ಯುವಕರಲ್ಲಿ ವೈಚಾರಿಕ ಮನೋಭಾವ ಇರಲಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ. 12
ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ತೊಲಗಿಸಿ ವೈಚಾರಿಕ ಮನೋಭಾವ ಯುಕ್ತ ಸಮಾಜ ನಿರ್ಮಾಣದತ್ತ ಯುವ ಸಮೂಹ ಮುಂದಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದ ಸಹಕಾರವು ಅಗತ್ಯ ಎಂದು ಬಸವಕೇಂದ್ರ ಅಧ್ಯಕ್ಷ ಬಸವರಾಜ ಹೂಗಾರ ಹೇಳಿದರು.
ಅವರು ಸ್ಥಳೀಯ ಕೆಜಿಎಂಎಸ್ ಶಾಲೆಯಲ್ಲಿ ಬಸವ ಪಂಚಮಿ ಪ್ರಯುಕ್ತ ಬಸವಕೇಂದ್ರ ವತಿಯಿಂದ ಶಾಲಾ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿ, ಸಂಪ್ರದಾಯ ಹೆಸರಿನಲ್ಲಿ ದುಂದು ವೆಚ್ಚಮಾಡಿ ವಾಸ್ತವಿಕತೆಯನ್ನು ಮರೆಯುತ್ತಿರುವುದು ಶೋಚನೀಯ. ಮಾನವೀಯ ಮೌಲ್ಯಗಳಿಗೆ ತೊಡಕನ್ನುಂಟು ಮಾಡುವ ಅಸಂಬದ್ಧ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ವೈಚಾರಿಕ ಜೀವನಕ್ಕೆ ಆದ್ಯತೆ ನೀಡಿ ಎಂದರು.
ಉಪನ್ಯಾಸಕ ಬಿ.ಕೆ. ಮಾದಿ ಮಾತನಾಡಿ, ಕಂದಾಚಾರಗಳು ಸಮಾಜವನ್ನು ಅಧೋಗತಿಗೆ ತಳ್ಳುತ್ತವೆ. ಇಂತಹ ಆಚರಣೆಗಳ ಬದಲಿಗೆ ಶರಣ ಸಂಕುಲದ ಪರಿಕಲ್ಪನೆಯ ಆಚರಣೆಯತ್ತ ಗಮನ ಹರಿಸುವುದು ಸೂಕ್ತ. ಇಂತಹ ಆರೋಗ್ಯಕರ ಚಿಂತನೆಗಳನ್ನು ಮಕ್ಕಳಿಗೆ ಬೋಧಿಸುವಲ್ಲಿ ಶಿಕ್ಷಕ ಸಮೂಹ ಮುಂದಾಗಬೇಕು ಎಂದರು. ಕೆ.ಡಿ ಭಜಂತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಮೇಲುಸ್ತುವಾರಿ ಅಧ್ಯಕ್ಷ ರವಿಕುಮಾರ ಹಾಸಿಗಲ್ಲ, ಅಪ್ಪು ಮತ್ತಿಕಟ್ಟಿ, ಶಶಿಧರ ಉಕ್ಕಿಸಲು, ಕುಮಾರ ಸಂಗಮದ, ಶರಣಪ್ಪ ಪುರ್ತಗೇರಿ, ನಾರಾಯಣ ಬಾಕಳೆ, ಶರಣಪ್ಪ ಬೇವಿನಕಟ್ಟಿ, ನಟರಾಜ ಕುಂಬಾರ, ಡಿ.ಬಿ. ಹಿರೇಮಠ, ಪಿ.ಪಿ. ಅಂಬೋರೆ ಉಪಸ್ಥಿತರಿದ್ದರು. ಎಸ್.ಎಸ್. ಜಾಧವ ಪ್ರಾರ್ಥಿಸಿದರು. ಪಿ.ಎನ್. ಸಳಗಾಂವಕರ ಸ್ವಾಗತಿಸಿದರು. ಎಸ್.ಕೆ. ಮಠದ ನಿರೂಪಿಸಿದರು. ಡಿ.ವಿ. ಕೆಂಬಾವಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

