ಗದಗ

ಸ್ನೇಹತ್ವ ಬೆಲೆ ಕಟ್ಟಲಾರದ ಸಂಬಂಧ

Published On :

ಗದಗ: ಸ್ನೇಹತ್ವ ಬೆಲೆ ಕಟ್ಟಲಾರದ ಅಮೂಲ್ಯ ಸಂಬಂಧ ಎಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಹೇಳಿದರು.
ಅವರು ಭಾನುವಾರ ನಗರದ ಹಾಲಕೇರಿ ಅನ್ನದಾನೇಶ್ವರ ಮಠದ ಆವರಣದಲ್ಲಿ ಸ್ನೇಹದ ದಿನ (ಫ್ರೆಂಡ್‌ಶಿಪ್ ಡೇ)ದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಲನೆ ನೀಡಿ ಮಾತನಾಡಿದರು. ಪರಿಚಯವು ಸ್ನೇಹವಾಗಬೇಕು, ಇಂದಿನ ದಿನಗಳಲ್ಲಿ ಮಹಿಳೆಯರು ಒಗ್ಗಟ್ಟಾಗಿ ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕಾದ ಅನಿವಾರ್ಯ ಹಾಗೂ ಅವಶ್ಯಕತೆ ಇದೆ ಎಂದರು. ಗದುಗಿನ ಪಂಚಾಕ್ಷರಿ ನಗರದ ಚಿರನೂತನ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಪಾಟೀಲ, ಜಯಶ್ರೀ ಶ್ರೀಗಿರಿ ಮಾತನಾಡಿದರು. ಕ್ಲಬ್‌ನ ಕಾರ್ಯದರ್ಶಿ ಸುಲೋಚನ ಐಹೊಳಿ, ಸುವರ್ಣ ಹಕ್ಕಾಪಕ್ಕಿ, ನಾಗರತ್ನಾ ಮಾರನಬಸರಿ, ಚಿರನೂತನ ಸಂಸ್ಥೆಯ ರೇಣುಕಾ ಅಮಾತ್ಯ, ಇಂದುಮತಿ ಮೇಟಿ, ವೀಣಾ ಮೆಣಸಿನಕಾಯಿ, ವಿದ್ಯಾ ಹುಲಬನ್ನಿ, ಗದಗ-ಬೆಟಗೇರಿ ನಗರಸಭೆ ಸದಸ್ಯೆ ಶಿವಲೀಲಾ ಅಕ್ಕಿ, ಗೀತಾ ಮೆಣಸಿನಕಾಯಿ, ಪ್ರಭಾ ಜುಕ್ತಿಮಠ, ಭಾರತಿ ಮಾಳೆಕೊಪ್ಪಮಠ, ಗೀತಾ ಮುನವಳ್ಳಿ, ಗೀತಾ ಜುಕ್ತಿಮಠ ಮುಂತಾದವರು ಇದ್ದರು. ಸವಿತಾ ಪಾಟೀಲ ಪ್ರಾರ್ಥಿಸಿದರು. ಪ್ರೇಮಾ ಮೇಟಿ ಸ್ವಾಗತಿಸಿದರು. ಕವಿತಾ ದಂಡಿನ ನಿರೂಪಿಸಿದರು. ಸುವರ್ಣ ವಸ್ತ್ರದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.