ಇಂದು ಮಕ್ಕಳಿಗೆವಚನಾಮೃತ ಉಪನ್ಯಾಸ
ನರಗುಂದ: ಪಟ್ಟಣದ ಕಂಠಿ ಎಜ್ಯುಕೇಶನ್ ಫೌಂಡೇಶನ್ ಹಾಗೂ ಬಸವೇಶ್ವರ ವಿದ್ಯಾಲಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಚನಾಮೃತ ಉಪನ್ಯಾಸ ಕಾರ್ಯಕ್ರಮವು ಆ. 7ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ. ಸಾನ್ನಿಧ್ಯವನ್ನು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಬಸವಕೇಂದ್ರ ಅಧ್ಯಕ್ಷ ಚನ್ನಬಸಪ್ಪ ಕೋರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ, ಹೆಬ್ಬಾಳದ ವೀರೇಶ್ವರ ದೇವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ವಚನಾಮೃತ ಕಾರ್ಯಕ್ರಮ ಪ್ರಾರಂಭ
ನರಗುಂದ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಶರಣರ ಮನೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಆ. 7ರಂದು ಪಟ್ಟಣದ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆ, ಆ. 8ರಂದು ಎಫ್.ಆರ್.ಪಾಟೀಲ ನಿವಾಸದಲ್ಲಿ, ಆ. 9ರಂದು ಎಂ.ಡಿ.ಮಾದರ, 10ರಂದು ಯಲ್ಲಪ್ಪ ಗುಗ್ಗರಿ, 11ರಂದು ಬಾಳಪ್ಪ ಚಕ್ರಸಾಲಿ, 12 ರಂದು ಭೈರನಹಟ್ಟಿ ಗ್ರಾಮದಲ್ಲಿ, 13ರಂದು ಸೋಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 14ರಂದು ಬಸವಲಿಂಗಯ್ಯ ಹಿರೇಮಠ, 15ರಂದು ಮಲ್ಲಪ್ಪ ನಾಗನೂರ, 16ರಂದು ಸರ್ಕಾರಿ ಶಾಸಕರ ಮಾದರಿ ಕೇಂದ್ರ ಶಾಲೆ, 17ರಂದು ಶ್ರೀಶೈಲಪ್ಪ ಸವದಿ, 18ರಂದು ಬಿ.ಎಚ್. ಕ್ಯಾರಕೊಪ್ಪರವರ ಮನೆಯಲ್ಲಿ ಸಂಜೆ 6.30ಕ್ಕೆ ವಚನಾಮೃತ ಕಾರ್ಯಕ್ರಮವು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಲಿದೆ.
ಪಠ್ಯೇತರ ಚಟುವಟಿಕೆ ಉದ್ಘಾಟನೆ ಸಮಾರಂಭ
ಗದಗ: ಜ. ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಆ. 7ರ ಬೆಳಗ್ಗೆ 10 ಗಂಟೆಗೆ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ನೆರವೇರಿಸುವರು. ಅಧ್ಯಕ್ಷತೆಯನ್ನು ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಚೇರ್‌ಮನ್ ಹಾಗೂ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ವಹಿಸುವರು. ಅತಿಥಿಗಳಾಗಿ ಡಾ. ಎಸ್.ಎಲ್. ವಣಿಕ್ಯಾಳ ಆಗಮಿಸುವರು ಎಂದು ಕಾಲೇಜಿನ ಪ್ರಾಚಾರ್ಯ ಬಿ.ಬಿ.ಗೌಡರ ತಿಳಿಸಿದ್ದಾರೆ.
ಇಂದಿನಿಂದ ಅಭಿಷೇಕ
ಗದಗ: ತಾಲೂಕಿನ ಹರ್ತಿ ಬಸವಣ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಆ. 7ರಿಂದ 1 ತಿಂಗಳ ವರೆಗೆ ನಿತ್ಯ 7ಕ್ಕೆ ಬಸವಣ್ಣ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ತಿಂಗಳ ಪ್ರತಿ ಸೋಮವಾರ ವಿಶೇಷ ಅಲಂಕಾರ ಪೂಜೆ, ದಾಸೋಹ ಕಾರ್ಯಕ್ರಮ, ಶ್ರಾವಣ ಕೊನೆ ಸೋಮವಾರ ಸೆ. 2ರಸಂಜೆ 5ಕ್ಕೆ ಮಹಾರಥೋತ್ಸವ ನೆರವೇರಲಿದೆ ಎಂದು ದೇವಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

