ವಿರಕ್ತರಿಗೆ ಬಸವಣ್ಣನವರು ಹೆಚ್ಚು ಪ್ರಸ್ತುತ
ಮುಂಡರಗಿ: ಬಸವಣ್ಣನವರು ವಿರಕ್ತರಿಗೆ ಬಹಳ ಪ್ರಸ್ತುತ ಎಂದು ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು.
ಪಟ್ಟಣದ ತೋಂಟದಾರ್ಯ ಮಠದಲ್ಲಿ ಒಂದು ತಿಂಗಳಕಾಲ ಜರುಗಿದ ವಚನ ಸಂಸ್ಕೃತಿ ದರ್ಶನ ಪ್ರವಚನದ ಮಂಗಲೋತ್ಸವದ ಸಾನ್ನಿಧ್ಯವಹಿಸಿ ಸೋಮವಾರ ರಾತ್ರಿ ಅವರು ಮಾತನಾಡಿದರು. ಬುದ್ಧ, ಬಸವಣ್ಣ, ಮಹಾತ್ಮ ಗಾಂಧಿ ಅವರಿಗೆ ಜಾತಿ, ಮತ, ವರ್ಗ, ವರ್ಣಗಳ ಆವರವಿರಲಿಲ್ಲ. ಬಸವಣ್ಣನವರೂ ವರ್ಗ, ವರ್ಣ, ಲಿಂಗ ಭೇದವಿಲ್ಲದೇ ಈ ಜಗತ್ತನ್ನು ನೋಡಿದಂಥವರು. ಒಂದು ತಿಂಗಳ ಕಾಲ ಬವಣ್ಣನವರ ವಚನಗಳ ಹಾಗೂ ಬಸವಾದಿ ಪ್ರಮುಖರ ವಚನಗಳ ಬಗ್ಗೆ ಕುಮಾರ ದೇವರು ಪ್ರವಚನ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು.
ಮುಂಡರಗಿ ಜನತೆಗೆ ಸಾಂಸ್ಕೃತಿಕ ಮನಸ್ಸಿದೆ. ಇಲ್ಲಿನ ಮಕ್ಕಳ ಅನುಕೂಲಕ್ಕಾಗಿ ಈಗಾಗಲೇ ಸಿಬಿಎಸ್ಇ ಶಾಲೆಯನ್ನು ತೋಂಟದಾರ್ಯ ವಿದ್ಯಾಪೀಠದಿಂದ ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಮುಂಡರಗಿ ಪಟ್ಟಣಕ್ಕೊಂದು ಕ್ರೀಡಾ ತರಬೇತಿ ಶಾಲೆ ಮಾಡುವ ಕನಸು ತಮ್ಮದಾಗಿದೆ. ಶಾಸಕ ರಾಮಕೃಷ್ಣ ದೊಡ್ಡಮನಿ ಇದಕ್ಕೆ ಪ್ರಯತ್ನಿಸಿ ಇಲ್ಲಿನ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. ಶಾಸಕರು ವೃದ್ಧರಿಗೆ, ಅಂಗವಿಕಲರಿಗೆ, ಬಡವರ, ಹಿಂದುಳಿದವರ ಏಳ್ಗೆಗಾಗಿ ತಮ್ಮ ಸೇವೆಯನ್ನು ಮಾಡಬೇಕು. ಎಷ್ಟೋ ಜನರಿಗೆ ಪಡಿತರ ಚೀಟಿ ಇಲ್ಲ, ಆಧಾರ ಕಾರ್ಡ್ಗಳಿಲ್ಲ, ವಾಸಿಸಲು ಮನೆಗಳಿಲ್ಲ. ಇವೆಲ್ಲವುಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಬಸವೇಶ್ವರ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಶ್ರೀಗಳು ಮಾತನಾಡಿ, ಭಾರತದ ಪ್ರಥಮ ವೈಚಾರಿಕ ವ್ಯಕ್ತಿ ಎಂದರೆ ಬಸವಣ್ಣ. ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಚಳವಳಿಕಾರರಾಗಿ ಲಿಂಗಾಯತ ಸಮಾಜದ ಜನತೆ ಶೋಷಣೆಯಿಂದ ಬಳಲಿದಾಗ ಅವರನ್ನು ಮುಕ್ತ ಮಾಡಿದವರು ಬಸವಣ್ಣನವರು. ಅವರು ನೀಡಿದ ದಾಸೋಹ, ಕಾಯಕ, ಸಮಾನತೆಯ ಮೌಲ್ಯಗಳು ನಮಗೆ ಇಂದಿಗೂ ದಾರಿದೀಪವಾಗಿವೆ ಎಂದರು. ಪ್ರವಚನಕಾರ ಕುಮಾರದೇವರು ಪ್ರವಚನಕ್ಕೆ ಮಂಗಲ ಹಾಡಿದರು. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ ಮಾತನಾಡಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಪ್ರವಚನ ಸಮಿತಿ ಅಧ್ಯಕ್ಷ ಧ್ರುವಕುಮಾರ ಹೊಸಮನಿ, ಉಪಾಧ್ಯಕ್ಷ ಪಾಲಾಕ್ಷಿ ಗಣದಿನ್ನಿ, ಖಜಾಂಚಿ ಕೊಟ್ರಯ್ಯ ಅಮರಗೋಳ ಹಿರೇಮಠ, ಸೇವಾ ಸಮಿತಿ ಅಧ್ಯಕ್ಷ ಈಶಣ್ಣ ಬೆಟಗೇರಿ ಇದ್ದರು. ಕೊಟ್ರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಪಿ.ದಂಡಿನ ಹಾಗೂ ಸಂಘಟಿಕರಿಂದ ವಚನಗಾಯನ ಜರುಗಿತು. ಡಿ.ಡಿ. ಮೊರನಾಳ ಸ್ವಾಗತಿಸಿದರು. ಡಾ. ನಿಂಗು ಸೊಲಗಿ ಹಾಗೂ ಎ.ಕೆ. ಮುಲ್ಲಾನವರ ಕಾರ್ಯಕ್ರಮ ನಿರೂಪಿಸಿದರು. ಗಿರೀಶಗೌಡ ಪಾಟೀಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

