ಶೀತಲ್ ಆಂಚಲಿಯಾಗೆ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 15
ಸ್ಥಳೀಯ ಭಗವಾನ ಮಹಾವೀರ ಜೈನ್ ಸಮಾಜದ ವತಿಯಿಂದ ಜೈನ್ ಸನ್ಯಾಸಿ ದೀಕ್ಷೆ ಸ್ವೀಕರಿಸಲಿರುವ ಸುರಪುರದ ಶೀತಲ್ ಆಂಚಲಿಯಾ ಅವರ ಅಭಿನಂದನಾ ಸಮಾರಂಭವು ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು.
ದೀಕ್ಷೆ ಸ್ವೀಕರಿಸುವ ಕುಮಾರಿ ಶೀತಲ್ರನ್ನು ವಿವಿಧ ಸಂಗೀತ ವಾದ್ಯಗಳೊಂದಿಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆಯ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಹುಬ್ಬಳ್ಳಿಯ ಹೀರಾಚಂದ ತಾತೇಡ ಮಾತನಾಡಿ, ಮಾನವ ಜನ್ಮ ಲಭಿಸುವುದು ಅಪರೂಪ. ಜಪ, ತಪ, ಶಾಂತಿ, ಸತ್ಯ, ಅಹಿಂಸೆಯ ಮೂಲಕ ಜೀವನ ಸಾಗಿಸಿದರೆ ಮೋಕ್ಷ ಲಭ್ಯವಾಗಿ, ಕಷ್ಟ ಕಾರ್ಪಣ್ಯಗಳಿಂದ ದೂರವಿರಬಹುದು. ಈ ನಿಟ್ಟಿನಲ್ಲಿ ಸನ್ಯಾಸ ಸ್ವೀಕರಿಸಲಿರುವ ಶೀತಲ್ ಆಂಚಲಿಯಾ ಜನ್ಮ ಸಫಲವಾಗಲಿದೆ ಎಂದರು.
ಸ್ಥಳೀಯ ಮಹಾವೀರ ಜೈನ್ ಸಮಾಜ ಅಧ್ಯಕ್ಷ ಅಶೋಕ ಬಾಗಮಾರ ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸುಖ ಭೋಗದ ಕಡೆಗೆ ಹೆಚ್ಚು ಮನಸ್ಸು ಹರಿಸುವ ಯುವಕರ ಪಡೆ ಒಂದೆಡೆಯಾದರೆ, ಕಠೋರ ವೃತಾಚರಣೆಯತ್ತ ಚಿತ್ತ ಹರಿಸಿರುವ ಶೀತಲ್ ಆಂಚಲಿಯಾ ನಿರ್ಧಾರ ಇತರರಿಗೆ ಮಾದರಿಯಾಗಿದೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಶೀತಲ್ ಆಚಾರ್ಯರ ಪ್ರವಚನದಿಂದ ಪ್ರಭಾವಿತಳಾಗಿ ಜೈನ್ ಧರ್ಮದ ತ್ಯಾಗ, ಅಹಿಂಸೆ ತತ್ವಗಳಿಗೆ ಮಾರು ಹೋಗಿ ಮೇ. 5ರಂದು ಚೆನೈನಲ್ಲಿ ಸಾದ್ವಿ ಗ್ಯಾನಲವಾಜಿ ಅವರಿಂದ ಜೈನ್ ದೀಕ್ಷೆ ಸ್ವೀಕರಿಸಲಿದ್ದಾರೆ ಎಂದರು.
ಬಾಗಲಕೋಟ ಪುಕ್ಕರಾಜ ಪೇಠಲಾ, ಗದಗ ಕೀಶನಚಂದ ಬಾಗಮಾರ, ಕಾಂತಿಲಾಲ ಕಠಾರಿಯಾ, ಮನಿಷಾ, ಕವಿತಾ, ರಿಕಬ್ಚಂದ ಸುಖರಾಜ, ಧನರಾಜ ಬಾಗಮಾರ, ಅಜಿತ ವಂದಕುದರಿ, ಅಜೀತ ಬಾಗಮಾರ ಸೇರಿದಂತೆ ಸಿಂಧನೂರ, ಹುಬ್ಬಳ್ಳಿ, ಕೊಪ್ಪಳ, ಹೋಸಪೇಟೆ, ಬಾಗಲಕೋಟೆ, ಗದಗ, ಮುಂಡರಗಿ, ತಾವರಗೇರಿ, ಇತರ ಪಟ್ಟಣಗಳಿಂದ ಸಮಾಜದ ಅಪಾರ ಜನತೆ ಪಾಲ್ಗೊಂಡಿದ್ದರು. ಶೀತಲ್ ಬಾಗಮಾರ ಸ್ವಾಗತಿಸಿ ನಿರೂಪಿಸಿದರು. ಪವನಕುಮಾರ ಬಾಗಮಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

