ಮಠಾಧೀಶರ ನಡಿಗೆ ಕಳಸಾ ಬಂಡೂರಿಯತ್ತ
ಕನ್ನಡಪ್ರಭ ವಾರ್ತೆ, ನರಗುಂದ, ಜ. 29
ಉತ್ತರ ಕರ್ನಾಟಕ ಭಾಗದಲ್ಲಿನ ರೈತರ ಹಿತದೃಷ್ಟಿಯಿಂದ ಮಹತ್ವ ಪಡೆದುಕೊಂಡಿರುವ ಕಳಸಾ ಬಂಡೂರಿ ನೀರಾವರಿ ಯೋಜನೆಯು ಬಹುನಿರೀಕ್ಷೆಯ ಯೋಜನೆಯಾಗಿದೆ.
ಈ ಹಿಂದೆ ಆಳಿದ ರಾಜಕೀಯ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ಯೋಜನೆ ಪೂರ್ಣಗೊಳ್ಳದೇ ವಿಳಂಬವಾಗುತ್ತ ಸಾಗಿದೆ. ಈ ಭಾಗದ ಜನರು ತಾವು ಬೆಳೆದ ಬೆಳೆಗೆ ನೀರಿನ ಕೊರತೆ ಎದುರಿಸುತ್ತಾ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ಬಂದೊದಗಿದ್ದು, ಇದರ ವಿರುದ್ದ ನಾಡಿನ ಮಠಾಧೀಶರೇ ಹೋರಾಟದ ಹಾದಿ ಹಿಡಿಯುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದಾರೆ.
52 ವರ್ಷ ಗತಿಸಿತು: ಮಲಪ್ರಭಾ (ನವೀಲು ತೀರ್ಥ) ಜಲಾಶಯಕ್ಕೆ 1963 ಅಕ್ಟೋಬರ್ 2 ರಂದು ಡ್ಯಾಂ ನಿರ್ಮಿಸಲು ಅಡಿಗಲ್ಲು ನೆರವೇರಿಸಿ 8ನೇ ಪಂಚವಾರ್ಷಿಕ ಯೋಜನೆಯಲ್ಲಿ # 10 ಕೋಟಿ ಬಿಡುಗಡೆಗೊಳಿಸಿ ಈ ಜಲಾಶಯಕ್ಕೆ ಮಹಾದಾಯಿ ಕಣಿವೆ ತಿರುವಿನಿಂದ ಕಳಸಾ, ಬಂಡೂರಿ, ಹಳತಾರ, ಗುರ್ಕಿ, ಚೂರ್ಲಾ, ಪೋಟ್ಲಾ ಈ ಎಲ್ಲ ಹಳ್ಳಗಳು # 85 ಕೋಟಿಯಲ್ಲಿ ಕಾಮಗಾರಿ ಅಂದೇ ಪೂರ್ಣಗೊಳ್ಳುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ ಭಾಗದ ನೀರಾವರಿ ಯೋಜನೆಗಳಿಗೆ ಆಸಕ್ತಿ ತೋರಿಸದಿದ್ದರಿಂದ 52 ವರ್ಷದಿಂದ ಈ ಭಾಗದ ರೈತರಿಗೆ ಈ ಯೋಜನೆ ಗಗನ ಕುಸಮವಾಗಿದೆ.
ನೀರು ಸಮುದ್ರ ಪಾಲು: ಈ ಎಲ್ಲ ಹಳ್ಳಗಳಿಂದ ಪ್ರತಿ ವರ್ಷ 210 ಟಿಎಂಸಿ ನೀರು ವ್ಯರ್ಥವಾಗಿ ನಮ್ಮ ಕರ್ನಾಟಕ ರಾಜ್ಯದ ನೆಲದಲ್ಲಿ 35 ಕೀಮಿ ಹರಿದು ಮುಂದೆ ಗೋವಾ ರಾಜ್ಯದ ಗಡಿ ಸೇರಿ ಆ ರಾಜ್ಯದವರೂ ಈ ಶುದ್ಧ ನೀರು ಉಪಯೋಗಿಸಿಕೊಳ್ಳದೇ ಇರುವುದರಿಂದ ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ಅದೇ ನೀರು ಉತ್ತರ ಕರ್ನಾಟಕ ಭಾಗಕ್ಕೆ ಬಂದರೆ ಇಲ್ಲಿನ ರೈತರು ಸಂಪೂರ್ಣ ತಮ್ಮ ಎಲ್ಲ ಜಮೀನುಗಳನ್ನು ನೀರಾವರಿ ಮಾಡಬಹುದು.
