ಸೌಹಾರ್ದ ರಂಜಾನ್ ಆಚರಣೆಗೆ ನಿರ್ಧಾರ
ಗದಗ: ಪವಿತ್ರ ರಂಜಾನ್ ಹಬ್ಬವನ್ನು ಸರ್ವ ಧರ್ಮೀಯರ ಸಹಕಾರದಲ್ಲಿ ಶಾಂತಿಯುತವಾಗಿ ಆಚರಿಸಲು ನಿರ್ಣಯಿಸಿರುವ ಹಿಂದೂ-ಮುಸ್ಲಿಂ ಸಮಾಜದ ಪ್ರಮುಖರ ನಿರ್ಧಾರ ಸ್ವಾಗತಾರ್ಹ ಎಂದು ಡಿಎಸ್ಪಿ ವಿ.ವಿ. ಕುಂಬಾರ ಹೇಳಿದರು.
ಅವರು ಭಾನುವಾರ ಗದಗ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ಶಹರ ಪೊಲೀಸ್ಠಾಣೆಯ ವತಿಯಿಂದ ಆಯೋಜಿಸಲಾಗಿದ್ದ ರಂಜಾನ್ಪೂರ್ವ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಕೋಮು ಸೌಹಾರ್ದತೆಗೆ ಹೆಸರಾದ ಗದಗ ನಗರದಲ್ಲಿ ಸರ್ವ ಧರ್ಮೀಯರು ಸೇರಿಕೊಂಡು ಹಲವಾರು ದಶಕಗಳಿಂದ ಶಾಂತಿಯುತವಾಗಿ ಸರ್ವಧರ್ಮಗಳ ಹಬ್ಬಗಳನ್ನು ಆಚರಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಅದೇ ರೀತಿ ಈ ವರ್ಷವೂ ಹಬ್ಬ ಆಚರಣೆಗೆ ಶ್ರಮಿಸಿ, ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದರು. ಬಸಣ್ಣ ಮಲ್ಲಾಡದ, ವಾಸಣ್ಣ ಹೆಬಸೂರ, ಅಕ್ಬರ್ಸಾಬ ಬಬರ್ಚಿ, ರಾಮಣ್ಣ ಫಲದೊಡ್ಡಿ, ಎಸ್.ಎನ್. ಬಳ್ಳಾರಿ ಮಾತನಾಡಿದರು. ಪ್ರೊಬೆಶನರಿ ಡಿಎಸ್ಪಿ ಎಸ್.ಬಿ. ನ್ಯಾಮಗೌಡ್ರ, ಸಿರಾಜ್ ಬಳ್ಳಾರಿ, ಉಮರ್ಫಾರೂಕ್ ಹುಬ್ಬಳ್ಳಿ, ತೈಯಬ್ ಕುನ್ನಿಭಾವಿ, ಮಕ್ಬುಲ್ಸಾಬ ಶಿರಹಟ್ಟಿ ಸೇರಿದಂತೆ ಹಿಂದೂ ಮುಸ್ಲಿಂ ಬಾಂಧವರು ಇದ್ದರು. ಶಹರ ಸಿಪಿಐ ಸಂತೋಷ ಪವಾರ ಸ್ವಾಗತಿಸಿದರು. ಪಿಎಸ್ಐಟಿ ಮಾಂತೇಶ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

