ಮಕ್ಕಳು ಬೇಸಿಗೆ ಸಮಯ ವ್ಯರ್ಥ ಮಾಡಬೇಡಿ: ಬಡಿಗೇರ
ಹೊಳೆಆಲೂರು: ಬೇಸಿಗೆ ಸಮಯವನ್ನು ವ್ಯರ್ಥ ಮಾಡದೆ, ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಯಚ್ಚರೇಶ್ವರ ಬಾಲವಿಕಾಸ ಮಂದಿರದ ಸಂಸ್ಥೆಯ ಅಧ್ಯಕ್ಷ ಎ.ಎನ್. ಬಡಿಗೇರ ಹೇಳಿದರು. ಅವರು ಈಚೆಗೆ ಯಚ್ಚರೇಶ್ವರ ಸಂಸ್ಥೆಯ ಶಾಲಾ ಸಭಾಭವನದಲ್ಲಿ ಅಗಸ್ತ್ಯ ಅಂತರ್ ರಾಷ್ಟ್ರೀಯ ಪ್ರತಿಷ್ಠಾನ ಮತ್ತು ಸರ್ವಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನಡೆದ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಬಿರಗಳು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ದಾರಿ ಮಾಡಿಕೊಡುತ್ತವೆ. ಬರಿ ಪಠ್ಯವಷ್ಟೇ ಅಲ್ಲ. ಅಲ್ಲಿ ಆರೋಗ್ಯ, ವಿವಿಧ ವಿಷಯಗಳ ಕುರಿತು ಚರ್ಚೆ, ಸಮಯ ಪ್ರಜ್ಞೆಯ ಮಹತ್ವ ತಿಳಿಸಿಕೊಡುತ್ತದೆ. ಪಾಲಕರು ಮಕ್ಕಳನ್ನು ಬೇಸಿಗೆ ಕಾಲದ ರಜೆಯಲ್ಲಿ ವ್ಯರ್ಥವಾಗಿ ಕಳೆಯಲು ಬಿಡದೆ ಇಂಥಹ ಶಿಬಿರಗಳಿಗೆ ಸೇರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಬಿ.ಎಫ್. ಬಾಲನಗೌಡರ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್. ಐವಳ್ಳಿ, ಸಿ.ವಿ. ಪತ್ತಾರ ಆಗಮಿಸಿದ್ದರು. ಸುರೇಶ ಬವಾಡ ಬಯಲು ಕಾರ್ಯಕ್ರಮ ಪ್ರದರ್ಶಿಸಿದರು. ಸಂತೋಷಕುಮಾರ ಓ.ಎಚ್. ವಿಜ್ಞಾನ ವಿಸ್ಮಯ ಕುರಿತು ಮಾತನಾಡಿದರು. ಬಿ.ಜಿ. ಕುರಹಟ್ಟಿ ಅಗಸ್ತ್ಯ ಸಂಸ್ಥೆಯ ಗುರಿ, ಉದ್ದೇಶ ಕುರಿತು ತಿಳಿಸಿದರು. ಸಿ.ಎನ್. ಪಾಟೀಲ ಸ್ವಾಗತಿಸಿದರೆ, ನಾಗೇಶ ಎಸ್.ಎನ್. ವಂದಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

