ಗದಗ

ನಾಟಕದಿಂದ ಸೌಹಾರ್ದ

Published On :

ಗಜೇಂದ್ರಗಡ: ನಾಟಕ ನೈಜ ಜೀವನದ ಕೈಗನ್ನಡಿಯಾಗಿದ್ದು, ನೆಮ್ಮದಿಯ ಬದುಕಿಗೆ ರಹದಾರಿಯಾಗುವುದರ ಜತೆಗೆ ಸಮಾಜದಲ್ಲಿ ಸೌಹಾರ್ದ ಹೆಚ್ಚಲು ಸಹಕಾರಿಯಾಗಿದೆ. ಇಂಥಹ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಗೊಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಕೆ. ಬಾಗವಾನ ಅಭಿಪ್ರಾಯಪಟ್ಟರು. ಈಚೆಗೆ ಅವರು ಸಮೀಪದ ಗೊಗೇರಿ ಗ್ರಾಮದ ಅನ್ನದಾನೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಗ್ರಾಮದ ಕಲಾವಿದರಿಂದ ಪ್ರದರ್ಶನಗೊಂಡ 'ಹುಚ್ಚನ ಕಣ್ಣಿರು' ಎಂಬ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಜನತೆ ಕೇವಲ ಚಲನಚಿತ್ರ, ಧಾರವಾಹಿಗಳತ್ತ ಆಕರ್ಷಿತರಾಗಿ ಮನಸ್ಸು, ನೆಮ್ಮದಿಯನ್ನು ವಿಕಾರಗೊಳಿಸುವಂತ ದಿಕ್ಕಿನೆಡೆಗೆ ಸಾಗುತ್ತಿರುವುದು ಶೋಚನಿಯ. ಮನಸ್ಸಿಗೆ ಮುದ ನೀಡಿ, ಶಾಶ್ವತವಾಗಿ ಹೃದಯದಲ್ಲಿ ಬೇರೂರುವಂತಹ ದೇಶಿ ಸಂಸ್ಕೃತಿಯ ರಂಗ ಕಲೆಯನ್ನು ಆರಾಧಿಸುವಲ್ಲಿ ಮುಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಲೆಯ ಉಳಿವಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದರು.  ಗೊಗೇರಿ ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಕಮ್ಮಾರ ಮಾತನಾಡಿದರು. ಅಧ್ಯಕ್ಷತೆಯನ್ನು ಬಸವರಾಜ ಮೂಲಿಮನಿ ವಹಿಸಿದ್ದರು. ಅಂದಾನಯ್ಯ ಹಿರೇಮಠ, ಶೇಖರಯ್ಯ ಹಿರೇಮಠ, ಕಳಕಯ್ಯ ಹಿರೇಮಠ, ಶಂಕ್ರಯ್ಯ ಮೇಟಿಮಠ ಮುಂತಾದವರು ಉಪಸ್ಥಿತರಿದ್ದರು. ಚನಪ್ಪ ಮೂಲಿಮನಿ ಸ್ವಾಗತಿಸಿದರು. ಆರ್.ಕೆ. ಬಾಗವಾನ ನಿರೂಪಿಸಿದರು. ಬಸವರಾಜ ಸೋಂಪೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.