ಗದಗ

ಪಂಚತಂತ್ರ ಲೋಕಾನುಭವದ ಪಾಕ

Published On :

ಗದಗ: ಜಗತ್ತಿನ ಎಲ್ಲ ಭಾಷೆಗಳಿಗೆ ಅನುವಾದಗೊಂಡ ಕನ್ನಡದ ಮೊದಲ ಕೃತಿಯನ್ನು ರಚಿಸಿದ ಕೀರ್ತಿ ದುರ್ಗಸಿಂಹನಿಗೆ ಸಲ್ಲುತ್ತದೆ. ಬೆಳೆಯುವ ಎಳೆಯ ಹೃದಯಗಳಿಗೆ ವ್ಯವಹಾರ ಜ್ಞಾನವನ್ನು ತುಂಬಿ ಪರಿಪೂರ್ಣವಾಗಿಸುವ ಮತ್ತು ಲೋಕಾನುಭವದ ಪರಿಪಕ್ವತೆಯ ಪಾಕವನ್ನು ನೀಡುವ ಕೃತಿ ಪಂಚತಂತ್ರ ಎಂದು ಗದುಗಿನ ಕೆಎಸ್‌ಎಸ್ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಡಾ. ಎನ್.ಎಂ. ಅಂಬಲಿಯವರ ಹೇಳಿದರು.
ಅವರು ಸ್ಥಳೀಯ ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ಇತ್ತೀಚೆಗೆ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ದುರ್ಗಸಿಂಹನ ಪಂಚತಂತ್ರ ಕುರಿತು ಉಪನ್ಯಾಸ ನೀಡಿದರು.
ಪಂಚತಂತ್ರ ಮುಖ್ಯವಾಗಿ 5 ಪ್ರಕರಣಗಳಿಂದ ಕೂಡಿದೆ. ಭೇದ, ಪರೀಕ್ಷೆ, ವಿಶ್ವಾಸ, ವಂಚನೆ, ಮಿತ್ರಕಾರ್ಯಗಳನ್ನು ಮಹಾಕತೆಯೊಂದಿಗೆ ಉಪಕತೆಗಳನ್ನು ಪೋಣಿಸುವುದರ ಮೂಲಕ ಸಹೃದಯರ ಮನಸ್ಸನ್ನು ಸೆರೆಹಿಡಿಯುವಂತೆ ಮಾಡಿದ್ದಾನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ದುರ್ಗಸಿಂಹನ ಕೃತಿಯಲ್ಲಿ ಮಾನವ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ವ್ಯವಹಾರಿಕವಾಗಿ, ಹರ್ಷಮಯವಾಗಿ, ವಿಶ್ವಾಸಮಯವಾಗಿ ನೆಮ್ಮದಿಯಿಂದ ಸಮಾಜದಲ್ಲಿ ಹೊಂದಾಣಿಕೆಯನ್ನು ಬಿತ್ತಿ ಪ್ರಾಮಾಣಿಕವಾಗಿ ಬದುಕಲು ಮತ್ತು ಬಾಳಲು ಪಂಚತಂತ್ರ ಕೃತಿ ಕೈದೀವಿಗೆಯಾಗಿದೆ ಎಂದರು.
ಸಭೆಯಲ್ಲಿ ಕಸಾಪ ಸಲಹಾ ಮಂಡಳಿಯ ಸದಸ್ಯ ಪ್ರಾ. ಕೆ.ಎಚ್.ಬೇಲೂರ, ಬಿ.ಎಸ್.ಹಿಂಡಿ, ವಿಶ್ವನಾಥ ಕಮ್ಮಾರ, ಎಸ್.ಎಫ್. ಹಡಪದ, ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಸಂಗಮೇಶ ತಮ್ಮನಗೌಡರ, ಜಿಲ್ಲಾ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್., ಸಾಹಿತಿ ಎ.ಎಸ್. ಮಕಾಂದಾರ, ತಾಲೂಕು ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಪ್ರಾ. ಆರ್.ಜಿ. ಚಿಕ್ಕಮಠ, ಪ್ರೊ. ಅಶೋಕ ಸಾವಂತ, ಎಸ್.ಸಿ. ಹವಳದ, ಪ್ರಾ. ಬಿ.ಜಿ. ಹಿರೇಮಠ, ಪ್ರೊ. ರಮೇಶ ಸಜ್ಜಗಾರ, ಮಹಾಂತೇಶ ಮದ್ನೂರ, ಚನ್ನಬಸಪ್ಪ ಮಾನ್ವಿ, ವಿದ್ಯಾವತಿ ಮಾನ್ವಿ, ಬಸಯ್ಯ ನಂದಿಕೋಲಮಠ, ಬಸವರಾಜ ಕುಕನೂರ ಉಪಸ್ಥಿತರಿದ್ದರು.
ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಸಂಗಮೇಶ ತಮ್ಮನಗೌಡರ ಪ್ರಾರ್ಥಿಸಿದರು. ತಾಲೂಕು ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ ಸ್ವಾಗತಿಸಿದರು. ಜಿಲ್ಲಾ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್.ನಿರೂಪಿಸಿದರು. ಪ್ರೊ. ಜಿ.ಎಸ್. ಯತ್ನಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.