ಸಂಘಗಳ ಸದಸ್ಯರು ಆರ್ಥಿಕ ಅಭಿವೃದ್ಧಿಗೆ ಗಮನ ನೀಡಲಿ
ಕನ್ನಡಪ್ರಭ ವಾರ್ತೆ, ರೋಣ, ಆ. 26
ದೈನಂದಿನ ವೃತ್ತಿಯ ಜತೆಗೆ ಹೊಂದಿಕೊಳ್ಳುವಂತಹ ಆದಾಯ, ಉತ್ಪನ್ನ ಚಟುವಟಿಕೆ ಹಮ್ಮಿಕೊಳ್ಳುವುದರ ಮೂಲಕ ಸ್ವ-ಸಹಾಯ ಸಂಘದ ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಲ್ಲಿ ಸಂಘಗಳು ಸಬಲೀಕರಣಗೊಳ್ಳುತ್ತವೆ ಎಂದು ಜಿಲ್ಲಾ ಜಲಾನಯನ ಅಧಿಕಾರಿ ಶಿವನಗೌಡ ಪಾಟೀಲ ಹೇಳಿದರು.
ಅವರು ಈಚೆಗೆ ಪಟ್ಟಣದ ಸಿದ್ಧಾರೂಢ ಸಭಾಭವನದಲ್ಲಿ ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ, ಗದಗ ಹಾಗೂ ರೋಣ ಪ್ರಿಯದರ್ಶಿನಿ ಸ್ವಯಂ ಉದ್ಯೋಗ ತರಬೇತಿ ಹಾಗೂ ಗ್ರಾಮೀಣ ಸೇವಾ ಸಂಸ್ಥೆ ರೋಣ ಇವರುಗಳ ಆಶ್ರಯದಲ್ಲಿ ಜರುಗಿದ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯಡಿಯಲ್ಲಿ ರಚಿತವಾದ ಸ್ವ-ಸಹಾಯ ಸಂಘಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
ಯೋಜನೆಯಡಿ ಪ್ರತಿ ಸಂಘಗಳಿಗೆ ರು. 5 ಸಾವಿರಗಳ ಸುತ್ತು ನಿಧಿ ನೀಡಲಾಗುವುದು. ಕೆಸಿಸಿ ಬ್ಯಾಂಕ್ನಿಂದ ಶೇ.4 ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗುವುದು.
ಸಾಲ ಸೌಲಭ್ಯ ಪಡೆದು ಅದನ್ನು ಸದ್ವಿನಿಯೋಗಪಡಿಸಿಕೊಂಡು ಅದರಿಂದ ಬಂದಂತಹ ಲಾಭಾಂಶವನ್ನು ಗಳಿಕೆ ಮಾಡಿಕೊಂಡು ಬ್ಯಾಂಕ್ ಸಾಲ ಮರುಪಾವತಿಸಬೇಕು ಎಂದರು. ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ವಿ.ಕೆ. ಕಮತರ ಮಾತನಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎನ್. ಚಿಚಡಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಶೈಲೇಂದ್ರ ಬಿರಾದಾರ, ತಾಲೂಕು ಜಲಾನಯನ ಅಧಿಕಾರಿ ಆರ್.ಎ.ಅಣಗೌಡ್ರ, ಹೇಮಲತಾ ಖಾನೂರೆ, ಮಹಾಂತೇಶ ಅಮ್ಮಿನಬಾವಿ, ಎಸ್.ಎಫ್. ಕುರಡಗಿ, ಯಲ್ಲಮ್ಮ ತಳಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವಿಜಯ ಕುರಡಗಿ ಸ್ವಾಗತಿಸಿ, ವಂದಿಸಿದರು.
--
ಮಹಿಳೆ ಸಾಕ್ಷರಳಾಗಲಿ
ನರಗುಂದ: ಸಮಾಜದಲ್ಲಿ ಪುರುಷನಂತೆ ಮಹಿಳೆಯೂ ಶಿಕ್ಷಣ ಪಡೆಯಬೇಕು ಎಂದು ಶಿರೋಳದ ಶಿವಶರಣೆ ಅಕ್ಕಮಹಾದೇವಿ ತಾಯಿಯವರು ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ 217ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ಶ್ರೀಮತಿ ಗಂಗಮ್ಮ ಪಾಟೀಲ ಅವರ 90ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆ ಶಿಕ್ಷಣ ಪಡೆದರೆ ಸಮಾಜ ಸುಧಾರಣೆ ಸಾಧ್ಯ ಎಂದರು. ಭಾರತಿ ಕಾಲಚೆಟ್ಟಿ, ಭಾರತಿ ಹೂಂಗಲ, ಗದಗನ ರೈತ ಮಹಿಳೆ ನೀಲವ್ವ ಎಲಿ ಮಾತನಾಡಿದರು. ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. 90 ವರ್ಷದ ಗಂಗಮ್ಮ ಪಾಟೀಲ ಅವರಿಗೆ ಅವರ ಮಗ ವೀರನಗೌಡ ಪಾಟೀಲ ತುಲಾಭಾರ ಕಾರ್ಯಕ್ರಮ ನಡೆಸಿಕೊಟ್ಟರು. ಗೌರಮ್ಮ ಹಸಿಬಿ, ಜಿಪಂ ಸದಸ್ಯೆ ಶಾಂತಾ ದಂಡಿನ, ಗ್ರಾಪಂ ಉಪಾಧ್ಯಕ್ಷೆ ಪರವ್ವ ಐನಾಪುರ, ಸದಸ್ಯ ರೇಣವ್ವ ಮೇಟಿ, ಲೀಲಕ್ಕ ಹಸಿಬಿ, ಕಾಳಮ್ಮ ಕುಪಸ್ತ, ವೀರೇಶ್ವರ ದೇವರ, ಎಸ್.ಎನ್. ಪೂಜಾರ, ಶಿವಯ್ಯ ಹಿರೇಮಠ, ಪ್ರಭಯ್ಯ ಹಿರೇಮಠ, ವೀರಪ್ಪ ಎಲಿ ಮುಂತಾದವರು ಹಾಜರಿದ್ದರು. ರೇಣಕಾ ಐನಾಪುರ ಸ್ವಾಗತಿಸಿದರು. ಪ್ರೇಮಾ ಮನನೇಕೊಪ್ಪ ನಿರೂಪಿಸಿದರು. ಬಸಮ್ಮ ಸಂಗಳದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

