ಗದಗ

ಧಾರ್ಮಿಕ ಚಿಂತನೆಯಿಂದ ಸಂಸ್ಕಾರ

Published On :

ಮುಂಡರಗಿ: ಧಾರ್ಮಿಕ ಚಿಂತನೆಗಳಿಂದ ಬುದ್ಧಿಗೆ ಸಂಸ್ಕಾರ ದೊರೆಯುತ್ತದೆ ಎಂದು ಹಿರೇಹೊನ್ನಾಳಿಯ ಸಿದ್ಧಪಾದ ಶಿವಾಚಾರ್ಯ ಶ್ರೀ ಹೇಳಿದರು.
ಅವರು ಸೋಮವಾರ ಸಂಜೆ ತಾಲೂಕಿನ ಸುಕ್ಷೇತ್ರ ಸಿಂಗಟಾಲೂರು ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಚಿಂತನಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ನಿತ್ಯ ಮತ್ತೊಬ್ಬರ ಬಗ್ಗೆ ಕೀಳಾಗಿ ಮಾತನಾಡುವ ಬದಲು ಭಗವಂತನನ್ನು ಸದಾ ಸ್ಮರಿಸುತ್ತಾ ಸುಂದರವಾದ ಅರ್ಥಗರ್ಭಿತ ಮಾತಾಡಿ. ಭಗವಂತನ ರೂಪವನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಂಡು ಮಾತನಾಡಬೇಕು. ಧರ್ಮವನ್ನೇ ಆಶ್ರಯಿಸಿಕೊಂಡು ಬಂದವರನ್ನು ಧರ್ಮ ಯಾವಾಗಲೂ ಕೈ ಬಿಡುವುದಿಲ್ಲ. ಅವರಿಗೆ ಖಂಡಿತವಾಗಿಯೂ ಜಯ ದೊರೆಯತ್ತದೆ. ಭಗವಂತನ ಸನ್ನಿದಾನದಲ್ಲಿ ನೆಲೆಸಿರುವಂತವರು ನಿತ್ಯ ಸುಖದಿಂದ ಬಾಳುತ್ತಾರೆಂದರು. ಕೊಟ್ರೇಶ ಅಂಗಡಿ ಮಾತನಾಡಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಹಾಗೂ ಸರ್ವ ಪದಾಧಿಕಾರಿಗಳ ನೇತೃತ್ವದಲ್ಲಿ ಕುಸಿದು ಹೋಗಿದ್ದ ದೇವಸ್ಥಾದ ಪೌಳಿ (ಗೋಡೆ) ಕಾಮಗಾರಿ ಸುಮಾರು ರು. 50 ಲಕ್ಷಗಳಲ್ಲಿ ಪೂರ್ಣವಾಗಿದ್ದು, ಕೂಡಲ ಸಂಗಮದ ಮಾದರಿಯಲ್ಲಿ ದೇವಸ್ಥಾನವನ್ನು ನಿರ್ಮಿಸಲು ಉದ್ದೇಶಿಸಿದ್ದು, ಭಕ್ತರು ಹೆಚ್ಚಿನ ಸಹಾಯ ನೀಡಬೇಕು ಎಂದರು. ಸಾನ್ನಿಧ್ಯವಹಿಸಿದ್ದ ಕಲಕೇರಿ-ವಿರುಪಾಪುರ ಮಠದ ಮುಧುಕೇಶ್ವರ ಶಿವಾಚಾರ್ಯ ಶ್ರೀಗಳು, ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಮಾತನಾಡಿದರು. ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಈರಣ್ಣ ಶೆಟ್ಟರ್, ಚೆನ್ನವೀರಪ್ಪ ಯಲಿಗಾರ, ಅಂದಪ್ಪ ಗೋಡಿ, ಸೀತಾರಾಮರಾಜು, ಸುರೇಶ ಜೈನ್, ಶೇಖರಗೌಡ ಪಾಟೀಲ, ಫಕ್ಕೀರಡ್ಡಿ ನೀರಲಗಿ, ಈರಣ್ಣ ಕೋರೀಶೆಟ್ಟರ್, ಅಣ್ಣಯ್ಯ ಸೇರಿದಂತೆ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ. ಉಮೇಶ ಪುರದ ಸ್ವಾಗತಿಸಿದರು. ವೀರೇಶ ಬೂದಿಹಾಳ ನಿರೂಪಿಸಿದರು. ಅಣ್ಣಯ್ಯ ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.