ಕೋರ್ಟ್ ಆದೇಶ: 2013ನೇ ವರ್ಷ ಮುಗಿಯುವುದರಲ್ಲಿ ಎಲ್ಲ ನದಿಗಳ ಜೋಡಣೆ ಕಾರ್ಯ ಮುಗಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ಮಾಡಿದ್ದರೂ ಕೂಡಾ ಈ ಎಲ್ಲ ಕಾನೂನುಗಳನ್ನು ಈಗಿನ ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಕಳಸಾ ಬಂಡೂರಿ ಯೋಜನೆಗೆ ನ್ಯಾಯಾಧೀಕರಣ ಮಾಡಿ ಕಾನೂನಿಗೆ ವಂಚನೆ ಮಾಡಿದೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕೊಟ್ನದಲ್ಲಿ ಡ್ಯಾಮ ಕಟ್ಟಿ ಅದರಿಂದ 4 ಟಿಎಂಸಿ ತೆಗೆದುಕೊಂಡರೆ 300 ಮ್ಯೆಗಾವ್ಯಾಟ್, ಸೂರಗ ಎನ್ನುವ ಕೊಳ್ಳಕ್ಕೆ ತಡೆಗೋಡೆಯನ್ನು ಕಟ್ಟಿದರೆ 300 ಮ್ಯೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ.
ಈ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹೆಚ್ಚು ಆಸಕ್ತಿ ವಹಿಸಿ ಪೂರ್ಣಗೊಳಿಸಿದರೆ 4 ಜಿಲ್ಲೆಗೆ ಅನುಕೂಲವಾಗಲಿದೆ. ನರಗುಂದ, ನವಲಗುಂದ, ರೋಣ, ರಾಮದುರ್ಗ, ಬದಾಮಿ, ಸವದತ್ತಿ, ಹುಬ್ಬಳ್ಳಿ, ಧಾರವಾಡ, ಗದಗ, ಈ ಎಲ್ಲ ತಾಲೂಕುಗಳಲ್ಲಿ ನೀರು ಒದಗಿಸಲು ಸಾಧ್ಯವಿದೆ.
ರಕ್ತದಲ್ಲಿ ಪತ್ರ: ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಈ ಭಾಗದಲ್ಲಿ ಪಾದಯಾತ್ರೆ ಮಾಡಿ ನರಗುಂದದಲ್ಲಿ ಈಗಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಈ ಭಾಗದ ಈಗಿನ ಎಲ್ಲ ಶಾಸಕರು ರಕ್ತದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಜನರನ್ನು ಆಕರ್ಷಿಸಿ ಮತ ಪಡೆದಿದ್ದರು. ಆದರೆ, ಇಂದಿಗೂ ಯೋಜನೆ ಪೂರ್ಣಗೊಳ್ಳದಿರುವುದು ಇಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಇಂದು ಮಠಾಧೀಶರ ಹೋರಾಟ: ಈ ಯೋಜನೆಗೆ ಚಾಲನೆ ನೀಡಿ 52 ವರ್ಷ ಗತಿಸಿದರೂ ಕೂಡ ಕೇವಲ ಕಳಸಾ ಹಳ್ಳಕ್ಕೆ # 49.5 ಕೋಟಿ ಬಿಡುಗಡೆ ಮಾಡಿದೆ. ಇನ್ನು ಬಂಡೂರಿಗೆ # 45.5 ಕೋಟಿ ಬಿಡುಗಡೆಗೊಳಿಸಿದರೂ ಕೂಡ ಇಲ್ಲಿವರೆಗೆ ಈ ಹಳ್ಳಕ್ಕೆ ಟೆಂಡರ್ ಕರೆದಿಲ್ಲ. ಈ ಯೋಜನೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಜ. 30ರಂದು ಈ ಭಾಗದ ಎಲ್ಲ ಮಠಾಧೀಶರು ಹೋರಾಟಕ್ಕೆ ಮುಂದಾಗಿರುವುದು 4 ಜಿಲ್ಲೆಯ ರೈತರ ಪಾಲಿಗೆ ದೊಡ್ಡ ಆನೆ ಬಲ ಬಂದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

