ಗೊಂದಲ: ಲಘು ಲಾಠಿ ಪ್ರಹಾರ
ನರಗುಂದ: ಬುಧವಾರ ಪಕ್ಷೇತರ ಅಭ್ಯರ್ಥಿ ವರ್ತೂರು ರಮಾನಂದ ನಾಮಪತ್ರ ಸಲ್ಲಿಸುವ ವೇಳೆ ಆಗಮಿಸಿದ ಅವರ ಬೆಂಬಲಿಗರ ವಾಹನಗಳಿಗೆ ಡೀಸೆಲ್ ಹಣ ನೀಡುವ ವಿಷಯವಾಗಿ ಗೊಂದಲ ಉಂಟಾಯಿತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹತೋಟಿಗೆ ತಂದರು. ಅನಂತರ ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು ಪರಿಶೀಲಿಸಿ, ವಾಹನಗಳನ್ನು ಬಿಡುಗಡೆಗೊಳಿಸಿದರು.
ಸಿ.ಸಿ. ಪಾಟೀಲ ಗೆಲವಿಗೆ ಪಣ ತೊಡಿ: ಮನವಿ
ರೋಣ: ರಾಜ್ಯದಲ್ಲಿ 60 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳನ್ನು ಐದು ವರ್ಷಗಳಲ್ಲಿ ಸಮರ್ಪಕವಾಗಿ ಪೂರೈಸಿದ ಕೀರ್ತಿ ಬಿಜೆಪಿ ಹಾಗೂ ಸಿ.ಸಿ. ಪಾಟೀಲರಿಗೆ ಸಲ್ಲುತ್ತದೆ ಎಂದು ಬಿಜೆಪಿ ಮುಖಂಡ ವಿರೂಪಾಕ್ಷಗೌಡ ಪಾಟೀಲ್ ಹೇಳಿದರು. ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಿ.ಸಿ. ಪಾಟೀಲ್ ಪರ ಪ್ರಚಾರ ಹಾಗೂ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನರಗುಂದ ಮತ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿ ಗ್ರಾಮಕ್ಕೂ ಸರಾಸರಿ 2ರಿಂದ 4 ಕೋಟಿ ಅನುದಾನ ನೀಡಿದ್ದಾರೆ. ವಿವಿಧ ವಸತಿ ಯೋಜನೆಯಲ್ಲಿ ಬಡ ಜನತೆಗೆ ವಸತಿ ಸೌಲಭ್ಯ ಕಲ್ಪಿಸಿದ್ದಲ್ಲದೆ, ಹೆಚ್ಚುವರಿಯಾಗಿ 4200 ಆಶ್ರಯ ಮನೆಗಳನ್ನು ಒದಗಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿ ಮಲ್ಲಿಕಾರ್ಜುನಗೌಡ ಕಲ್ಲನಗೌಡ್ರ ಮತ್ತು ಅಶೋಕ ಕುಲಕರ್ಣಿ ಮಾತನಾಡಿದರು. ಶಂಕ್ರಪ್ಪ ಕಳಿಗಣ್ಣವರ, ಬಸವರಾಜ ಮಾದರ, ರೇಣುಕಪ್ಪ ಯಂಡಿಗೇರಿ, ಸಿದ್ದನಗೌಡ ಪಾಟೀಲ, ಗ್ರಾಪಂ ಸದಸ್ಯ ಜಗದೀಶ ಮಳಗಿ, ಬಾಬು ಮಾಸ್ತಿ, ಬಸವರಾಜ ಪಾಟೀಲ, ನಾಗನಗೌಡ ಪಾಟೀಲ, ನಿಂಗನಗೌಡ ಕಲ್ಲನಗೌಡ್ರ ಇದ್ದರು.
