ನಮ್ಮ ಸಂಸ್ಕೃತಿ ಇತರರಿಗೆ ಮಾದರಿ
ಮುಂಡರಗಿ: ನಮ್ಮ ಸಂಸ್ಕೃತಿಯಲ್ಲಿ ಮೇಲು, ಕೀಳು ಎನ್ನುವ ಭಾವನೆ ಇಲ್ಲ. ನಾವೆಲ್ಲರು ಹಿಂದೂಗಳು ಒಂದೇ ಎನ್ನುವುದು ನಮ್ಮ ಸಂಸ್ಕೃತಿಯ ಮೂಲ ಧೇಯ್ಯವಾಗಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ಅವರು ಭಾನುವಾರ ರಾತ್ರಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಗದಗ ಜಿಲ್ಲಾ ಶ್ರೀರಾಮ ಸೇನೆಯ ವತಿಯಿಂದ ಜರುಗಿದ ಮುಂಡರಗಿ ತಾಲೂಕು ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 60 ವರ್ಷ ಕಳೆದರೂ ಇನ್ನೂ ಸಹ ಸಿಗಬೇಕಾದ ಅವಶ್ಯಕ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. 60 ಲಕ್ಷ ಹಳ್ಳಿಗಳು ನಮ್ಮ ನಾಡಿನಲ್ಲಿ ಇನ್ನೂ 2 ಲಕ್ಷ 40 ಸಾವಿರ ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ. ಗದಗದಂತಹ ಶಹರದಲ್ಲಿ ಇಂದಿಗೂ ನೀರಿಗಾಗಿ ಹೋರಾಟ ಮಾಡಬೇಕಾಗಿದೆ. ಉತ್ತಮ ರಸ್ತೆಗಳು ನಮಗಿನ್ನೂ ಮರಿಚೀಕೆಯಾಗಿವೆ. ಆದ್ದರಿಂದ ಹಿಂದುಗಳೆಲ್ಲರೂ ಜಾಗೃತರಾಗಿ, ರಾಜಕಾರಣಿಗಳ ಹತ್ತಿರ ಭಿಕ್ಷೆ ಬೇಡುವುದನ್ನು ಬಿಟ್ಟು ಮುಂಬರುವ ಚುನಾವಣೆಗಳಲ್ಲಿ ಹಣ, ಹೆಂಡ, ಸೀರೆ, ಬಟ್ಟೆಗಳ ಆಸೆಗಾಗಿ ನಿಮ್ಮ ಓಟನ್ನು ಮಾರಿಕೊಳ್ಳದೇ ಉತ್ತಮವಾಗಿ ಕೆಲಸ ಮಾಡುವ ಒಬ್ಬ ಜನಪ್ರತಿನಿಧಿಗೆ ಮತ ನೀಡಿರಿ ಎಂದರು. ಈ ದೇಶದ ಜವಾಬ್ದಾರಿ ಸ್ಥಾನದಲ್ಲಿರುವ ಕೇಂದ್ರದ ಗೃಹ ಸಚಿವರು ಆರ್‌ಎಸ್‌ಎಸ್ ಭಯೋತ್ಪಾದಕ ಸಂಘಟನೆ, ಆರ್‌ಎಸ್‌ಎಸ್ ಅಡ್ಡೆಗಳು ಭಯೋತ್ಪಾದನಾ ಕೇಂದ್ರಗಳಾಗುತ್ತಿವೆ ಎಂದು ಹೇಳಿದ್ದಾರೆ. ಆದರೆ, ಈ ದೇಶದಲ್ಲಿ ಆರ್‌ಎಸ್‌ಎಸ್ ಇರದೇ ಇದ್ದರೆ ನಾವೆಲ್ಲರೂ ಹಿಂದುಗಳಾಗಿ ಉಳಿಯುತ್ತಿರಲಿಲ್ಲ. ಕಳೆದ 85 ವರ್ಷದಿಂದ ಈ ದೇಶದಲ್ಲಿ ಆರ್‌ಎಸ್‌ಎಸ್ ದೇಶಭಕ್ತಿ, ಶಿಸ್ತು, ಪ್ರಾಮಾಣಿಕತೆಯನ್ನು ಕಲಿಸಿದೆ. ನಿಮ್ಮ ಹತ್ತಿರ ಈ ವಿಷಯವಾಗಿ ದಾಖಲೆಗಳಿದ್ದರೆ, ಈ ಸಂಘಟನೆಯನ್ನು ಕೂಡಲೇ ಬ್ಯಾನ್ ಮಾಡಿರಿ ಎಂದು ಸವಾಲು ಹಾಕಿದರು. ಈ ದೇಶದಲ್ಲಿ ಹಜ್‌ಯಾತ್ರೆಗೆ ಹೋಗಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಬ್ಬ ಮುಸ್ಲಿಂರಿಗೆ # 36 ಸಾವಿರ ನೀಡುತ್ತವೆ. ಸುಮಾರು ಒಂದುವರೆ ಲಕ್ಷ ಜನ ಮುಸ್ಲಿಂರು ನಮ್ಮ ದೇಶದಿಂದ ಏಳು ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಸ್ಥಳಕ್ಕೆ ಹೋಗಿ ಬರುತ್ತಾರೆ. ಆದರೆ, ಶಬರಿಮಲೆ ಅಯ್ಯಪ್ಪಸ್ವಾಮಿ, ಶ್ರೀಶೈಲ, ಕಾಶಿ, ರಾಮೇಶ್ವರ, ಅಮರನಾಥ ಯಾತ್ರಿಗಳಿಗೇಕೆ ಸರ್ಕಾರ ಈ ರೀತಿ ಹಣ ನೀಡುತ್ತಿಲ್ಲ. ಮುಸ್ಲಿಂ ಜನಾಂಗದ ಓಟಿನ ಆಸೆಗಾಗಿ ಸರ್ಕಾರಗಳು ಎರಡೆರಡು ಕಾನೂನುಗಳನ್ನು ಸೃಷ್ಟಿ ಮಾಡಿವೆ. ಇದು ಅಸಹ್ಯಕರ ಎಂದರು.
ಗೀತಾಂಜಲಿ ಕಡಿವಾಳ ಜಿಲ್ಲಾ ಸಂಚಾಲಕ ರಾಜು ಕಾನಪ್ಪನವರ ಮಾತನಾಡಿದರು. ಮಲ್ಲಿಕಾರ್ಜುನ ಬಹದ್ದೂರ ದೇಸಾಯಿ, ಸಿದ್ಧಯ್ಯ ಶಿರಹಟ್ಟಿಮಠ, ಚೆನ್ನಬಸಪ್ಪ ಬಾಗೇವಾಡಿ, ಮುದಿಯಪ್ಪ ಜಾಲಗಾರ, ತಾಲೂಕು ಸಂಚಾಲಕ ಮಂಜಯ್ಯಸ್ವಾಮಿ ಅರವಟಗಿಮಠ, ತಿಪ್ಪಣ್ಣ ಮಜ್ಜಗಿ, ಫಕ್ಕೀರೇಶ ಜಾಲಗಾರ ವೇದಿಕೆಯಲ್ಲಿದ್ದರು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

