ಗದಗ

ಕಲ್ಲು ನಾಗರಕ್ಕೆರೆಯುವ ಹಾಲನ್ನು ಬಡ ಮಕ್ಕಳಿಗೆ ನೀಡಿ: ತೋಂಟದ ಶ್ರೀ

Published On :

ಗದಗ: ಭಾರತ ದೇಶದಲ್ಲಿ ಪ್ರತಿವರ್ಷ ಕೋಟ್ಯಂತರ ಲೀಟರ್ ಹಾಲು ಕಲ್ಲು ನಾಗರಕ್ಕೆ ಹಾಲೆರೆವ ಮೂಲಕ ಪೋಲಾಗುತ್ತಿರುವುದು ವಿಷಾದನೀಯ. ಕಲ್ಲು ನಾಗರಕ್ಕೆ ಪೌಷ್ಟಿಕಾಂಶವುಳ್ಳ ಹಾರು ಎರೆದು ಅದನ್ನು ಪೋಲು ಮಾಡುವ ಬದಲು ಬಡ-ಅನಾಥ ಮಕ್ಕಳಿಗೆ ನೀಡುವುದು ಅತ್ಯಂತ ಅರ್ಥಪೂರ್ಣ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಭಾನುವಾರ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆ, ಮಲ್ಲಸಮುದ್ರ ಹಾಗೂ ಸರ್ಕಾರಿ ಹೆರಿಗೆ ಆಸ್ಪತ್ರೆ, ಮಸಾರಿ ಈ ಭಾಗಗಳಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್, ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ಬಡಮಕ್ಕಳು, ರೋಗಿಗಳಿಗೆ ಹಾಲುಣಿಸುವ ಹಬ್ಬದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಹಾವಿಗೆ ಹಾಲೆರೆಯುವುದು ಅದರ ಮೇಲಿನ ಭಕ್ತಿಯಿಂದಲ್ಲ, ಹೆಚ್ಚಾಗಿ ಅದರ ಮೇಲಿರುವ ಭಯದಿಂದ. ಅಲ್ಲದೆ ಅಂಡಜ ಪ್ರಾಣಿಯಾಗಿರುವ ಹಾವಿಗೆ ಹಾಲು ಅದರ ಆಹಾರವೇ ಅಲ್ಲ. ಕೆಲವೆಡೆ ಜೀವಂತ ಹಾವುಗಳಿಗೆ ಹಾಲು ಕುಡಿಸುವ ಭರದಲ್ಲಿ ಅವುಗಳಿಗೆ ಹಿಂಸೆ ನೀಡುವುದೂ ತಪ್ಪು. ಇಂತಹ ವೈಚಾರಿಕ ವೈಜ್ಞಾನಿಕ ಯುಗದಲ್ಲಿಯೂ ಧಾರ್ಮಿಕ ಕಂದಾಚಾರಗಳು ನಡೆಯುತ್ತಿರುವುದು ವಿಷಾದನೀಯ. ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಕಲ್ಲುನಾಗರ ಕಂಡರೆ ಹಾಲೆರೆ ಎಂಬುವರು ದಿಟ ನಾಗರ ಕಂಡರೆ ಕೊಲ್ಲೆಂಬುವರಯ್ಯ ಎಂದು ನುಡಿದಿರುವುದು ಇಲ್ಲಿ ಸ್ಮರಣೀಯ.
ಸಕಲ ಜೀವಾತ್ಮರಿಗೆ ಲೇಸಬಯಸಿದ ಬಸವಣ್ಣನವರು ಐಕ್ಯರಾದ ದಿನದ ಸ್ಮರಣಾರ್ಥ ಬಸವ ಪಂಚಮಿಯನ್ನು ಬಸವಾಭಿಮಾನಿಗಳು ಹಾಲುಣಿಸುವ ಹಬ್ಬವಾಗಿ ಆಚರಿಸುವ ಮೂಲಕ ಕಲ್ಲು ನಾಗರಕ್ಕೆ ಹಾಲೆರೆವ ಧಾರ್ಮಿಕ ಕಂದಾಚಾರವನ್ನು ನಿರಾಕರಿಸುವುದು ಅತ್ಯಂತ ಸ್ತುತ್ಯ ಕಾರ್ಯ. ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವುದು ಸಂತಸ, ಹೆಮ್ಮೆಯ ಸಂಗತಿ ಎಂದರು. ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ಸಿ.ಬಿ. ಹಿರೇಗೌಡರ ಸ್ವಾಗತಿಸಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಅಸುಂಡಿ ನಿರೂಪಿಸಿದರು. ಸುಮಾರು ನೂರು ಲೀಟರಗಿಂತಲೂ ಹೆಚ್ಚು ಹಾಲು ವಿತರಣೆ ಮಾಡಲಾಯಿತು.ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಕೆ.ಎಲ್. ಜೈನ್, ರಾಚಪ್ಪ ಮುನವಳ್ಳಿ, ಡಾ. ಎಸ್.ಎಂ. ಓಣಿ, ಗಂಗಾಧರ ದೇವರು, ಶಿವಲೀಲಾ ಕುರಡಗಿ, ವೀರಣ್ಣ ಹೊನಗಣ್ಣನವರ, ಗುರು ತಡಸದ, ಶೇಖರ ಕವಳಿಕಾಯಿ, ಬಸವರಾಜ ಹಿರೇಹಡಗಲಿ, ಈಶಣ್ಣ ಮುನವಳ್ಳಿ, ಶಿವಯ್ಯ ನಾಲತ್ವಾಡಮಠ, ರಾಜಣ್ಣ ಪಟ್ಟಣಶೆಟ್ಟಿ, ಸಿದ್ಧಲಿಂಗಯ್ಯ ಹಿರೇಮಠ, ಎಂ.ಎ. ಹಂಚಿನಾಳ, ಕೆ.ವಿ. ಗೋಣಿ, ವಿ.ಕೆ. ಕರಿಗೌಡರ, ದಾನಯ್ಯ ಗಣಾಚಾರಿ, ಎಸ್.ಎ. ಮೂಗದ, ಎನ್.ಎಸ್. ಹಿರೇಸಕ್ಕರಗೌಡರ, ಗಿರಿಜಕ್ಕ ಧರ್ಮರೆಡ್ಡಿ, ಗೌರಕ್ಕ ಬಡಿಗಣ್ಣವರ, ಮಂಜುಳಾ ಹಾಸಿಲಕರ, ಲೀಲಾವತಿ ಬೊಳ್ಳೊಳ್ಳಿ, ಶ್ರೀದೇವಿ ಪಾಟೀಲ, ಪಾರ್ವತೆಮ್ಮ ಅಂಗಡಿ, ಶಂಕರಪ್ಪ ಅಂಗಡಿ, ಎಸ್.ಎನ್. ಹಕಾರಿ, ಅಶೋಕ ಬಂಡೆಪ್ಪ, ರಾಜು ಇಟಗಿ, ಎ.ಎಸ್. ಚವಡಿ, ಈರಣ್ಣ ಗೋಟಡಕಿ, ಶಂಕರಣ್ಣ ತಡಸದ, ನೀಲಮ್ಮ ಬೇವಿನಮರದ, ಅನ್ನಪೂರ್ಣಕ್ಕ ಬಡಿಗಣ್ಣನವರ, ಎಸ್.ಎಸ್. ಕಳಸಾಪುರ, ಸುಮಂಗಲಾ ಹೊಸಂಗಡಿ, ರೇಣಮ್ಮ ರಾಮನಗೌಡರ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.