ರೋಣದಲ್ಲಿ ಕಳಕಪ್ಪ ಕಣಕ್ಕೆ
ಕನ್ನಡಪ್ರಭ ವಾರ್ತೆ, ರೋಣ, ಏ. 16
ರೋಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಕಳಕಪ್ಪ ಬಂಡಿ ತಮ್ಮ ಸಹಸ್ರಾರು ಅಭಿಮಾನಿ, ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ರೋಡ್ಶೋ ಮೂಲಕ ಮಂಗಳವಾರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ 11 ಗಂಟೆಗೆ ಪಟ್ಟಣದ ಸೂಡಿ ರಸ್ತೆಯಲ್ಲಿರುವ ಶಿವಾನಂದ ಮಠದಿಂದ ಆರಂಭಗೊಂಡ ಭವ್ಯ ಮೆರವಣಿಗೆ ಸೂಡಿ ಕ್ರಾಸ್ ಮತ್ತು ಮುಲ್ಲಾನ ಬಾವಿ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಮಧ್ಯಾಹ್ನ 2.30ಕ್ಕೆ ಆಗಮಿಸಿತು. ಸುಡು ಬಿಸಿಲನ್ನು ಲೆಕ್ಕಿಸದೇ ಅಭಿಮಾನಿಗಳು, ಕಾರ್ಯಕರ್ತರು ಮೆರವಣಿಗೆಯೂದ್ದಕ್ಕೂ ಜೈಕಾರ ಹಾಕುತ್ತ, ಜಾಂಜ್ ಮೇಳ, ಡೊಳ್ಳು ಕುಣಿತ, ಮಹಿಳೆಯರ ಹಾಗೂ ಯುವಕರ ನೃತ್ಯ ಆಕರ್ಷಕವಾಗಿತ್ತು. ಜನತೆ ಮತ್ತು ವ್ಯಾಪಾರಸ್ಥರು ಅಂಗಡಿ ಮತ್ತು ರಸ್ತೆ ಎರಡು ಬದಿಗೆ ನಿಂತು ತುಂಬಿದ ಜನಸಾಗರವನ್ನು ವೀಕ್ಷಿಸುತ್ತಿದ್ದರು.
ನಿರೀಕ್ಷೆಗೂ ಮೀರಿ ಸೇರಿದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಎಸ್ಎಫ್ ಪಡೆಯನ್ನು ನಿಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.
ಸಂಸದ ಪಿ.ಸಿ. ಗದ್ದಿಗೌಡ್ರ, ಸಂಯುಕ್ತಾ ಬಂಡಿ, ಸಿದ್ಧಣ್ಣ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಅಶೋಕ ನವಲಗುಂದ, ಎಸ್.ಎಚ್. ಸೊಂಪುರ, ಗುರುರಾಜ ಕುಲಕರ್ಣಿ, ಪುರಸಭೆ ಸದಸ್ಯ ಗದಿಗೆಪ್ಪ ಕಿರೇಸೂರ, ರಾಜು ಪಲ್ಲೇದ, ಮುತ್ತಣ್ಣ ಲಿಂಗನಗೌಡ್ರ, ಡಾ. ಆನಂದ ಇನಾಮದಾರ, ಬಸವಂತಪ್ಪ ತಳವಾರ, ಕಳಕಪ್ಪ ಸಂತೋಜಿ, ಅರ್ಜುನ ಕೊಪ್ಪಳ, ವೀರೇಶ ದೊಡ್ಡಣ್ಣವರ, ಅಮರೇಶ ಅರಳಿ, ಪಿ.ಸಿ. ಪೊಲೀಸ್ಪಾಟೀಲ, ಬಸನಗೌಡ ಪಾಟೀಲ ಸೇರಿದಂತೆ ರೋಣ ಮತಕ್ಷೇತ್ರದ ವಿವಿಧೆಡೆಯಿಂದ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