ನಾಮಪತ್ರ ಸಲ್ಲಿಕೆ
ಶಿರಹಟ್ಟಿ: ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ನಾಮಪತ್ರ ಸಲ್ಲಿಸುವವರು ತಂಡೋಪತಂಡವಾಗಿ ವಾಹನದಲ್ಲಿ ಮೆರವಣಿಗೆ ಮೂಲಕ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಾಂಗ್ರೆಸ್ದಿಂದ ರಾಮಕೃಷ್ಣ ಶಿದ್ಲಿಂಗಪ್ಪ ದೊಡ್ಡಮನಿ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದ್ದೇವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣಗೌಡ ಪಾಟೀಲ, ವೀರಣ್ಣ ಅಂಗಡಿ, ಲಿಂಗರಾಜಗೌಡ ಪಾಟೀಲ, ವಾಸಣ್ಣ ಕುರಡಗಿ, ಕೃಷ್ಣ ಸಾವಕಾರ, ರಘೋತ್ತಮ ಡಂಬಳ, ಶಾನು ಮುಲ್ಲಾ, ಮಂಜು ಘಂಟಿ, ಎಸ್.ಎ. ಹಾರೋಗೇರಿ, ಪರಮೇಶ ಲಮಾಣಿ, ರಾಮಣ್ಣ ಲಮಾಣಿ ಉಪಸ್ಥಿತರಿದ್ದರು. ಬಿಎಸ್ಆರ್ ಕಾಂಗ್ರೆಸ್ನಿಂದ ಜಯಶ್ರೀ ಮಹಾಂತೇಶ ಹಳ್ಳೆಪ್ಪನವರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷ ಜಿ.ಎಂ. ಮಹಾಂತಶೆಟ್ಟರ, ಸಣ್ಣವೀರಪ್ಪ ಹಳ್ಳೆಪ್ಪನವರ, ಐ.ಡಿ. ಅಮರಶೆಟ್ಟಿ, ಶಿವಾನಂದ ದೇಸಾಯಿ, ಮೋಹನ್ ನರಗುಂದ, ಅಶೋಕ ಪಲ್ಲೇದ, ಮಹೇಶ ಕಲ್ಲಪ್ಪನವರ ಪಾಲ್ಗೊಂಡಿದ್ದರು. ಕೆಜೆಪಿಯಿಂದ ಶೋಭಾ ಕೃಷ್ಣಪ್ಪ ಲಮಾಣಿ ನಾಮಪತ್ರ ಸಲ್ಲಿಸಿದ್ದಾರೆ. ಚಂದ್ರಕಾಂತ ನೂರಶೆಟ್ಟರ್, ಮಹೇಶ ಹೊಗೆಸೊಪ್ಪೀನ, ಎಸ್.ಸಿ. ಪಾಟೀಲ, ಪ್ರೇಮ್ ಸೇಠ್, ಮಹೇಶ ಬಡ್ನಿ, ನಾಗರಾಜ ಬಟಗುರ್ಕಿ, ಬಸವರಾಜ ದೇಸಾಯಿ, ಸುನೀಲ ಪವಾರ, ನಾಗನಗೌಡ ಮರಿಗೌಡ್ರ, ಎಂ.ಎನ್. ವಡಕಣ್ಣವರ ಉಪಸ್ಥಿತರಿದ್ದರು. ಬಿಎಸ್ಪಿ ಪಕ್ಷದಿಂದ ದುರಗಪ್ಪ ಪೂಜಾರ, ಜೆಡಿಯುದಿಂದ ಬೆನಕಪ್ಪ ಭಜನೆಪ್ಪ ಪೂಜಾರ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಶಿವಪ್ಪ ಕೊರದಾಳ, ಲಕ್ಷ್ಮಣ ಲಮಾಣಿ, ರಾಮಪ್ಪ ಬಂಡಿವಡ್ಡರ, ಉಡಚಪ್ಪ ದಂಡಾಪುರ, ಶಿವಪ್ಪ ಪವಾರ ನಾಮಪತ್ರ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

