ಪುರಸಭೆ ವ್ಯಾಪ್ತಿಯಲ್ಲಿ ರು. 25 ಕೋಟಿ ಅಭಿವೃದ್ಧಿ ಕಾಮಗಾರಿ: ಲಮಾಣಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜ. 22
ತಾವು ಶಿರಹಟ್ಟಿ ಶಾಸಕನಾಗಿ ಆಯ್ಕೆಯಾದ ಮೇಲೆ ಮುಂಡರಗಿ ಪುರಸಭೆ ವ್ಯಾಪ್ತಿಯ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್ ಸೌಲಭ್ಯಕ್ಕಾಗಿ ರು. 25 ಕೋಟಿ ಅನುದಾನ ತಂದಿದ್ದು, ಮುಂಡರಗಿ ಪಟ್ಟಣ ಇಂದು ಸ್ವಚ್ಛತೆಯಿಂದ ಕಂಗೊಳಿಸುತ್ತಿದೆ ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಪಟ್ಟಣದ 10ನೇ ವಾರ್ಡಿನ ಗೊಂದಳಿಗರ ಓಣಿಯಲ್ಲಿ ಮಂಜೂರಾದ 48 ಮನೆಗಳಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದ ಅವರು, ಅಟಲ್ ಬಿಹಾರಿ ವಾಜಪೇಯಿ ವಸತಿ ಯೋಜನೆಯಲ್ಲಿ ಪುರಸಭೆ ವ್ಯಾಪ್ತಿಗೆ ಒಟ್ಟು 300 ಮನೆಗಳು ಮಂಜೂರಾಗಿವೆ. 10ನೇ ವಾರ್ಡಿನ ಗೊಂದಳಿಗರ ಓಣಿಯಲ್ಲಿ ಬಹುತೇಕ ಮನೆಗಳು ಬಿದ್ದಿದ್ದು, ಅವರಿಗಾಗಿ 48 ಮನೆ ಮಂಜೂರು ಮಾಡಲಾಗಿದೆ. ಮುಂದೆ ಇನ್ನಷ್ಟು ಮನೆ ಮಂಜೂರು ಮಾಡಿಸುವುದಾಗಿ ಹೇಳಿದರು.
ತಾಲೂಕು ಗೊಂದಳಿಗರ ಸಮಾಜದ ಅಧ್ಯಕ್ಷ ಕೃಷ್ಣಾ ಮುಖೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಮಣ್ಣ ಲಮಾಣಿಯವರನ್ನು ಗೊಂದಳಿ ಸಮಾಜ ಬಾಂಧವರು ಸನ್ಮಾನಿಸಿದರು.
ಪುರಸಭೆ ಉಪಾಧ್ಯಕ್ಷೆ ಶೇಖವ್ವ ಸಂಗಟಿ, ಶಹರ ಘಟಕದ ಬಿಜೆಪಿ ಅಧ್ಯಕ್ಷ ರಜನೀಕಾಂತ ದೇಸಾಯಿ, ಪುರಸಭೆ ಉಪಾಧ್ಯಕ್ಷ ಶಿವನಗೌಡ ಗೌಡ್ರ, ಪುರಸಭೆ ಸದಸ್ಯ ರಾಮು ಕಲಾಲ, ಚಿನ್ನಪ್ಪ ವಡ್ಡಟ್ಟಿ, ಬಸವರಾಜ ಮುಂಡವಾಡ, ಮುಖ್ಯಾಧಿಕಾರಿ ಆರ್.ಎಂ.ಪಾಟೀಲ, ಸುರೇಶ ಮಾಳೆಕೊಪ್ಪ, ಲಕ್ಷ್ಮವ್ವ ಗಣಾಚಾರಿ, ಬಸವರಾಜ ರಣಾಚಾರಿ, ಪರಶುರಾಮ ಬೀಸೆ, ಮರಿಯಪ್ಪ ವಾಕಡಿ, ಚಂದ್ರಪ್ಪ ಬೀಸೆ, ಯಲ್ಲಪ್ಪ ಗಣಾಚಾರಿ, ಬಸವರಾಜ ಗಣಾಚಾರಿ, ಪಾಂಡಪ್ಪ ಬೀಸೆ ಉಪಸ್ಥಿತರಿದ್ದರು. ವಿಠಲ ಗಣಾಚಾರಿ ನಿರೂಪಿಸಿದರು. ದುರಗೋಜಿ ಗಣಾಚಾರಿ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

