ಗದಗ

ಮಹಿಳೆಯರಲ್ಲಿನ ಮೂಢನಂಬಿಕೆ ತೊಲಗಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 16
ಮಹಿಳೆಯರಲ್ಲಿರುವ ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ಅಳಿಸಿ, ಅವರನ್ನು ಮಾನಸಿಕವಾಗಿ ಸದೃಢ ಮಾಡಲು ಪ್ರಗತಿಪರ ಮಹಿಳಾ ಸಂಘಟನೆಗಳು ಮುಂದಾಗಬೇಕೆಂದು ಜಿಲ್ಲಾ ಹೆರಿಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎಲ್.ವಿ. ಪಾಟೀಲ ಹೇಳಿದರು.
ಅವರು ಭಾನುವಾರ ಗದಗ ಬೆಟಗೇರಿ ಇನ್ನರ್‌ವೀಲ್ ಕ್ಲಬ್‌ನವರು ಗದಗ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ನಾಗರಪಂಚಮಿಯಂದು ಬಾಣಂತಿಯರಿಗಾಗಿ ಆಯೋಜಿಸಿದ್ದ ಹಾಲು-ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮದ ಹೆಸರಿನಲ್ಲಿ ಅಂಧಕಾರವು ಕೆಲವೆಡೆ ತುಂಬಿದೆ. ಮೂಢನಂಬಿಕೆ ಎಲ್ಲೆಡೆ ಇದೆ. ಅದನ್ನು ಹೋಗಲಾಡಿಸಲು ಮಹಿಳೆಯರು ಮುಂದಾಗಬೇಕು. ಕಲ್ಲು ನಾಗರಕ್ಕೆ ಹಾಲು ಎರೆದರೆ ಹರಿದು ಹೋಗುವುದು. ಅದನ್ನೇ ಬಾಣಂತಿಯರಿಗೆ ಕೊಟ್ಟರೆ ಅವರ ಆರೋಗ್ಯ ಸುಧಾರಿಸುವುದು. ಈ ನಿಟ್ಟಿನಲ್ಲಿ ಇಂತಹ ಕೆಲಸ ಕೈಗೊಂಡ ಇನ್ನರ್‌ವೀಲ್ ಕಾರ್ಯವನ್ನು ಪ್ರಶಂಸಿಸಿದರು. ಅಧ್ಯಕ್ಷತೆ ವಹಿಸಿದ್ದ ಕ್ಲಬ್‌ನ ಅಧ್ಯಕ್ಷೆ ಅನ್ನಪೂರ್ಣಾ ವರವಿ ಮಾತನಾಡಿ, ಧರ್ಮದ ಭಕ್ತಿ ನಮ್ಮಲ್ಲಿರಬೇಕು. ಆದರೆ, ಮೂಢನಂಬಿಕೆಗಳ ಭಕ್ತಿ ಭಾವ ಬೇಡ. ಅದನ್ನು ತೆಗೆದಿರಿಸಲು ನಾವಿಂದು ಹೋರಾಡಬೇಕಾಗಿದೆ. ನಾಗರಪಂಚಮಿ ನಾಡಿಗೆ ದೊಡ್ಡ ಹಬ್ಬ. ಆದರೆ, ಹಾಲು ಇಲ್ಲಿ ವ್ಯಯವಾಗದೇ ಅದು ಸತ್ಕಾರ್ಯಕ್ಕೆ ಸದ್ವಿನಿಯೋಗವಾಲಿ ಎಂದರು.  ಆಸ್ಪತ್ರೆಯಲ್ಲಿರುವ ಎಲ್ಲ ಬಾಣಂತಿಯರಿಗೆ ಹಾಲು-ಹಣ್ಣು ವಿತರಿಸಲಾಯಿತು. ಕ್ಲಬ್ ಕಾರ್ಯದರ್ಶಿ ಸುಲೋಚನಾ ಐಹೊಳಿ ಸ್ವಾಗತಿಸಿದರು. ಸಹನಾ ಹಿರೇಮಠ ನಿರೂಪಿಸಿದರು.
ಆಶಾ ಹುಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುವರ್ಣ ವಸ್ತ್ರದ ವಂದಿಸಿದರು. ಎಸ್.ವಿ. ಇಟಗಿ, ಡಾ. ಪುರದ, ಪ್ರೊ. ಐ.ಐ. ಪಟ್ಟಣಶೆಟ್ಟಿ, ಎಚ್.ಎಸ್. ಪಾಟೀಲ, ಸುಭಾಸ ಬಬಲಾದಿ ಹಾಗೂ ಶಾಂತಾ ನಿಂಬಣ್ಣವರ, ಮೀನಾಕ್ಷಿ ಸಜ್ಜನರ, ಆಶಾ ಹುಕ್ಕೇರಿ, ಶಾಂತಾ ಹುಕ್ಕೇರಿ, ಯಶೋಧರಾ ಬಸರಿಗಿಡದ, ರಾಜೇಶ್ವರಿ ಬಳ್ಳಾರಿ, ಶಾಂತಾ ಗೌಡರ,      ಪಾರ್ವತಿದೇವಿ ಮಾಳೇಕೊಪ್ಪಮಠ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.