ವೀರಭದ್ರೇಶ್ವರ ಅದ್ಧೂರಿ ಜಾತ್ರೆ
ಹಿರೇಕೆರೂರು: ತಾಲೂಕಿನ ನಾಗವಂದ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಗುಗ್ಗಳ ಹಾಗೂ ರಥೋತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು. 28 ಜತೆ ಹರಕೆ ಗುಗ್ಗಳ ನೆರವೇರಿಸಲಾಯಿತು. ಪುರವಂತರು, ಹರಕೆ ಗುಗ್ಗಳ ಕೊಡಗಳಿಂದ ದೇಗುಲದ ಆವರಣ ತುಂಬಿತ್ತು. ಶನಿವಾರ ರಾತ್ರಿಯಿಂದಲೇ ಗುಗ್ಗುಳದ ತಯಾರಿ ನಡೆದಿತ್ತು. ಭಾನುವಾರ ಬೆಳಗ್ಗೆ 6ರಿಂದ 28 ಜೊತೆ ಗುಗ್ಗಳಗಳೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವ ವಿಜೃಂಬಣೆಯಿಂದ ಜರುಗಿತು.
ಶ್ರೀ ವೀರಭದ್ರೇಶ್ವರ ಗುಗ್ಗಳ 10 ಜೊತೆ ನಡೆಯುವುದು ಸಂಪ್ರದಾಯ. ಗ್ರಾಮದಲ್ಲಿ ಹರಕೆ ಹೊತ್ತ 28 ಕುಟುಂಬಗಳು ಗುಗ್ಗಳ ಏರ್ಪಡಿಸುವ ಮೂಲಕ ಗಮನ ಸೆಳೆದಿವೆ. ಪ್ರತಿ ಮನೆಯ ಹರಕೆಯ ಗುಗ್ಗಳದ ಎರಡು ಕೊಡಗಳು, ಪುರವಂತರು, ಸಮಾಳ ಬಾರಿಸುವವರು, ಗುಗ್ಗಳ ಹೊತ್ತೊಯ್ಯುವವರು - ಹೀಗೆ 20 ಜನ ಒಂದು ಗುಗ್ಗಳ ಕೊಡದ ರಕ್ಷಣೆ ಮಾಡುವರು. ಮನೆಯಲ್ಲಿ ಉರಿಸಿದ ಗುಗ್ಗಳ ಕೊಡವನ್ನು ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡುತ್ತಾ ಸಾಗಿದರು. ರಾಮಾಯಣ ಮುಂತಾದ ಪುಣ್ಯ ಕಥೆಗಳನ್ನು ಕೇಳುತ್ತಾ ಸಾಗಿದ ಭಕ್ತಸಮೂಹ ಗಮನ ಸೆಳೆಯಿತು. ಹರಕೆ ಗುಗ್ಗಳ ಕೊಡಗಳು, ವಿವಿಧ ವಾದ್ಯ, ಡೊಳ್ಳು, ಭಜನೆ, ಬಾಜಾ, ಭಜಂತ್ರಿಗಳೊಂದಿಗೆ ರಥೋತ್ಸವ ಅದ್ದೂರಿಯಾಗಿ ಸಾಗಿತು. ಗ್ರಾಮದಲ್ಲಿ ಗುಗ್ಗಳ ಹರಕೆ ಮಾಡಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಸಂತಸ ತಂದಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಜಯಪ್ಪ ಮಾನೇರ ತಿಳಿಸಿದರು. ಎಲ್ಲ ಭಕ್ತರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಏ. 21ರಂದು ಹಾಗೂ 22ರಂದು ಸಂಜೆ ಎತ್ತಿನ ಬಂಡಿಗಳ ಮೆರವಣಿಗೆ, 23ರಂದು ಓಕುಳಿ ನಡೆಯಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

