ಗದಗ

ಇಂದಿನಿಂದ ಉಚಿತತರಬೇತಿ ಪ್ರಾರಂಭ

Published On :

ಗದಗ: ಎಸ್.ಟಿ. ಹಿರೇಮಠ ಮೆಮೋರಿಯಲ್ ಟ್ರಸ್ಟ್‌ನಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಂತಹ ಕೋರ್ಸಗಳಾದ ಕಂಪ್ಯೂಟರ್ ಬೇಸಿಕ್, ಡಿಟಿಪಿ, ಟ್ಯಾಲಿ, ಹಾರ್ಡವೇರ್ ಮತ್ತು ನೆಟವರ್ಕಿಂಗ್, ಸ್ಪೋಕನ್ ಇಂಗ್ಲಿಷ್, ಬ್ಯಾಂಕಿಂಗ್ ಮತ್ತು ಅಕೌಂಟಿಂಗ್, ಡಿಜಿಟಲ್ ಫೋಟೊಗ್ರಾಫಿ ಮತ್ತು ವಿಡಿಯೋಗ್ರಾಪಿ, ಮೊಬೈಲ್ ಫೋನ್ ರಿಪೇರಿ, ಟೇಲರಿಂಗ್, ಡಾಲ್ ಮೇಕಿಂಗ್, ಫ್ಯಾಶನ್ ಡಿಜೈನಿಂಗ್ ಮುಂತಾದ ಉಚಿತ ತರಬೇತಿ ಜು.18ರಿಂದ ಪ್ರಾರಂಭಿಸಲಾಗುವುದು. ತರಬೇತಿ ನಂತರ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿ(ಎನ್‌ಸಿವಿಟಿ)ಯಿಂದ ರಾಷ್ಟ್ರೀಯ ಪ್ರಮಾಣ ಪತ್ರ ನೀಡಲಾಗುವುದು ಹಾಗೂ ತರಬೇತಿಯ ನಂತರ ಉದ್ಯೋಗವನ್ನು ದೊರಕಿಸಿಕೊಡಲಾಗುವುದು. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಜು. 18ರೊಳಗಾಗಿ ಎಸ್.ಟಿ. ಹಿರೇಮಠ ಮೆಮೋರಿಯಲ್ ಟ್ರಸ್ಟ್, ಗಿರಿಜಾ ಶಂಕರ ಹಾಸ್ಟೆಲ್, ಮೊದಲನೇ ಮಹಡಿ, ಜೆ.ಟಿ. ಕಾಲೇಜ್ ಎದುರುಗಡೆ, ಹಾತಲಗೇರಿ ನಾಕಾ, ಗದಗ ಇಲ್ಲಿ ಖುದ್ದಾಗಿ ಬಂದು ತಮ್ಮ ಪ್ರವೇಶ ಪಡೆಯಬೇಕು. ಮಾಹಿತಿಗಾಗಿ 9883728686, 9886603126 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.