ಹೆಚ್ಚುವರಿ ಶಿಕ್ಷಕರನ್ನಾಗಿಸುವುದು ಕೈಬಿಡಿ
ಗದಗ: ಅನುದಾನಿತ ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನಾಗಿ ಗುರುತಿಸುವ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ಈಚೆಗೆ ಗದಗ ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅನುದಾನಿತ ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ, ಸ್ಥಳ, ನಿಯುಕ್ತಿಗೊಳಿಸುವ ಕ್ರಮ ಅವೈಜ್ಞಾನಿಕಯಾಗಿದೆ.
ಕರ್ನಾಟಕ ಸರ್ಕಾರವು ಈಗಾಗಲೇ ಮಕ್ಕಳ ಶಿಕ್ಷಣ ಹಕ್ಕು ಸಮಗ್ರ ಮತ್ತು ನಿರಂತರ ಮೌಲ್ಯ ಮಾಪನ ಪದ್ಧತಿ ಜಾರಿಗೊಳಿಸಿರುವುದರಿಂದ ಪ್ರತಿ ವರ್ಗಕ್ಕೆ 40 ವಿದ್ಯಾರ್ಥಿಗಳು ಇರಬೇಕು. ಆದರೆ, ಪ್ರಸ್ತುತ ಸಂದರ್ಭ ಒಂದು ವರ್ಗಕ್ಕೆ 70 ವಿದ್ಯಾರ್ಥಿಗಳು ಎಂಬುದಾಗಿ ಪರಿಗಣನೆಗೆ ತೆಗೆದುಕೊಂಡು ವಿದ್ಯಾರ್ಥಿಗಳ ತಲೆ ಎಣಿಕೆ ಮಾಡಿಕೊಂಡು ಹೆಚ್ಚುವರಿ ಶಿಕ್ಷಕರನ್ನಾಗಿ ಗುರುತಿಸುವುದು ಅವೈಜ್ಞಾನಿಕ ಕ್ರಮವಾಗಿದೆ. ಈ ಅವೈಜ್ಞಾನಿಕ ಕ್ರಮ ಕೈಬಿಡುವಂತೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ನಿಯಮಾವಳಿಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ವರ್ಷದ ಮಧ್ಯಂತರದಲ್ಲಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತಕ್ಕಂತಹ ಅನಾನುಕೂಲತೆ ತಪ್ಪಿಸಿ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಕೆ.ಬಿ. ಭಜಂತ್ರಿ, ಎಂ.ವಿ. ಸೂರಗೊಂಡ, ಎ.ಎಸ್. ದೇಶನೂರ, ಜಿ.ವಿ. ಹಿರೇಮಠ, ಬಿ.ಎಫ್. ಬೆನಕಣ್ಣವರ, ಬೋರಗಾವಿ, ವಿ.ಬಿ. ಅಂಗಡಿ, ಎಸ್.ಬಿ. ಕಿತ್ತೂರ, ಪಿ.ಬಿ. ಹುಣಸಿಮರದ, ಎನ್.ಎಸ್. ಹಂಜಗಿ, ಟಿ.ಎಸ್. ಬಂಡಿಹಾಳ, ಸಿ.ಆರ್. ಹಿರೇಮಠ, ಎನ್.ವಿ. ಪಾಟೀಲ, ಬಿ.ಎಸ್. ಹೊನಗುಡಿ, ಡಿ.ಎಸ್. ಅಂಗಡಿ, ಎಸ್.ಜಿ. ಕೊಲ್ಮಿ, ಜಿ.ಎಸ್. ಕಾಳೆ, ಎಸ್.ಎಂ. ಹಳೇಮನಿ, ಎಸ್.ಎಚ್. ಕೆಂಗುಡಪ್ಪನವರ, ಎಂ.ಎಸ್. ಸರ್ವಿ, ಆರ್.ಎಸ್. ಗಾರ್ಗಿ, ಕೆ.ಸಿ. ಹಿರೇಮಠ, ಎನ್.ವಿ. ಜೋಷಿ, ಸಿ.ಎನ್. ರುದ್ರಾಂಬಾ, ಎಂ.ವಿ. ರೊಟ್ಟಿ, ಎಸ್.ಜಿ. ಸೊಲ್ಲಾಪುರ, ಕೆ.ಐ. ಪಾಟೀಲ, ಐ.ಎಂ. ಮಾನೇದ, ಎಂ.ಬಿ. ಹೋಳಿ, ಎಸ್.ಎ. ಜಮಾದಾರ, ಎಚ್.ಪಿ. ಹಿರೇಮಠ, ಬಿ.ಜಿ. ಮೆಣಸಗಿ, ಆರ್.ಎಲ್. ಹಂಸನೂರ, ಬಿ.ವೈ. ಹೊರಪೇಟ, ವೈ.ವೈ. ಉಣಕಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

