ಗದಗ

ನೀರು ಮಿತವ್ಯಯವಾಗಿ ಬಳಸಿ: ಹಳ್ಳಿಕೇರಿ

Published On :

ನರೇಗಲ್ಲ: ನೀರು ಜೀವನ ಸಂಜೀವಿನಿಯಾಗಿದ್ದು, ಮಾನವನ ಅಗತ್ಯಗಳಲ್ಲಿ ನೀರು ಅತ್ಯಂತ ಅವಶ್ಯಕ ನೈಸರ್ಗಿಕ ಸಂಪನ್ಮೂಲವಾಗಿದ್ದು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನರೇಗಲ್ಲ ಗೃಹರಕ್ಷಕ ದಳದ ಘಟಕಾಧಿಕಾರಿ ಸುರೇಶ ಹಳ್ಳಿಕೇರಿ ಹೇಳಿದರು.  ಅವರು ಶನಿವಾರ ಸ್ಥಳೀಯ ಕೆಎಸ್‌ಎಸ್ ಪ್ರೌಢ ಶಾಲೆಯಲ್ಲಿ ಗೃಹರಕ್ಷಕ ದಳದ ವತಿಯಿಂದ ನಡೆದ ವಿಶ್ವ ಜಲವರ್ಷ-2013 ಶೀರ್ಷಿಕೆಯಡಿಯಲ್ಲಿ ಜಲ ಸಹಕಾರ, ಸವಾಲು ಮತ್ತು ಸಮಸ್ಯೆಗಳ ಕುರಿತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.  ನೀರಿನ ಬಳಕೆಯ ಅರಿವು, ನೀರಿನ ಸಂಗ್ರಹಣಾ ಕ್ರಮಗಳು, ಅರಣ್ಯಗಳ ಸಂರಕ್ಷಣೆ ಹಾಗೂ ಅರಣ್ಯಗಳನ್ನು ಬೆಳೆಸುವುದು, ಮಳೆ ನೀರು ಸಂಗ್ರಹಣೆಗಾಗಿ ಚೆಕ್ ಡ್ಯಾಂಗಳ ನಿರ್ಮಾಣ, ನೀರು ಕುಯಿಲು, ನೀರಿನ ಇಂಗು ಗುಂಡಿಗಳು, ಕೆರೆಗಳ ನಿರ್ಮಾಣದಂತಹ ಯೋಜನೆಗಳು ಫಲಪ್ರದವಾಗಬೇಕಾದರೆ ರೈತರು ಜನಸಾಮಾನ್ಯರು ನೀರಿನ ಮಹತ್ವವನ್ನು ತಿಳಿಯುವ ಅಗತ್ಯವಿದೆ ಎಂದರು. ಜಕ್ಕಲಿಯ ಮಲಕಾಜಪ್ಪ ಮೆಣಸಗಿ ಮಾತನಾಡಿ, ಜಲಸಹಕಾರದ ಸವಾಲುಗಳು ಮತ್ತು ಸಮಸ್ಯೆಗಳನ್ನು ಅರಿತುಕೊಳ್ಳುವ ಮೂಲಕ ಪ್ರಕೃತಿದತ್ತ ಕೊಡುಗೆಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಎನ್.ಕೆ. ಬೇವಿನಕಟ್ಟಿ, ಈಶ್ವರ ಬೆಟಗೇರಿ, ಶಿವಾನಂದ ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೃಹರಕ್ಷಕ ಜೆ.ಡಿ.ಬಂಡಿವ್ವಡರ ಹಾಗೂ ಶರಣಪ್ಪ ಗೊಡಚಪ್ಪನವರ ನಿರೂಪಿಸಿದರು. ವೈ.ಎನ್. ಸಾಬಳೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.