ಶ್ರೀನಿವಾಸ ಮಾನೆ ಜನ್ಮದಿನ: ಹಾಲು-ಹಣ್ಣು ವಿತರಣೆ
ಗದಗ: ವಿಪ ಸದಸ್ಯ ಶ್ರೀನಿವಾಸ ಮಾನೆ ಅವರು ದೀನದಲಿತರು ಹಿಂದುಳಿದವರ್ಗ ಸೇರಿದಂತೆ ಎಲ್ಲ ಸಮುದಾಯದ ಹಿತ ಬಯಸುವ ಆದರ್ಶ ಯುವ ನಾಯಕರಾಗಿದ್ದಾರೆ ಎಂದು ರಾಜ್ಯ ಹಮಾಲರ ಒಕ್ಕೂಟ ಹಾಗೂ ಮಹರ್ಷಿ ವಾಲ್ಮೀಕಿ ರಿಜನಲ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಯ್ಯಪ್ಪ ನಾಯ್ಕರ ಹೇಳಿದರು. ಅವರು ಈಚೆಗೆ ಸ್ಥಳೀಯ ರಾಜೀವಗಾಂಧಿ ನಗರದಲ್ಲಿರುವ ಮಹರ್ಷಿ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಹಣ್ಣು-ಹಾಲು ವಿತರಣೆ ಮಾಡುವ ಮೂಲಕ ವಿಪ ಸದಸ್ಯ ಶ್ರೀನಿವಾಸ ಮಾನೆ ಅವರ 40ನೇ ಜನ್ಮದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಧಿಕಾರ ಯಾರಿಗೂ ಶಾಶ್ವತವಲ್ಲ, ಆದರೆ ಅಧಿಕಾರವಿದ್ದಾಗ ನಡೆದುಕೊಳ್ಳುವ ರೀತಿ, ಸರಳತೆ, ಜನಸಾಮಾನ್ಯರ ಸಮಸ್ಯೆಗೆ ಸರಳವಾಗಿ ಸ್ಪಂದಿಸುವ ಮೂಲಕ ಗಳಿಸುವ ಜನರ ಪ್ರೀತಿ ವಿಶ್ವಾಸಗಳು ಚಿರಕಾಲ ಇರುವವು. ಶ್ರೀನಿವಾಸ ಮಾನೆ ಅವರು ಸ್ನೇಹಜೀವಿಗಳು, ಅಧಿಕಾರ ಲಾಲಸೆಯಿಂದ ದೂರವಿದ್ದು, ಸರಳವಾಗಿ ಜನಸಾಮಾನ್ಯರೊಂದಿಗೆ ಬೆರೆತು ಅವರ ಕಷ್ಟ ಸುಖ ವಿಚಾರಿಸುವ ಅವರ ಜಾಯಮಾನ ಎಲ್ಲ ಯುವ ನಾಯಕರಿಗೆ ಮಾದರಿಯಾಗಿದೆ ಎಂದರು. ಗದಗ ಜಿಲ್ಲಾ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ನಿಸ್ಸಾರ್ಅಹ್ಮದ್ ಖಾಜಿ ಮಾತನಾಡಿದರು. ಮಂಜುನಾಥ ನಾಯ್ಕರ, ಮಹಾದೇವಪ್ಪ ತಿರಕಣ್ಣವರ, ಹನುಮಂತಪ್ಪ ಜಾನಗಾರ, ಯಲ್ಲಪ್ಪ ಡೊಕ್ಕನವರ (ರಾಮನಗರ), ಹನುಮಂತಪ್ಪ ಕರಿ, ಎಸ್.ಕೆ. ನದಾಫ, ಮುಕ್ತುಮಸಾಬ ಜೂರಮ್ಮನವರ, ಇಮಾಮಸಾಬ ಕಲೇಗಾರ, ವಾಸು ಹುಯಿಲಗೋಳ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

