ಗದಗ

ಯೋಗದಿಂದ ರೋಗ ಮುಕ್ತ ಸಮಾಜ ನಿರ್ಮಾಣ

Published On :

ಗಜೇಂದ್ರಗಡ: ಯೋಗದಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯಕ್ಕೆ ಸಹಕಾರಿಯಾದ ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದು ಯೋಗ ಶಿಕ್ಷಕ ಅಶೋಕ ಹೊಸೂರ ಹೇಳಿದರು.
ಸೋಮವಾರ ಸ್ಥಳೀಯ ಜ. ತೋಂಟದಾರ್ಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರಾರಂಭವಾದ 7 ದಿನಗಳ ಉಚಿತ ಪ್ರಾಣಾಯಾಮ ಹಾಗೂ ಯೋಗ ವಿಜ್ಞಾನ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಯೋಗ ಕಲಿತವರು ಯೋಗಿಗಳಾಗುತ್ತಾರೆ. ಸ್ವಾಸ್ಥ್ಯ ಸಮಾಜ ನಿರ್ಮಾಣ ಮುನ್ನಡೆಗೆ ಯೋಗದ ಕೊಡುಗೆ ಮಹತ್ತರವಾಗಿದೆ. ಮನುಕುಲಕ್ಕೆ ವರವಾದ ಯೋಗಭ್ಯಾಸ ನಿತ್ಯ ಮಾಡುವುದರಿಂದ ರೋಗಗಳು ದೂರವಾಗುತ್ತವೆ. ಅಲ್ಲದೇ ಸರ್ವ ವ್ಯಸನಗಳಿಗೆ ರಾಮ ಬಾಣವಾಗಿದೆ. ಆಧುನಿಕತೆ ಥಳಕು, ಬೆಳಕಿನ ಬೆನ್ನು ಹತ್ತಿರುವ ನಾವು ನಿಸರ್ಗದಿಂದ ದೂರ ಸರಿಯುತ್ತಿದ್ದೇವೆ. ಪರಿಣಾಮ ನಮ್ಮ ಶರೀರವು ಕಾಯಿಲೆಗಳ ಕೂಪೆಯಾಗಿದೆ. ಹಾಗಾಗಿ ಎಲ್ಲರೂ ಯೋಗ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಕೀರ್ತನಕಾರ ಡಿ.ಸಿ. ಬಾಕಳೆ ಮಾತನಾಡಿ, ನಮ್ಮ ಪೂರ್ವಜರು ಧ್ಯಾನ, ಪ್ರಾಣಾಯಾಮ ಮತ್ತು ಯೋಗಾಭ್ಯಾಸದಿಂದ ರೋಗಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳತ್ತಿದ್ದರು. ಆದರೆ, ಆಧುನಿಕರಾದ ನಮಗೆ ಅಂತವುಗಳಲ್ಲಿ ನಂಬಿಕೆಯಿಲ್ಲ. ಅದಕ್ಕೆ ಕಾರಣಗಳು ಹಲವಾರು ದುಡ್ಡಿಗಾಗಿ ವೈದ್ಯಕೀಯ ವೃತ್ತಿಯಲ್ಲಿರುವ ವೈದ್ಯರು ತಕ್ಕಮಟ್ಟಿಗೆ ಕಾರಣರಾದರೆ ಶೀಘ್ರ ಕಾಯಿಲೆ ವಾಸಿಯಾಗಬೇಕೆಂದು ಆತುರಪಡುವ ರೋಗಿಗಳೂ ಕಾರಣ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜ. ತೋಟದಾರ್ಯ ವಿದ್ಯಾಪೀಠ ಸಂಸ್ಥೆ ಅಧ್ಯಕ್ಷ ಎಸ್.ಎಲ್. ಹಿರೇಮನಿ ನೆರವೇರಿಸಿದರು. ಯೋಗ ಸಮಿತಿ ಶಿಕ್ಷಕ ಬಿ.ಎಂ. ಹಿರೇಮಠ, ಎಸ್.ವೈ. ಬಾವಿಕಟ್ಟಿ, ಪ್ರಕಾಶ ಮದ್ದಿನ, ಸಂಸ್ಥೆ ಕಾರ್ಯದರ್ಶಿ ಅಶೋಕ ಹೊನವಾಡ ಉಪಸ್ಥಿತರಿದ್ದರು. ಪ್ರಕಾಶ ಬಾಕಳೆ ಸ್ವಾಗತಿಸಿದರು. ಟಿ.ಐ. ನಿರಂಜನ್ ನಿರೂಪಿಸಿದರು. ಶಿವಾಜಿ ಹಾಳಕೇರಿ ವಂದಿಸಿದರು.ಅಕ್ರಮ ಮರಳು ಸಾಗಾಟ:
ವಾಹನ, ಬೋಟ್ ವಶ
ಶಿರಹಟ್ಟಿ: ತಾಲೂಕಿನ ಹೊಳೆ ಇಟಗಿ ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ಇಲಾಖೆಯ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಎತ್ತುತ್ತಿದ್ದ 4 ಲಾರಿ, 3 ಜೆಸಿಬಿ ಹಾಗೂ ಮರಳು ತೆಗೆಯಲು ಬಳಸುತ್ತಿದ್ದ 6 ಬೋಟ್‌ಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಂಗಳವಾರ ಸಂಜೆ ತಹಸೀಲ್ದಾರ್ ಆರ್.ಡಿ. ಉಪ್ಪಿನ, ಪಿಎಸ್‌ಐ ವಿಕಾಸ ಲಮಾಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಹಾಂತೇಶ, ಡಿಎಸ್ಪಿ ವಿ.ವಿ. ಕುಂಬಾರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಎಲ್.ವೈ. ಮಾಳುದೆ ನೇತೃತ್ವದ ತಂಡ ದಾಳಿ ನಡೆಸಿದೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.