ನಾಮಪತ್ರ ತಿದ್ದುವ ಹುನ್ನಾರ: ಆರೋಪ
ಗದಗ: ತಾಲೂಕಿನ ಮುಳಗುಂದ ಪಟ್ಟಣ ಪಂಚಾಯಿತಿಯು ಭಾನುವಾರವೂ ತೆರೆದಿದ್ದರಿಂದ ಅಲ್ಲಿ ಕೆಲವರು ನಾಮಪತ್ರ ತಿದ್ದುವ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿ ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಸಂಜೆ ಜರುಗಿದೆ.
ಭಾನುವಾರ ರಜೆ ಇದೆಯಾದರೂ ಪಲ್ಸ್ ಪೋಲಿಯೋ ನಿಮಿತ್ತ ಪಟ್ಟಣ ಪಂಚಾಯಿತಿ ಕಚೇರಿ ತೆರೆಯಲಾಗಿದ್ದು, ಈ ವೇಳೆ ಕೆಲವರು ನೋಟಿಸ್ ಬೋರ್ಡ್‌ಗೆ ಹಾಕಿರುವ ನಾಮಪತ್ರಗಳನ್ನು ನೋಡಲು ಹೋಗಿದ್ದು, ಈ ವೇಳೆ ಮೂಲ ಪತ್ರಗಳನ್ನೇ ಹೊರಗಡೆ ನೇತು ಹಾಕಿದ್ದಾರೆ. ಇಲ್ಲಿ ಏನೋ ನಡೆಯುತ್ತಿದೆ. ಪಟ್ಟಣದ 11ನೇ ವಾರ್ಡ್‌ಗೆ ಸಲ್ಲಿಸಿರುವ ನಾಮಪತ್ರಗಳ ಮೂಲ ಪ್ರತಿಗಳಿವೆ ಎನ್ನುವ ಸುದ್ದಿ ಪಟ್ಟಣದಾದ್ಯಂತ ಹರಡುತ್ತಿದ್ದಂತೆ ತೀವ್ರ ಗೊಂದಲ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಬಿಎಸ್ಸಾರ್ ಕಾರ್ಯಕರ್ತರು ಆಕ್ರೋಶಗೊಂಡು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಮತ್ತಷ್ಟು ಗೊಂದಲ ಉಂಟಾಯಿತು. ನಂತರ ಸ್ಥಳಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆಗಮಿಸಿದರು. ನಂತರ ವಾರ್ಡ್‌ಗೆ ಸಂಬಂಧಿಸಿದ ನಾಮ ಪತ್ರಗಳನ್ನು ಗದಗ ತಹಸೀಲ್ದಾರ್ ಗಣಾಚಾರಿ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ, ಶಾಸಕ ಶ್ರೀಶೈಲಪ್ಪ ಬಿದರೂರ, ಬಿಜೆಪಿ ಮುಖಂಡ ಶ್ರೀಕಾಂತ ಖಟವಟೆ, ಬಿಎಸ್ಸಾರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಸಮಕ್ಷಮದಲ್ಲಿ ಮುಖ್ಯ ಲಾಕರ್ ಓಪನ್ ಮಾಡಿ ಪರಿಶೀಲಿಸಲಾಯಿತು. ಬಳಿಕ ಯಾವುದೇ ತೊಂದರೆಯಾಗಿಲ್ಲ ಎನ್ನುವುದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

