ, ತಾಪಂ ಇಓ ಎಸ್.ಎಂ. ರುದ್ರಸ್ವಾಮಿ, ಎನ್.ಎಸ್. ಕೂಡಲ ಕಾರ್ಯನಿರ್ವಹಿಸಿದರು.
--
15ರಿಂದ ಬೇಸಿಗೆ ಶಿಬಿರ
ಗದಗ: ನಗರದ ರಾಜೇಶ್ವರಿ ಕಲಾ ಕುಟೀರದ ವತಿಯಿಂದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ರಜೆಯ ಪ್ರಯುಕ್ತ ಮಕ್ಕಳಲ್ಲಿ ವಿನೂತನ ಸಾಂಸ್ಕೃತಿಕ ಕಲೆಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನವನ್ನು ಏ. 15ರಿಂದ ಮೇ 15ರ ವರೆಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಸಂಗೀತ, ಭರತನಾಟ್ಯ, ಕಥಕ್ ನೃತ್ಯ, ಕೂಚುಪುಡಿ ನೃತ್ಯ, ಜಾನಪದ ನೃತ್ಯ, ಯೋಗ, ಧ್ಯಾನ, ಕರಾಟೆ, ಸಾಹಸಕ್ರೀಡೆ, ಡ್ರಾಯಿಂಗ್, ಪೇಂಟಿಂಗ್, ಕ್ರಾಫ್ಟ್, ಕಸದಿಂದ ರಸ, ತಬಲಾ ಹಾಗೂ ಕೀಬೋರ್ಡ್, ಕೇರ್ಂ, ಚೆಸ್, ಕ್ರಿಕೆಟ್, ಬ್ಯಾಡ್ಮಿಂಟನ್, ಬೆಳಾಂಗಣದ ಆಟಗಳ ಹಾಗೂ ಮುಂತಾದ ಕರಕುಶಲ ತರಬೇತಿಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರಾಜೇಶ್ವರಿ ಕಲಾಕುಟೀರ, ವಕೀಲಚಾಳ, ಮರಾಠಾ ಮಂಡಳ, ಲಖಾನಿ ಆಸ್ಪತ್ರೆಯ ಹಿಂದೆ ಗದಗ. ದೂ. 9743817941 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

