ನಾಳೆಯಿಂದ ಅಂತರ್ ಮಹಾವಿದ್ಯಾಲಯಗಳ ಪುರುಷರ ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿ
ಗದಗ: ಸ್ಥಳೀಯ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಆ. 25ರಿಂದ 27ರ ವರೆಗೆ ಕರ್ನಾಟಕ ವಿವಿ ವ್ಯಾಪ್ತಿಯ ಅಂತರ್ ಮಹಾವಿದ್ಯಾಲಯಗಳ ಪುರುಷರ ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿ, ವಿಶ್ವವಿದ್ಯಾಲಯ ತಂಡದ ಆಯ್ಕೆ ಜರುಗಲಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ.ಎಲ್. ಗುಳೇದಗುಡ್ಡ ಹೇಳಿದರು. ಅವರು ಶುಕ್ರವಾರ ಮಹಾವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ. 25, 26ರಂದು ಪಂದ್ಯಾವಳಿಯನ್ನು ಆಯೋಜಿಸಿದ್ದು, ಆ. 27ರಂದು ಯುನಿವರ್ಸಿಟಿ ಬ್ಲೂ ಆಯ್ಕೆಯೊಂದಿಗೆ ತಮಿಳುನಾಡು ರಾಜ್ಯದಲ್ಲಿ ಜರುಗುವ ಅಂತರ್ ರಾಜ್ಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕರ್ನಾಟಕ ವಿವಿ ತಂಡದ ಆಯ್ಕೆ ನಡೆಯಲಿದೆ. ಧಾರವಾಡ, ಹಾವೇರಿ, ಕಾರವಾರ ಮತ್ತು ಗದಗ ಜಿಲ್ಲೆಯ ವಿವಿಧ ವಿದ್ಯಾಲಯಗಳಿಂದ ಸುಮಾರು 30 ತಂಡಗಳು, 300 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಆ. 25ರ ಬೆಳಗ್ಗೆ 10ಕ್ಕೆ ಚಾಲನೆ ದೊರೆಯಲಿದ್ದು, ನಗರಸಭೆಯ ಮಾಜಿ ಸದಸ್ಯ, ಕಾಲೇಜಿನ ಹಳೆ ವಿದ್ಯಾರ್ಥಿ ಬಲರಾಮ ಬಸವಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಆದರ್ಶ ಶಿಕ್ಷಣ ಸಮಿತಿಯ ಅಧ್ಯಕ್ಷ ವಿ.ಆರ್. ಕುಷ್ಟಗಿ ವಹಿಸುವರು. ಆ. 26ರ ಬೆಳಗ್ಗೆ 11ಕ್ಕೆ ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಂ.ಎಲ್. ಗುಳೇದಗುಡ್ಡ ವಹಿಸುವರು. ಪಿ.ಆರ್. ವಡವಿ ಆಗಮಿಸುವರು. ಆ. 27ರಂದು ಯುನಿವರ್ಸಿಟಿ ಬ್ಲೂ ಆಯ್ಕೆ ಜರುಗಲಿದೆ ಎಂದರು. ಪ್ರೊ. ಸಿ.ಎಂ. ಪಾಟೀಲ, ಐ.ವಿ. ಬೆಳ್ಳಿಕಟ್ಟಿ, ಎಸ್.ಎಚ್. ಕಲಗುಡಿ, ಬಿ.ಪಿ. ಜೈನರ್ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

