ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಶಿಷ್ಯವೇತನ ದುರುಪಯೋಗ: ಆರೋಪ
ಗದಗ: ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜ್ಗಳಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಶಿಷ್ಯ ವೇತನದಲ್ಲಿ ಆಗುತ್ತಿರುವ ದುರುಪಯೋಗ ಖಂಡಿಸಿ ಈಚೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989 ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿ ಕರ್ನಾಟಕ, ಗದಗ ಜಿಲ್ಲಾ ಘಟಕದ ವತಿಯಿಂದ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಕಾಲೇಜುಗಳಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಫೀ ಕಡಿಮೆ ಮಾಡಲಾರದೆ ಪೂರ್ಣ ಫೀಯನ್ನು ತುಂಬಿಸಿಕೊಳ್ಳುವುದಲ್ಲದೆ, ಸಮಾಜ ಕಲ್ಯಾಣ ಇಲಾಖೆಯಿಂದಲೂ ಬರುವ ಫೀಯನ್ನೂ ತೆಗೆದುಕೊಳ್ಳುತ್ತಾರೆ. ಮತ್ತು ಎಸ್ಸಿ, ಎಸ್ಟಿ ವಿಧ್ಯಾರ್ಥಿಗಳಿಗೆ ಶಿಷ್ಯ ವೇತನದ ಅರ್ಜಿಗೂ ಹಣ ತೆಗೆದುಕೊಳ್ಳುವುದು ವಿಪರ್ಯಾಸವಾಗಿದೆ. ಕಾರಣ ಅದನ್ನು ತನಿಖೆ ಮಾಡಿಸಿ, ಸಂಪೂರ್ಣ ಬರತಕ್ಕಂತಹ ಎಸ್ಸಿ, ಎಸ್ಟಿ ವಿಧ್ಯಾರ್ಥಿಗಳಿಗೆ ಫೀ ಜತೆಗೆ ಸಂಪೂರ್ಣ ಶಿಷ್ಯವೇತನ ನೀಡಬೇಕೆಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಪಿ.ವೈ. ಕಾಳೆ, ರಮೇಶ ಕೋಳೂರ, ಗಚೆನ್ನಬಸಪ್ಪ ಹೊಸಮನಿ, ಮಲ್ಲಿಕಾರ್ಜುನ ಗೌಡಣ್ಣವರ, ಸುರೇಶ ಚಲವಾದಿ, ಚಂದ್ರಶೇಖರ ಹರಿಜನ, ಬಸವರಾಜ ಮುಳ್ಯಾಳ, ಮಾಂತೇಶ ಮದ್ನೂರ, ನಾಗರಾಜ ಪೂಜಾರ, ಪರಶುರಾಮ ಹುಬ್ಬಳ್ಳಿ, ಶಿವು ಪೂಜಾರ, ಮಹಾಂತೇಶ ಗೌಡಣ್ಣವರ, ರೇಣುಕಾ ಪೂಜಾರ, ವೆಂಕಟೇಶ ಭಜಂತ್ರಿ, ಆನಂದ ಬಿಜಾಪುರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

