ವಾರ ಕಳೆದರೂ ಚಾಲನೆ ಸಿಗದ ಅನ್ನಭಾಗ್ಯ
ಗಜೇಂದ್ರಗಡ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಎಲ್ಲಡೆ ಜಾರಿಯಾಗಿ ವಾರ ಕಳೆದರೂ ರು. 1ಗೆ ಕೆಜಿ ಪಡಿತರ ಅಕ್ಕಿ ಗಜೇಂದ್ರಗಡ ಬಡಜನರ ಪಾಲಿಗೆ ಇನ್ನೂ ದೊರಕಿಲ್ಲ. ಕಾರಣ ಶಾಸಕ ಜಿ.ಎಸ್. ಪಾಟೀಲ ಬರುವಿಕೆಗೆ ಕಾಯುತ್ತಿದ್ದಾರೆ.
ಪಟ್ಟಣ ಹೊರತುಪಡಿಸಿದರೆ ಸುತ್ತಲಿನ ಗ್ರಾಮದಲ್ಲಿ ನ್ಯಾಯಬೆಲೆ ಕೇಂದ್ರದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ ಚಾಲನೆ ನೀಡಿದ್ದಾರೆ. ಆದರೆ, ಗಜೇಂದ್ರಗಡದಲ್ಲಿ ಈವರೆಗೂ ಯೋಜನೆಗೆ ಚಾಲನೆ ನೀಡಿಲ್ಲ. ಗಜೇಂದ್ರಗಡದ ಎಲ್ಲ ಪಡಿತರ ಕೇಂದ್ರಗಳಿಗೆ ಆಹಾರ ಧಾನ್ಯ ದಾಸ್ತಾನು ಮಾಡಲಾಗಿದೆ. ಶಾಸಕ ಜಿ.ಎಸ್. ಪಾಟೀಲರು ಬೆಂಗಳೂರನಿಂದ ಬಂದ ತಕ್ಷಣ ಫಲಾನುಭವಿಗಳಗೆ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡುವರು ಎಂದು ಶಿರಸ್ತೇದಾರ್ ಎಂ.ಬಿ. ಮಠದ ತಿಳಿಸಿದರು.
ನಾಗರಸಕೊಪ್ಪದಲ್ಲಿ ಚಾಲನೆ: ಗ್ರಾಮದಲ್ಲಿ ಅನ್ನಭಾಗ್ಯ ಯೋಜನೆಗೆ ಕಾಂಗ್ರೆಸ್ ಮುಖಂಡ ಮಿಥುನ್ ಪಾಟೀಲ ಈಚೆಗೆ ಚಾಲನೆ ನೀಡಿದರು. ಬಡವರ ಹಿತ ಕಾಯುವದು ಪಕ್ಷದ ಮುಖ್ಯ ಗುರಿಯಾಗಿದೆ. ದುರ್ಬಲ ವರ್ಗ ಜನರ ಕಲ್ಯಾಣ ಕಾಂಗ್ರೆಸ್ ಸರ್ಕಾರ ಕರ್ತವ್ಯವಾಗಿದೆ. ಈ ಹಿನ್ನೆಲೆ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ನ್ಯಾಯವಾದಿ ಶ್ರೀಕಾಂತ ಅವಧೂತ, ಸುಭಾನಸಾಬ ಆರಗಿದ್ದಿ, ಹನುಮಪ್ಪ ಹೊರಪೇಟಿ, ಎಂ.ಡಿ. ಭೋಸಲೆ, ಐ.ಎಚ್. ಭಾಗವಾನ್, ಬಸನಗೌಡ ಪಾಟೀಲ, ಹಾಜಿ ಮೌಲಾಸಾಬ ಭಾಗವಾನ, ಎಂ.ಡಿ. ಭೋಸಲೆ, ಹುಸೇನಸಾಬ ಭಾಗವಾನ್, ಐ.ಎಚ್. ಭಾಗವಾನ, ಕಲ್ಲಪ್ಪ ಕೇರಿ, ಕಳಕಪ್ಪ ಮಾದರ, ಮುದಿಯಪ್ಪ ಕರಡಿ, ವೀರಣ್ಣ ಸೊಬರದ, ಶಣ್ಮುಖಪ್ಪ ಕರಡಿ, ಗ್ರಾಪಂ ಅಧ್ಯಕ್ಷ ಹನುಮಪ್ಪ ಕಮ್ಮಾರ, ಸದಸ್ಯರು, ಪಿಡಿಓ ಎಂ.ಆರ್. ಪತ್ತಾರ, ಕಾರ್ಯದರ್ಶಿ ಎಸ್.ಆರ್. ಸಂಕನೂರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

