ಇಂದು ರಕ್ತದಾನ ಶಿಬಿರ
ನರಗುಂದ: ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಜಾತ್ರಾ ನಿಮಿತ್ತ ಫೆ. 2ರಂದು ಮಠದ ಆವರಣದಲ್ಲಿ ರಕ್ತದಾನ ಶಿಬಿರ, ಮಹಾಪೂಜೆ ಹಾಗೂ ರೊಟ್ಟಿ ಜಾತ್ರೆ, ಕಲ್ಲು ಸಿಡಿ ಹೊಡೆಯುವ ಕಾರ್ಯಕ್ರಮಗಳು ಜರುಗುತ್ತವೆ. 2009ನೇ ಸಾಲಿನ ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ಡಾ. ತೋಂಟದ ಸಿದ್ಧಲಿಂಗ ಶ್ರೀಗಳಿಗೆ ಸಾವಿರದ ಗ್ರಂಥ ಸಿರಿ ಸಮರ್ಪಣೆಯೊಂದಿಗೆ ಗುರುವಂದನಾ ಕಾರ್ಯಕ್ರಮ ಜರಗುಲಿದೆ. ಮಾಜಿ ಸಚಿವ ಬಿ.ಆರ್. ಯಾವಗಲ್, ಗದಗ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾ. ಚಂದ್ರಶೇಖರ ವಸ್ತ್ರದ, ಗ್ರಾಪಂ ಅಧ್ಯಕ್ಷ ಬಸವಣ್ಣೆವ್ವ ಹೊಸಮನಿ, ಉಪಾಧ್ಯಕ್ಷ ಕಮಲವ್ವ ಚಂಗಳಿ, ಸಂಗೀತದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಕಿತ್ತಲಿ ಗೇನುಬಾ ಕಾಶೀದ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಉಪನ್ಯಾಸ
ನರಗುಂದ: ಪಟ್ಟಣದ ಯಡೆಯೂರು ಸಿದ್ಧಲಿಂಗೇಶ್ವರ ಪ್ರಥಮ ದರ್ಜೆ ಕಲಾ ಮಹಾವಿದ್ಯಾಲಯದ 2012-13ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮವು ತಾಲೂಕಿನ ಭೈರನಹಟ್ಟಿ ದೊರಸ್ವಾಮಿ ವಿರಕ್ತಮಠದಲ್ಲಿ ಫೆ. 2ರ ನಡೆಯಲಿದೆ. ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಕುರಿತು ಉಪನ್ಯಾಸ ಜರುಗಲಿದೆ. ಎಂ.ವಿ.ಪಾಟೀಲ, ಎಸ್.ಕೆ. ಜೋಗಿ, ಎಸ್.ಎನ್. ಪೂಜಾರಿ, ಬಿ.ಬಿ. ಐನಾಪುರ, ಎಚ್.ಆರ್. ಪೂಜಾರ, ಡಿ.ಎಚ್. ಐನಾಪುರ, ಭಾವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಇಂದು ಕಬಡ್ಡಿ ಪಂದ್ಯಾವಳಿ
ನರಗುಂದ: ತಾಲೂಕಿನ ಶಿರೋಳ ಗ್ರಾಮದ ಮರಡಿ ಮಾರುತಿ ಯುವಕ ಮಂಡಳ ವತಿಯಿಂದ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಫೆ 2ರಂದು ಜರುಗುತ್ತದೆ. ಈ ಪಂದ್ಯಾವಳಿಗೆ ಡಂಬಳ ಗದಗ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳು, ಶಿರೋಳ ಗುರುಬಸವ ಶ್ರೀಗಳು, ಭೈರನಹಟ್ಟಿ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ಬಸವಂತಪ್ಪ ತಳವಾರ, ರಾಜಶೇಖರಗೌಡ ಪಾಟೀಲ್, ನಾಗನಗೌಡ ತಿಮ್ಮನಗೌಡ್ರ, ಜಿಪಂ ಸದಸ್ಯ ಶಾಂತಾ ದಂಡಿನ, ತಾಪಂ ಉಪಾಧ್ಯಕ್ಷೆ ಗುರುದೇವಾ ಶಾನವಾಡಮಠ, ಗ್ರಾಪಂ ಅಧ್ಯಕ್ಷ ಬಸವಣ್ಣವ್ವ ಹೊಸಮನಿ, ಉಪಾಧ್ಯಕ್ಷ ಕಮಲವ್ವ ಚಂಗಳಿ, ಗೋವಿಂದಪ್ಪ ರಿತ್ತಿ, ಬಸವರಾಜ ಕುಪ್ಪಸ್ತ, ಅಶೋಕ ಚೌಕಿಮಠ, ಮುಂತಾದವರು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

