ಚಿಕ್ಕ-ಚೊಕ್ಕ ಸಂಸಾರ ನಡೆಸಿ: ಶಾಂತಲಿಂಗ ಶ್ರೀ ಹಿತವಚನ
ಕನ್ನಡಪ್ರಭ ವಾರ್ತೆ, ಗದಗ, ಆ. 31
ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿರುವ ನವ ಜೋಡಿಗಳು ಆದರ್ಶ ದಂಪತಿಗಳಾಗಿ ಚಿಕ್ಕದಾದ ಚೊಕ್ಕ ಸಂಸಾರ ನಡೆಸಬೇಕು. ಮಕ್ಕಳಿಗೆ ಧರ್ಮ ಸಂಸ್ಕಾರದೊಂದಿಗೆ ಉತ್ತಮ ಶಿಕ್ಷಣ ನೀಡುವ ಸಂಕಲ್ಪ ಹೊಂದಬೇಕೆಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ಶುಕ್ರವಾರ ಸ್ಥಳೀಯ ಕಾಶೀ ವಿಶ್ವನಾಥ ನಗರದ ಕಾಶೀ ವಿಶ್ವನಾಥನ ಜಾತ್ರೆ, ದುರ್ಗಾದೇವಿಗೆ ಉಡಿ ತುಂಬುವ, ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಸಾನ್ನಿಧ್ಯವಹಿಸಿ 32 ಜೋಡಿಗಳಿಗೆ ಧರ್ಮಬೋಧನೆ ಮಾಡಿ ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ತಾಳ್ಮೆ, ಸಹನೆಯ ಮೂರ್ತಿಯಾದ ಮಹಿಳೆ ತವರನ್ನು ಬೆಳಗುವಂತೆ ಮದುವೆಯಾದ ನಂತರ ಗಂಡನ ಮನೆಯಲ್ಲೂ ತಾಳ್ಮೆ ಸಹನೆಯೊಂದಿಗೆ ಕೌಟುಂಬಿಕ ಸೌಹಾರ್ದತೆ ತರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿ ಉತ್ತಮ ಗೃಹಿಣಿಯಾಗಿ ಬಾಳಬೇಕು ಎಂದರು.
ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ಬಸಪ್ಪ ಇಂಗಳೇಶ್ವರ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಶಹರ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ, ಪರಪ್ಪ ಉಮಚಗಿ, ಮಂಜುನಾಥ ಹಳ್ಳಿಕೇರಿ, ಪ್ರಕಾಶ ಅಂಗಡಿ, ವಿರೂಪಾಕ್ಷಪ್ಪ ರಾಮಗಿರಿ, ದೊಡ್ಡಬಸಪ್ಪ ಅಂಗಡಿ, ಪ್ರಭಣ್ಣ ಅಣ್ಣಿಗೇರಿ, ಮಮ್ಮುಸಾಬ್ ಕುಮನೂರ, ದುಂಡಪ್ಪ ಆಸಂಗಿ, ಶಾಂತಪ್ಪ ಮುಳವಾಡ, ನಗರಸಭೆ ಸದಸ್ಯ ಬಿ.ಬಿ. ಅಸೂಟಿ, ಜ್ಯೋತಿ ಇರಾಳ, ಎಲ್.ಡಿ. ಚಂದಾವರಿ, ಸಾದಿಕ್ ನರಗುಂದ, ದೇವಪ್ಪ ಮಳಗಿ, ಭರತ ಇರಾಳ, ರಮೇಶ ಅಣ್ಣಿಗೇರಿ, ಎಫ್.ಎಚ್. ಗೌಡರ, ಅಶೋಕ ಗಡಾದ, ಶೇಖಪ್ಪ ಮುಳವಾಡ, ಚನ್ನವೀರಪ್ಪ ಮಳಗಿ, ಶಾಂತಪ್ಪ ಅಕ್ಕಿ, ಬಸವಂತಗೌಡ ಕಡಬಲಕಟ್ಟಿ, ಪಾಲಾಕ್ಷಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಅನ್ನಸಂತರ್ಪಣೆಗೆ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ಸಂಜೆ 6 ಗಂಟೆಗೆ ಕಾಶೀ ವಿಶ್ವನಾಥನ ಮಹಾರಥೋತ್ಸವವು ಸಕಲ ವಾದ್ಯ ವೈಭವದೊಂದಿಗೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

