ಬಸವಾನಂದರು ಉತ್ತಮ ಸಾಧಕರು: ತೋಂಟದ ಸಿದ್ದಲಿಂಗ ಶ್ರೀಗಳು
ಗದಗ: ಬಸವಾನಂದ ಶ್ರೀಗಳು ಯೋಗ ಹಾಗೂ ಸಾತ್ವಿಕವಾದ ಆಹಾರ ವಿಹಾರ, ನೈಸರ್ಗಿಕ ಚಿಕಿತ್ಸೆ ಪದ್ದತಿ ಕುರಿತು ಜನಜಾಗೃತಿಗೆ ಸದ್ದಿಲ್ಲದೆ ಶ್ರಮಿಸುತ್ತಿರುವ ಉತ್ತಮ ಸಾಧಕರಾಗಿದ್ದಾರೆ ಎಂದು ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು.
ಅವರು ಈಚೆಗೆ ನಗರದ ಸ್ಥಾನಿಕವಾಸಿ ಜೈನ ಭವನದಲ್ಲಿ ಕಳೆದ 5 ದಿನಗಳ ಕಾಲ ನಡೆದ ರೋಗದಿಂದ ಯೋಗದ ಕಡೆಗೆ ಹಾಗೂ ಆಧ್ಯಾತ್ಮಿಕ ಪ್ರವಚನ ಶಿಬಿರದ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜ. ತೋಂಟದಾರ್ಯ ಮಠದಲ್ಲಿ 6 ವರ್ಷಗಳ ಕಾಲ ತಂಗಿದ್ದ ಬಸವಾನಂದ ಶ್ರೀಗಳು ತಮ್ಮೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧ ಸ್ಮರಿಸಿದ ಶ್ರೀಗಳು, ಮಹಾತ್ಮಾಗಾಂಧೀಜಿ ತಮ್ಮ ದೈನಂದಿನ ಪ್ರಾರ್ಥನೆ-ಧ್ಯಾನದ ಮೂಲಕ ಜನರಿಗೆ ಯೋಗ ಪ್ರಾರ್ಥನೆಯ ಪ್ರಭಾವ ಬೆಳೆಸಿದರೆ ಅವರ ನಂತರ ಭಾರತದಲ್ಲಿ ಈಗಿನ ತಲೆಮಾರಿಗೆ ಯೋಗಾಚರಣೆಯನ್ನು ಜನಪ್ರಿಯಗೊಳಿಸಿದ ಕೀರ್ತಿ ರಾಮದೇವ ಬಾಬಾರಿಗೆ ಸಲ್ಲುವುದು ಎಂದರು.
ಮನಗುಂಡಿ ಆಶ್ರಮದ ಅಧ್ಯಕ್ಷ ಬಸವಾನಂದ ಶ್ರೀಗಳು ಪ್ರಾಸ್ತಾವಿಕ ಮಾತನಾಡಿದರು. ಕೆ.ಎಲ್. ಜೈನ, ಹರಕಚಂದ ಪಾಲರೇಚಾ, ಡಿ.ಜಿ.ಎಂ. ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಜಿ.ಬಿ. ಪಾಟೀಲ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಜಿ. ಪಲ್ಲೇದ, ಕಿಶನ್ಲಾಲ ಬಾಗಮಾರ, ರಮೇಶ ಬಿದಾಮಿಯಾ, ಭವರಲಾಲ ಓಸ್ವಾಲ, ಪೃಥ್ವಿರಾಜ ಭಾಪಣಾ, ಶಿವಕುಮಾರ ರಾಮನಕೊಪ್ಪ, ರೂಪಚಂದ ಜೈನ, ಬಾಗಮಾರ, ಮುಲ್ತಾನಮಲ್, ಜಯಂತಿಲಾಲ ಕವಾಡ, ಇಂದ್ರಮಲ್ಜಿ ಭಾಪಣಾ ಇದ್ದರು. ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು. ಮಂಜುಳಾ ಹಾಸೀಲಕರ ನಿರೂಪಿಸಿದರು. ಬಸವರಾಜ ಹಿರೇಹಡಗಲಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

