ಗದಗ

ಗ್ರಾಮೀಣಾಭಿವೃದ್ಧಿಗೆ ಉತ್ತಮ ಸಾರಿಗೆ ವ್ಯವಸ್ಥೆ ಅವಶ್ಯ: ಶಾಸಕ ಯಾವಗಲ್ಲ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಆ. 26
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಉತ್ತಮ ಸಾರಿಗೆ ವ್ಯವಸ್ಥೆ ಹಾಗೂ ರಸ್ತೆಗಳು ಅವಶ್ಯಕ ಎಂದು ಶಾಸಕ ಬಿ.ಆರ್. ಯಾಗವಲ್ಲ ಹೇಳಿದರು.
ಅವರು ಸೋಮವಾರ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾಗಿರುವ ಗ್ರಾಮೀಣ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಜನತೆ ಬಹುದಿನಗಳಿಂದ ಮಿನಿ ವಿಧಾನಸೌಧ ಮತ್ತು ನೀರಾವರಿ ಕಾಲನಿ ಹತ್ತಿರ ಇರುವ ಜನತಾ ಕಾಲನಿಗೆ ಮಿನಿ ಬಸ್‌ಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸುತ್ತಿದ್ದು, ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕು. ಇದರೊಟ್ಟಿಗೆ ಈ ಭಾಗದ ರೈತರ ಪ್ರಮುಖ ಸಮಸ್ಯೆ ಎಂದರೆ ಕಾಲುವೆಗಳ ಕೊನೆಯಲ್ಲಿರುವ ರೈತರ ಜಮೀನುಗಳಿಗೆ ಸರಿಯಾದ ಪ್ರಮಾಣದ ನೀರು ತಲುಪುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕು ಎಂದರು.  ಚಂಬಣ್ಣ ವಾಳದ, ಎಸ್.ಡಿ. ಕೊಳ್ಳಿ, ವಿಠ್ಠಲ ಶಿಂದೆ, ಗುರುಪಾದಪ್ಪ ಕುರಹಟ್ಟಿ, ಶಿವನಗೌಡ ಹೆಬ್ಬಳ್ಳಿ, ಎಂ.ಎಂ. ಮುಳ್ಳೂರ, ದೇಸಾಯಗೌಡ ಪಾಟೀಲ, ಪ್ರವೀಣ ಯಾವಗಲ್, ಪುರಸಭೆ ಸದಸ್ಯ ಸಿ.ಬಿ. ಪಾಟೀಲ, ಎಸ್.ಆರ್. ಪಾಟೀಲ, ದೇವರಡ್ಡಿ ವೆಂಕರಡ್ಡಿ, ನಾಗಪ್ಪ ನವಲಗುಂದ, ಮಹೇಶ ಬಡಿಗೇರ, ಅಶೋಕ ಪತ್ರಿ, ವ್ಯವಸ್ಥಾಪಕ ಡಿ.ಎಂ. ಜಾಧವ, ಎಂ.ಬಿ. ಹೊಸಮನಿ, ಆರ್.ಎನ್. ತಹಸೀಲ್ದಾರ್, ಎಲ್.ಡಿ. ಗಾಳಿ, ಬಿ.ಬಿ. ರೆಳ್ಳಿ, ಬಿ.ಎಸ್. ಪಾಟೀಲ, ಮುದೋಳೆ, ಮಕ್ತಮಸಾಬ ಸಾವಟಿಗಿ ಮುಂತಾದವರು ಹಾಜರಿದ್ದರು.
--
ಸ್ವಾತಂತ್ರ್ಯ-ಮಹಾನ್ ಪುರುಷರ ಹೋರಾಟದ ಫಲ
ಗದಗ: ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮಂಗಲಪಾಂಡೆ ಸೇರಿದಂತೆ ಅನೇಕ ಮಹಾನ್ ಪುರುಷರು ಬ್ರಿಟಿಷರ ವಿರುದ್ಧ ಹೋರಾಡಿದ ಪರಿಣಾಮವೇ ಇಂದು ನಾವೆಲ್ಲ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದು ಗದಗ-ಬೆಟಗೇರಿ ನಗಸಭೆಯ ಸದಸ್ಯ ಮಂಜುನಾಥ ಮುಳಗುಂದ ಹೇಳಿದರು.
ಅವರು ಭಾನುವಾರ ಸಂಜೆ ಬೆಳಗಾವಿಯಿಂದ ಬೆಟಗೇರಿಗೆ ಆಗಮಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಮರ ಜ್ಯೋತಿ ಜಾಥಾವನ್ನು ಸ್ವಾಗತಿಸಿ ಮಾತನಾಡಿದರು. ನಾವೆಲ್ಲರೂ ಭಾರತಾಂಬೆಯ ಮಕ್ಕಳಾಗಿದ್ದು, ಜಾತಿ-ಮತ, ಭೇದ-ಭಾವ ಮಾಡದೆ ಸಹೋದರರಾಗಿ ಬಾಳೋಣ, ಸಾಕಷ್ಟು ದೇಶಭಕ್ತರ ಪ್ರಾಣ ತ್ಯಾಗದಿಂದ ಪಡೆದ ಈ ಅಮೂಲ್ಯವಾದ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ನಗರಸಭೆ ಸದಸ್ಯ ಸುರೇಶ ಕಟ್ಟಿಮನಿ ಮಾತನಾಡಿ, ಮಹಾನ್ ದೇಶಭಕ್ತರ ಹೋರಾಟದಿಂದ ಕೋಮಸೌಹಾರ್ದ, ಶಾಂತಿಗೆ ಇನ್ನೊಂದು ಹೆಸರೇ ಭಾರತ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿದ್ದೇವೆ. ನಮ್ಮಲ್ಲಿರುವ ಕೀಳರಿಮೆಯನ್ನು ತೊರೆದು ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ ಎಂದರು. ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ನಗರಸಭೆಯ ಸದಸ್ಯ ಅನಿಲ ಸಿಂಗಟಾಲಕೇರಿ, ರುದ್ರಣ್ಣ ಗುಳಗುಳಿ, ಗಣೇಶಸಿಂಗ್ ಬ್ಯಾಳಿ, ಅನಿಲ ವೈದ್ಯ, ಉಮೇಶ ಕುಲಕರ್ಣಿ, ಬಿ.ಎಚ್. ಚಕ್ರಣ್ಣವರ, ಬಿ.ಎಫ್. ಕಂಬಳಿ, ನಾಗರಾಜ ಮೆಣಸಗಿ, ಡಿ.ಎಲ್. ಗುರಿಕಾರ, ರವಿ ಜೋಗಿನ, ಪರಶುರಾಮ ಜಂಬಗಿ, ವೈ.ಕೆ. ಚೌಡಾಪುರ, ವಿ.ಎನ್. ಮರೇಗುದ್ದಿ, ಜಿ.ಎಂ. ಹಕಾರಿ, ಸಂಜಯ ಸಿಂದಿಗೇರಿ, ಸುಜಾತಾ ಕಳ್ಳಿಮನಿ, ರೇಣುಕಾ ಪೂಜಾರ ಜ್ಯೋತಿಯನ್ನು ಬರಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.