ಗದಗ

ರಾಜ್ಯದ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಿ: ವಡ್ಡರ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 19
ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ದೀನ ದಲಿತರ, ರೈತರ ಪರವಾಗಿ ರಾಜ್ಯದಲ್ಲಿ 20 ತಿಂಗಳ ಕಾಲ ಉತ್ತಮ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಕೈ ಬಲಪಡಿಸಲು ಜೆಡಿಎಸ್ಗೆ ಮತ ನೀಡಿ ಎಂದು ಶಿರಹಟ್ಟಿ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುರಪ್ಪ ವಡ್ಡರ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಗಣೇಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ರೋಡ್ಶೋ ನಡೆಸುವ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ಅಧಿಕಾರ ನಡೆಸಿದ ಯಾವುದೇ ಸರ್ಕಾರಗಳು ಮಾಡದಷ್ಟು ಹೊಸ ಹೊಸ ಯೋಜನೆಗಳನ್ನು ಕುಮಾರಸ್ವಾಮಿಯವರು ಕೇವಲ 20 ತಿಂಗಳಿನಲ್ಲಿ ಮಾಡಿ ಜನಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಮತದಾರ ಬಾಂಧವರು ಮೇ. 5 ರಂದು ಜರುಗುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ ನೀಡಿ ಆರಿಸಿ ತರಬೇಕೆಂದು ಮನವಿ ಮಾಡಿದರು.
ಜೆ.ಎಚ್. ಪಟೇಲ್ನಗರ, ಹೊಸ ಬಸ್ನಿಲ್ದಾಣ, ಮೇನ್ಬಜಾರ, ಕಡ್ಲಿಪೇಟೆ, ಕೋಟೆಭಾಗ, ಕೊಪ್ಪಳ ವೃತ್ತ ಸೇರಿದಂತೆ ಅನೇಕ ಕೆಡೆಗಳಲ್ಲಿ ತೆರಳಿ ರೋಡ್ ಶೋ ನಡೆಸಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ತಾಲೂಕು ಅಧ್ಯಕ್ಷ ಎಂ.ಜಿ. ವಡ್ಡಟ್ಟಿ, ಶಿರಹಟ್ಟಿ ಜೆಡಿಎಸ್ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ಶಿವಯೋಗಿ ಹಮ್ಮಿಗಿ, ಮಾರುತಿ ಕವಲೂರ, ಶೌಕತ್ಅಲಿ ಗೋವಾಜಿ, ಅಕ್ಬರ್ ಯಾದಗಿರಿ, ಮೋದಿನಸಾಬ್ ಗೋವಾಜಿ, ಮಾರುತಿ ಹೊಸಮನಿ, ಬಸವರಾಜ ನರೇಗಲ್, ನಜೀರ್ಸಾಬ್ ಡಂಬಳ, ನಜೀರಸಾಬ್ ಬೆಟಗೇರಿ, ಬಸೀರಅಹ್ಮದ್ ಅಡವಿಸೋಮಾಪುರ, ಶಿವು ಲಮಾಣಿ, ಅನುರಾಜ, ಪದ್ಮರಾಜ ಪಾಟೀಲ, ವಾಗೇಶ್ ಬಟಗುರಕಿ, ವೀರಣಗೌಡ ಪಾಟೀಲ, ಡಾ. ಎ.ಎಂ. ಗಾಡಗೋಳಿ, ಡಾ. ಎಸ್.ಕೆ. ಪೊಲೀಸ್ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.