ಗದಗ

ಅಂಬಿಗರ ಚೌಡಯ್ಯ ನುಡಿದಂತೆ ನಡೆದವರು

Published On :

ಮುಂಡರಗಿ: ಅಂಬಿಗರ ಚೌಡಯ್ಯ ಒಬ್ಬ ಸ್ವಾಭಿಮಾನಿ ಹಾಗೂ ಆತ್ಮಾಭಿಮಾನಿ ನಿಜಶರಣ. ಅವರಲ್ಲಿ ಮಾತೃ ಹೃದಯವಿತ್ತು. ಅವರು ನುಡಿದಂತೆ ನಡೆದ ನಿಜ ಶರಣರಾಗಿದ್ದಾರೆಂದು ಕೆ.ಆರ್. ಬೆಲ್ಲದ ಕಾಲೇಜಿನ ಪ್ರೊ. ಎ.ವೈ. ನವಲಗುಂದ ಹೇಳಿದರು.
ಅವರು ಸೋಮವಾರ ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಗಂಗಾಮತ ಸಮಾಜ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಾದಿ ಶಿವಶರಣ-ಶಿವಶರಣೆಯರು ಕಾಯಕ ಹಾಗೂ ದಾಸೋಹ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಕಾಯಕ ಮಾಡುವ ಮೂಲಕವೇ ಇಂತಹ ಜಯಂತಿಗಳನ್ನು ನಾವೆಲ್ಲರೂ ಮಾಡುವಂತಾಗಬೇಕು. ಚೌಡಯ್ಯನವರ ಒಂದೊಂದು ವಚನಗಳು ಜೀವನಕ್ಕೆ ಮಾರ್ಗದರ್ಶನವಾಗಲಿದೆ ಎಂದರು.
ಮಹಾಂತೇಶ ಹಳ್ಳೆಪ್ಪನವರ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ್ ಮಾತನಾಡಿದರು. ಉದ್ಘಾಟನೆಯನ್ನು ಪುರಸಭೆ ಅಧ್ಯಕ್ಷೆ ಶೇಖವ್ವ ಸಂಗಟಿ ನೆರವೇರಿಸಿದರು. ಗಂಗಾಮತ ಸಮಾಜದ ಅಧ್ಯಕ್ಷ ದೇವಪ್ಪ ಬಾರಕೇರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಂಕ್ರಪ್ಪ ಹಂಪಸಾಗರ್, ರಮೇಶ ಬಾಲೇಹೊಸೂರ, ಸಿಪಿಐ ಸುನಿಲ್ ಸೌದಿ, ಡಿ.ಡಿ. ಮೊರನಾಳ, ದೃವಕುಮಾರ ಹೊಸಮನಿ, ರಾಮಣ್ಣ ಬಳ್ಳಾರಿ, ರವೀಂದ್ರ ಉಪ್ಪಿನಬೆಟಗೇರಿ, ವಿ.ಎಸ್. ಘಟ್ಟಿ, ಮಂಜುನಾಥ ಇಟಗಿ ಮುಂತಾದವರು ಉಪಸ್ಥಿತರಿದ್ದರು. ಎಲ್.ಎಚ್. ಯಣ್ಣಿ ಸ್ವಾಗತಿಸಿದರು. ದೇವಪ್ಪ ಇಟಗಿ ನಿರೂಪಿಸಿದರು. ಬಿ.ಆರ್. ಕಬ್ಬೇರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.