ಗದಗ

ಸಾವಯವ ಗೊಬ್ಬರದಿಂದ ಫಲವತ್ತತೆ ಹೆಚ್ಚಳ : ಕೃಷಿ ವಿಜ್ಞಾನಿ ಮುದ್ಲಾಪುರ

Published On :

ಗದಗ: ಸಾವಯವ ಗೊಬ್ಬರದಿಂದ ಫಲವತ್ತತೆ ಹೆಚ್ಚುತ್ತದೆ ಎಂದು ಹುಲಕೋಟಿಯ ಕೃಷಿ ವಿಜ್ಞಾನಿ ಎಸ್.ಕೆ. ಮುದ್ಲಾಪುರ ಹೇಳಿದರು. ಅವರು ಈಚೆಗೆ ಗದಗ ರೋಟರಿ ಐ ಕೇರ್ ಸೆಂಟರ್‌ನಲ್ಲಿ ನಡೆದ ಸಾಪ್ತಾಹಿಕ ಸಭೆಯಲ್ಲಿ ಮಾತನಾಡಿದರು. ರಾಸಾಯನಿಕ ಗೊಬ್ಬರವನ್ನು ಹೊಲಗಳಿಗೆ ಉಪಯೋಗಿಸುವುದರಿಂದ ಮೊದಲೆರಡು ವರ್ಷಗಳಲ್ಲಿ ಇಳುವರಿ ಅಧಿಕವಾಗುತ್ತದೆ. ಆದರೆ ತದನಂತರದ ವರ್ಷಗಳಗಲ್ಲಿ ಗಣನೀಯವಾಗಿ ಕುಂಠಿತವಾಗುತ್ತದೆ. ಕೊನೆಗೊಂದು ದಿನ ಯಾವ ಬೆಳೆಯೂ ಬೆಳೆಯದ ಮಟ್ಟಕ್ಕೆ ಮಣ್ಣು ಸತ್ವ ಕಳೆದುಕೊಳ್ಳುತ್ತದೆ ಎಂದರು. ಸಾವಯವ ಗೊಬ್ಬರವನ್ನು ಹೊಲಗಳಿಗೆ ಬಳಸುವುದರಿಂದ ಮಣ್ಣಿನಲ್ಲಿರುವ ಜೀವಾಣುಗಳ ಸಂಖ್ಯೆ ಹೆಚ್ಚಾಗಿ ಮಣ್ಣಿನ ಫಲವತ್ತತೆ ವೃದ್ಧಿಸುತ್ತದೆ ಹಾಗೂ ಮಣ್ಣಿನಲ್ಲಿನ ತೇವಾಂಶವನ್ನು ಕಾಪಾಡುತ್ತದೆ. ಕಾರಣ ಹೊಲಗಳಿಗೆ ಸಾವಯವ ಗೊಬ್ಬರವನ್ನು ಊಟದಂತೆ ಹಾಗೂ ರಾಸಾಯನಿಕ ಗೊಬ್ಬರವನ್ನು ಉಪ್ಪಿನಕಾಯಿಯಂತೆ ಬಳಸಬೇಕು. ಸಾವಯವ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಅನುಕೂಲವಾಗುತ್ತದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಸ್ವಾಗತಿಸಿದರು. ಡಾ. ಬಿ.ಎನ್. ಪಾಟೀಲ್, ಬಾಲಕೃಷ್ಣ ಕಾಮತ್, ಡಾ. ರಾಜಶೇಖರ ಬಳ್ಳಾರಿ, ಶ್ರೀಧರ ಸುಲ್ತಾನಪುರ, ಎ.ಎಂ. ಗೌಡರ, ಡಾ. ಪ್ರಕಾಶ ಕೊಲೋಳಗಿ, ಎಸ್.ಎಫ್. ಬೆನಕಣ್ಣವರ, ಸುಭಾಸ ಬಬಲಾದಿ, ಡಾ. ಎಸ್. ಹಕ್ಕಾಪಕ್ಕಿ, ಎ.ಎಸ್. ಬ್ಯಾಳಿ, ಡಾ. ಐ.ಐ. ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಉಮೇಶ ಬಾರಕೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.