ಗದಗ

ತಮ್ಮ ಖಾತೆ ಮಾಹಿತಿ ಇಲ್ಲದವರನ್ನು ತಿರಸ್ಕರಿಸಿ: ಸಿದ್ದರಾಮಯ್ಯ

Published On :

ಮುಂಡರಗಿ: ತಾವು ಸಚಿವರಾಗಿದ್ದ ಇಲಾಖೆ ಬಗ್ಗೆ ಅಧಿವೇಶನದಲ್ಲಿ ಮಾಹಿತಿ ನೀಡದ ಮತ್ತು ಆ ಇಲಾಖೆ ಬಗ್ಗೆ ತಿಳಿವಳಿಕೆಯೂ ಇಲ್ಲದ ಸಚಿವ ಕಳಕಪ್ಪ ಬಂಡಿಗೆ ಮಹತ್ವದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರನ್ನಾಗಿ ಮಾಡಿದ್ದು, ಹಾಸ್ಯಾಸ್ಪದ ಸಂಗತಿ. ಅಂಥವರನ್ನು ಆಯ್ಕೆ ಮಾಡದೇ ಜ್ಞಾನವಿದ್ದವರನ್ನು ಆಯ್ಕೆ ಮಾಡಿ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ಶನಿವಾರ ರೋಣ ಮತಕ್ಷೇತ್ರದ ಡಂಬಳ ಹೋಬಳಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜನಪರ ಕಾಳಜಿಯುಳ್ಳ ಜಿ.ಎಸ್. ಪಾಟೀಲರಿಗೆ ಈ ಬಾರಿ ಮತ ಹಾಕಿರಿ ಎಂದು ಮನವಿ ಮಾಡಿದರು. ಸಿಂಗಟಾಲೂರು ಹುಲಿಗುಡ್ಡ ಏತನೀರಾವರಿ ಕಾಮಗಾರಿಗೆ 1999ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಇದ್ದಾಗ ಅಡಿಗಲ್ಲು ಹಾಕಲಾಗಿತ್ತು. ನಂತರ ಎಸ್.ಎಂ. ಕೃಷ್ಣ ಅವರ ಕಾಂಗ್ರೆಸ್ ಸರ್ಕಾರದಲ್ಲಿ ಅಂದಿನ ನೀರಾವರಿ ಸಚಿವ ಎಚ್.ಕೆ. ಪಾಟೀಲ ಯೋಜನೆಯ ಗಾತ್ರವನ್ನು ವಿಸ್ತರಿಸಿದ್ದರು. 5 ವರ್ಷಗಳ ಕಾಲ ಅಧಿಕಾರಕ್ಕಾಗಿ ಕಾಲ ಕಳೆದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಪೂರ್ಣಗೊಳಿಸಲೇ ಇಲ್ಲ ಎಂದು ದೂರಿದ ಅವರು, ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ಅಸಾಧ್ಯ ಎನ್ನುವುದು ಮತದಾರರಿಗೆ ತಿಳಿದಿದೆ. ಹಾಗಾಗಿ ಸ್ಥಿರ ಆಡಳಿತಕ್ಕಾಗಿ ಕಾಂಗ್ರೆಸ್‌ನ್ನು ಬೆಂಬಲಿಸುತ್ತಾರೆ ಎಂದರು. ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವವರಮಠ, ರಾಮಕೃಷ್ಣ ದೊಡ್ಡಮನಿ, ಹೇಮಂತಗೌಡ ಪಾಟೀಲ, ವಾಸಣ್ಣ ಕುರುಡಗಿ, ಡಾ. ಬಿ.ಎಫ್. ದಂಡೀನ, ವಿ.ಆರ್. ಗುಡಿಸಾಗರ, ವಿ.ಎಲ್. ನಾಡಗೌಡ್ರ, ಮಿಥುನ್ ಪಾಟೀಲ, ದಶರಥ ಗಾಣಿಗೇರ, ಫಕ್ಕೀರಪ್ಪ ಹೆಬಸೂರ, ರಾಮಪ್ಪ ಮೇಗಲಮನಿ, ಶಿವಕುಮಾರಗೌಡ ಪಾಟೀಲ, ಯಲ್ಲಪ್ಪ ರಾಮೇನಹಳ್ಳಿ, ಭೀಮಸಿಂಗ್ ರಾಠೋಡ, ರಾಮು ಕಲಾಲ, ಎಸ್.ಡಿ. ಮಕಾಂದಾರ, ಸುರೇಶ ಮಾಳಗಿಮನಿ, ಮಹ್ಮದ್‌ಗೌಸ್ ತಾಂಬೋಟಿ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ವಿ.ಟಿ. ಮೇಟಿ, ಸಿ.ಟಿ. ಪ್ಯಾಟಿ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.