ಗದಗ

ಶಿಕ್ಷಕರು ಮಕ್ಕಳಲ್ಲಿ ದೇಶಪ್ರೇಮ ಬೆಳೆಸಿ: ಶ್ರೀಶೈಲಪ್ಪ ಹಾದಿಮನಿ

Published On :

ನರಗುಂದ: ನಮ್ಮ ದೇಶ ಇಂದಿಗೂ ರಕ್ಷಣಾ ಇಲಾಖೆಯಲ್ಲಿ ಯಾವ ದೇಶಕ್ಕಿಂತಲೂ ಕಡಿಮೆಯಿಲ್ಲ. ಯುದ್ಧಗಳ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನೇ ತೋರೆದು ಹೋರಾಟ ಮಾಡುವ ಸೈನಿಕರು ನಮ್ಮಲ್ಲಿದ್ದಾರೆ. ಅಂತಹ ದೇಶಪ್ರೇಮಿಗಳ ಕುರಿತು ಶಿಕ್ಷಕರು ಮಕ್ಕಳಿಗೆ ತಿಳಿಸಿ, ಅವರಲ್ಲಿಯೂ ರಾಷ್ಟ್ರಪ್ರೇಮ ಬೆಳೆಸಬೇಕು ಎಂದು ನಿವೃತ್ತ ಸೈನಿಕ ಶ್ರೀಶೈಲಪ್ಪ ಹಾದಿಮನಿ ಹೇಳಿದರು.
ಈಚೆಗೆ ಅವರು ತಾಲೂಕಿನ ರಡ್ಡೇರನಾಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14ನೇ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಮತ್ತು ಸ್ಕೌಟ್ಸ್ ಗೈಡ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಶತ್ರು ದೇಶವು ನಮ್ಮ ದೇಶದ ಮೇಲೆ ದಾಳಿ ಮಾಡಿದರೆ ಅವರ ವಿರುದ್ಧ ಹೋರಾಡುವ ಮೂಲಕ ದೇಶವನ್ನು ಸಂರಕ್ಷಣೆ ಮಾಡುವ ಶಕ್ತಿ, ಸಾಮರ್ಥ್ಯ ನಮ್ಮ ಸೈನಿಕರಲ್ಲಿದೆ. ಶಿಕ್ಷಕರು ಮಕ್ಕಳಲ್ಲಿ ದೇಶಪ್ರೇಮಿಗಳ ಕುರಿತು ಹಾಗೂ ಅವರ ಆದರ್ಶಗಳನ್ನು ತಿಳಿಸಿ ಮಕ್ಕಳು ಸಹ ಮುಂದಿನ ದಿನಗಳಲ್ಲಿ ಸೈನಿಕರಾಗಲು ಪ್ರೇರಣೆ ನೀಡುವಂತೆ ಕೋರಿದರು.
ಶಿಕ್ಷಕ ಸುರೇಶ ಬನ್ನಿಗಿಡದ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಹಾಗಾಗಿ ನೀವು ಮುಂದೆ ಯಾವುದೇ ಹುದ್ದೆಯಲ್ಲಿರಿ, ದೇಶಕ್ಕೆ ಸೈನಿಕರಂತೆ ಸಮರ್ಪಣಾ ಮನೋಭಾವದಿಂದ ದೇಶದ ಕಾರ್ಯ ಮಾಡಿ ಎಂದರು. ಸುರೇಶ ತಿರಕನಗೌಡ್ರ, ಎನ್.ಎಫ್. ಜಾಧವ, ಬಿ.ಸಿ. ಶಿರಿಯಪ್ಪಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಎಸ್ ಅಧ್ಯಕ್ಷ ಬಿ.ಜಿ. ಪಾಟೀಲ, ಎಸ್.ಎಸ್. ಮರೋಳಿ, ಜಿ.ಬಿ. ಪೂಜಾರ, ಎಂ.ಬಿ. ಮಂಡಿಗೇರಿ, ವಿ.ಬಿ. ಹಿರೇಮಠ, ಎನ್.ವಿ. ಗುದಗಾಪುರ, ಸಂತೋಷ ಕವಡಿಮಟ್ಟಿ, ಶರಣಪ್ಪ ಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.