ಗದಗ

ಶರೀಫರ ತತ್ವಪದಗಳಲ್ಲಿ ಸತ್ಯದರ್ಶನದ ಒಳಿತು ಅಡಗಿದೆ: ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು

Published On :

ಗದಗ: ಸಂತ ಶಿಶುನಾಳ ಶರೀಫ ಶಿವಯೋಗಿಗಳು, ಸಿದ್ಧಾರೂಢರ ಸಮಕಾಲೀನರು, ಜನತೆಗೆ ಸರಳವಾಗಿ ಅಧ್ಯಾತ್ಮ ಅರುಹಿದ ಮಹಾನ್ ತತ್ವಜ್ಞಾನಿಗಳು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ಸಂಜೆ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2128ನೇ ಶಿವಾನುಭವದಲ್ಲಿ ಸಂತ ಶಿಶುನಾಳ ಶರೀಫ ಶಿವಯೋಗಿಗಳ ಜಯಂತಿ ಕಾರ್ಯಕ್ರಮದಲ್ಲಿ ವಿಕಲಚೇತನೆ ಶರಣೆ ಈರಮ್ಮ ಮಾನ್ವಿ ಬರೆದ ಅಂಗದೊಳು ಲಿಂಗದ ಬೆಳಕು ವಚನಕಿರು ಗ್ರಂಥ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ಶರೀಫ ಶಿವಯೋಗಿಗಳು, ಸಿದ್ಧಾರೂಢರು ಬರೆದು ಹಾಡಿದ ತತ್ವಪದಗಳಲ್ಲಿ ಸತ್ಯದರ್ಶನದ ಒಳತಿರುಳಿದೆ. ಅಂಥ ಶಿವಯೋಗಿಗಳು ಕನ್ನಡ ನಾಡಿನ ಆಧ್ಯಾತ್ಮ, ಸಾಹಿತ್ಯ, ಶರಣ ಚಿಂತನ ಲೋಕಕ್ಕೆ ನೀಡಿದ ಕೊಡುಗೆ ಮರೆಯಲಾಗದು. ನವಲಗುಂದ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ, ಶರೀಫರು, ಸಿದ್ಧಾರೂಢರಾದಿಯಾಗಿ ಅಂದು ಒಂದೆ ಕಾಲದಲ್ಲಿ ಮಹಾಮಹಿಮರು ಇದ್ದುದು ಸುವರ್ಣಯುಗ. ಶರೀಫರು ಗುರುಗೋವಿಂದಭಟ್ಟರ ಶಿಷ್ಯರಾಗಿ ಜಾತಿ ಅಳಿದು ನೀತಿ ಅರುಹಿ, ಜನಜೀವನದ ನೋವು ಕರಗಿಸಿ ನಲಿವು ತಂದರು. ಜ್ಞಾನವನ್ನು ಸರಳವಾಗಿ ಅರುಹಿ ಎಲ್ಲರಲ್ಲಿ ಪ್ರೀತಿ, ವಿಶ್ವಾಸ, ಭಾವೈಕ್ಯ ಸಾರಿದ ಶರೀಫರು ಅಚ್ಚ ಕನ್ನಡದಲ್ಲಿ ಬರೆದ ತತ್ವಪದಗಳು ವೈಚಾರಿಕ ಸಂದೇಶದ ಕಾರಣ ಜನಪ್ರಿಯತೆ ಉಳಿಸಿಕೊಂಡಿವೆ. ಶರೀಫರು ಗದಗ ಜಿಲ್ಲೆ ನಾರಾಯಣಪುರದ ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಗ್ರಂಥವನ್ನು ಗೌರವಿಸುತ್ತಿದ್ದರು ಎಂದರು.
ಕೊತಬಾಳದ ಅರುಣೋದಯ ಕಲಾತಂಡದ ಶಂಕ್ರಣ್ಣ ಸಂಕಣ್ಣವರ ಸಂಗಡಿಗರು ಶರೀಫರ ತತ್ವಪದಗಳನ್ನು ಹಾಡಿದರು. ಬೆಂಗಳೂರಿನ ಎಂ.ಜಿ. ಮೋಹನ್, ಶಶಿಕಲಾ ಆರಾಧ್ಯ ದಂಪತಿಯನ್ನು ಶ್ರೀಗಳು  ಸನ್ಮಾನಿಸಿದರು. ಪ್ರಕಾಶ ಕರಿಸೋಮನಗೌಡ್ರ, ಮೃತ್ಯುಂಜಯ ಸಂಕೇಶ್ವರ, ಶಿವಲೀಲಮ್ಮ ಕುರಡಗಿ, ವೀರಣ್ಣ ಹೊನಗಣ್ಣವರ, ಗುರುಬಸವಲಿಂಗ ತಡಸದ, ಪ್ರಭಯ್ಯ ಹಿರೇಮಠ, ಪ್ರೊ. ಎಸ್.ಎನ್. ಆದಿ, ಸಿ.ಆರ್. ಮುಧೋಳಮಠ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.